ಮುದ್ದೇಬಿಹಾಳ : ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತಮ್ಮ ವೃತ್ತಿ ನಿಷ್ಠೆ ತೋರುತ್ತಿರುವ ಎಲ್ಲ ವೈದ್ಯರ ಸೇವೆ ಸ್ಮರಣೀಯವಾದದ್ದು ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿದ್ಯಾ ತಡಸದ ಹೇಳಿದರು.
ಪಟ್ಟಣದ ಕುಂಟೋಜಿ ರಸ್ತೆಯಲ್ಲಿರುವ ಬಸವ ಇಂಟರ್‌ನ್ಯಾಶನಲ್ ಸ್ಕೂಲನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರು ವೈದ್ಯರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.
ಶಾಲೆಯ ಪ್ರಾಚಾರ್ಯೆ ಪ್ರಭಾ ಚಿನಿವಾರ ಮಾತನಾಡಿ, ಸಮಾಜದ ಎಲ್ಲ ರಂಗಗಳಲ್ಲೂ ಮಹಿಳೆ ಮುಂಚೂಣಿಯಲ್ಲಿದ್ದಾಳೆ. ಆಕೆಯ ಆರೋಗ್ಯದ ಕಾಳಜಿಯನ್ನು ಈ ಕ್ಷೇತ್ರದಲ್ಲಿರುವ ಪರಿಣತ ವೈದ್ಯರು ಮಾಡುತ್ತಿರುವುದು ಮಾದರಿಯಾದದ್ದು ಎಂದರು.
ಪಟ್ಟಣದ 15 ಮಹಿಳಾ ವೈದ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರಮುಖರಾದ ಗಾಯತ್ರಿ ದೇಶಪಾಂಡೆ, ರಾಜೇಶ್ವರಿ ಪಾಟೀಲ ನಡಹಳ್ಳಿ, ಚೌಡಮ್ಮ ಶಿವಯೋಗಿಮಠ, ಪಿಂಕಿ ಓಸ್ವಾಲ್, ಭಾಗ್ಯಶ್ರೀ ಬಿರಾದಾರ, ಜಯಾ ಸಾಲಿಮಠ, ಜಯಾ ಪುರಾಣಿಕಮಠ ಮೊದಲಾದವರು ಇದ್ದರು.