ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಆರೋಪ ಕೇಳಿಬಂದಿದೆ. ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಸಿಎಂ ವಿರುದ್ಧ ತನಿಖೆಗೂ ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಮುಡಾ ಕಂಟಕ ಎದುರಾಗಿದೆ. ಏತನ್ಮಧ್ಯೆ, ಸಿಎಂ ರಾಜೀನಾಮೆ ಮಾತು ಜೋರಾಗಿ ಕೇಳಿಬರುತ್ತಿವೆ. ಇದರ ಮಧ್ಯೆ ಯೇ ವಿಪಕ್ಷ ನಾಯಕ ಆರ್.. ಅಶೋಕ್ (R Ashok) ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ.
Join Our Telegram: https://t.me/dcgkannada
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ಒಳಗಡೆ ಡಿ.ಕೆ ಶಿವಕುಮಾರ್ (DK Shuvakumar) ಮುಖ್ಯಮಂತ್ರಿ ಆಗುತ್ತಾರೆ ಎಂದು ಅಜ್ಜಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ, ಅದು ಕಾಂಗ್ರೆಸ್ ಪಕ್ಷದ ಒಳಗಿನ ವಿಚಾರ, ನಮಗೆ ಸಂಬಂಧವಿಲ್ಲ. ಗೃಹ ಸಚಿವ ಜಿ. ಪರಮೇಶ್ವರ, ಮಲ್ಲಿಕಾರ್ಜುನ್ ಖರ್ಗೆ, ಎಂ.ಬಿ ಪಾಟೀಲ್ ಮತ್ತು ಡಿಕೆ ಶಿವಕುಮಾರ್ ಯಾರು ಸಿಎಂ ಆಗಬೇಕು ಎಂಬುವುದು ಅವರ ಪಕ್ಷದ ನಿರ್ಧಾರ ಎಂದಿದ್ದಾರೆ.
ನಮ್ಮ ಹೋರಾಟದ ಫಲವಾಗಿ ಸಚಿವರರೊಬ್ಬರ ತಲೆತಂಡವಾಗಿದೆ. ಅದೇ ರೀತಿ ಸಿಎಂ ವಿಕೆಟ್ ಕೂಡ ಬೀಳಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Accident: ಟೋಲ್ ಸಿಬ್ಬಂದಿ ಎಡವಟ್ಟು.. ಸರಣಿ ಅಪಘಾತ..
ಇತ್ತ, ಡಿಕೆಶಿ ಸಿಎಂ ಬೆನ್ನಿಗೆ ಕಲ್ಲುಬಂಡೆ ತರ ನಿಲ್ಲುವೆ.. ಅವರೇ ನಮ್ಮ ನಾಯಕ. ಅವರು ಏಕೆ ರಾಜೀನಾಮೆ ನೀಡಬೇಕು? ಎಂದು ಸುದ್ದಿಗೋಷ್ಠಿಯಲ್ಲಿ ಅಬ್ಬರಿಸಿದ್ದಾರೆ.
ಏನೇ ಆದರೂ ರಾಜಕಾರಣದಲ್ಲಿ ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು ಎಂಬುದು ವಾಸ್ತವದ ಮಾತಾಗಿದೆ ಎನ್ನುತ್ತಾರೆ ರಾಜಕೀಯ ಪಂಡಿತರು.
‘ಸಿದ್ದು ಸಿಎಂ ಆಗಿ ಮುಂದುವರಿದ್ರೆ..’ ರಾಜಕೀಯ ಸಂಚಲನ ಸೃಷ್ಟಿಸಿದ ಕೇಂದ್ರ ಸಚಿವ ಸೋಮಣ್ಣ ಹೇಳಿಕೆ..
ತುಮಕೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆದರೆ ನನ್ನಷ್ಟು ಖುಷಿ ಪಡುವವರು ಯಾರೂ ಇಲ್ಲ ಎನ್ನುವ ಮೂಲಕ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ (V Somanna) ರಾಜಕೀಯ ಸಂಚಲನವನ್ನು ಸೃಷ್ಟಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನವರು ನುರಿತ ರಾಜಕಾರಣಿ. ಕೆಲವು ಸಂದರ್ಭದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನಿನ ಕೆಲಸ ಕಾನೂನು ಮಾಡುತ್ತದೆ ಎಂದರು.
ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ‘ನನಗೂ 45 ವರ್ಷ ರಾಜಕೀಯ ಅನುಭವವಿದೆ. ಒತ್ತಾಯ ಮಾಡುವುದು, ಮತ್ತೊಂದು ಮಾಡೋದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಸಾಹೇಬರು ಬುದ್ದಿವಂತರಿದ್ದಾರೆ. ಉಳಿದದ್ದನ್ನು ಕಾನೂನು ನೋಡಿಕೊಳ್ಳುತ್ತದೆ’ ಎಂದರು.