ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದ್ದು, ಬುಧವಾರ 279 ಮಂದಿಗೆ ಡೆಂಘೀ ದೃಢಪಟ್ಟಿದೆ. ಒಟ್ಟು ಡೆಂಘೀ ಪ್ರಕರಣಗಳ ಸಂಖ್ಯೆ 20,202ಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ 1943 ಪರೀಕ್ಷೆ ನಡೆಸಿದೆ. ಈ ಪೈಕಿ ವರ್ಷದೊಳಗಿನ 4 ಮಂದಿ ಮಕ್ಕಳು, 18 ವರ್ಷದೊಳಗಿನ 97 ಮಂದಿ, 18 ವರ್ಷ ಮೇಲ್ಪಟ್ಟ 178 ಮಂದಿ ಸೇರಿ 279 ಮಂದಿಗೆ ಡೆಂಘೀ ದೃಢಪಟ್ಟಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1978ಕ್ಕೆ ಏರಿಕೆಯಾಗಿದೆ. ಈ ಪೈಕಿ 1708 ಮಂದಿ ಮನೆಯಲ್ಲೇ ಚಿಕಿತ್ಸೆ ಯಲ್ಲಿದ್ದು, 270 ಮಂದಿ ಆಸ್ಪತ್ರೆಗೆ ದಾಖಲಾ ಗಿದ್ದಾರೆ. ಆರು ಮಂದಿ ಐಸಿಯುನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರದ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 122, ಮಂಡ್ಯ, ಬಳ್ಳಾರಿ ಜಿಲ್ಲೆ ಯಲ್ಲಿ ತಲಾ 20, ತುಮಕೂರು 18, ಕಲಬುರಗಿ 15, ಬೆಳಗಾವಿ 13, ಕೋಲಾರ, ದಾವಣಗೆರೆ ತಲಾ 11, ಉಡುಪಿ, ವಿಜಯನಗರ ತಲಾ 10, ಹಾವೇರಿ 7, ಬಾಗಲಕೋಟೆ 5, ಹಾಸನ, ಬೀದರ್, ಯಾದಗಿರಿ ತಲಾ 3, ಶಿವಮೊಗ್ಗ, ಚಿಕ್ಕಮಗಳೂರು ತಲಾ 2, ಕೊಪ್ಪಳ, ಗದಗ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.