ಮುದ್ದೇಬಿಹಾಳ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದನ್ನು ಕೈಬಿಡಬೇಕು. ಮಕ್ಕಳನ್ನು ಕೇವಲ ಅಂಕ ತುಂಬುವ ಚೀಲವನ್ನಾಗಿ ಮಾಡುವ ಮನೋಭಾವದಿಂದ ಹೊರಬಂದು, ಅವರಲ್ಲಿ ಜ್ಞಾನ ಮತ್ತು ಸಾಧನೆಯ ಹಸಿವನ್ನು ಬೆಳೆಸಬೇಕು ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಹೇಳಿದರು.
ಪಟ್ಟಣದ ತಂಗಡಗಿ ರಸ್ತೆಯ ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಚಾಲೆಂಜ್ ನವೋದಯ ಕೋಚಿಂಗ್ ಕ್ಲಾಸಸ್‌ನಿಂದ ಹಮ್ಮಿಕೊಂಡಿದ್ದ ‘ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ’ ಹಾಗೂ ‘ಟ್ಯಾಲೆಂಟ್ ಅವಾರ್ಡ್ ಸ್ಕಾಲರ್‌ಶಿಪ್ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಾಲಕರು ಕೇವಲ ಫಲಿತಾಂಶದ ಹಿಂದೆ ಬೀಳದೆ, ಮಕ್ಕಳಲ್ಲಿ ಕೌಶಲ ಮತ್ತು ಜ್ಞಾನವೃದ್ಧಿಗೆ ಸಹಕರಿಸಬೇಕು. ಸಂಸ್ಕಾರಯುತ ಶಿಕ್ಷಣದೊಂದಿಗೆ ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಪಶು ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಭಜಂತ್ರಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ಮುಟ್ಟುವ ಕಡೆಗೆ ದೃಢವಾದ ಯೋಜನೆಯನ್ನು ಹೊಂದಿರಬೇಕು ಎಂದರು.
ಎಸ್.ಎನ್.ಡಿ. ಶಾಲೆಯ ಅಧ್ಯಕ್ಷ ಮಂಜುನಾಥ ಕೊಪ್ಪ ಮಾತನಾಡಿದರು.ದಿವ್ಯ ಸಾನಿಧ್ಯ ಶರಣಸೋಮನಾಳದ ಬಸವಲಿಂಗೇಶ್ವರ ಮಠದ ಶಿವಪುತ್ರ ಸ್ವಾಮೀಜಿ,ಕವಡಿಮಟ್ಟಿ ಹಿರೇಮಠದ ಬಸವಪ್ರಭು ಹಿರೇಮಠ, ದುರ್ಗಾದೇವಿ ಆಶ್ರಮದ ಉಪಾಸಕ ಲಾಲಲಿಂಗೇಶ್ವರ ಶರಣರು, ನಿವೃತ್ತ ಪ್ರಾಧ್ಯಾಪಕ ಎಸ್.ಎಸ್. ಹೂಗಾರ, ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಗುರು ಇಸ್ಮಾಯಿಲ್ ಮನಿಯಾರ, ಚಾಲೆಂಜ್ ನವೋದಯ ಕೋಚಿಂಗ್ ಶಾಲೆ ಅಧ್ಯಕ್ಷ ವೀರೇಶ ಹವಾಲ್ದಾರ, ಮುಖ್ಯಗುರುಮಾತೆ ವಿಜಯಲಕ್ಷ್ಮಿ ಹವಾಲ್ದಾರ,ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ವೀರೇಶ ಗುರುಮಠ ಮತ್ತಿತರರು ಉಪಸ್ಥಿತರಿದ್ದರು. ಟ್ಯಾಲೆಂಟ್ ಅವಾರ್ಡ್ ವಿಜೇತರು:ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 200 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 4ನೇ ತರಗತಿ: ಸಾನಿಧ್ಯಾ (ಪ್ರಥಮ), ಬೃಂದಾ ಅಲ್ಲಾಪುರ ಹಾಗೂ ಅಭಿಜ್ಞಾ (ದ್ವಿತೀಯ), ಅನ್ವಿತಾ ರಕ್ಕಸಗಿ (ತೃತೀಯ).5ನೇ ತರಗತಿ: ಸಾಕ್ಷಿ ವಡಗೇರಿ (ಪ್ರಥಮ), ಶಶಾಂಕ್ ಪಾಟೀಲ್ (ದ್ವಿತೀಯ), ವೀರೇಶ್ ಜಾಲಹಳ್ಳಿ (ತೃತೀಯ).
ಸಾಧಕರಿಗೆ ಪ್ರಶಸ್ತಿ ಗೌರವ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ‘ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಹೋರಾಟ ಕ್ಷೇತ್ರದಲ್ಲಿ ಪ್ರಶಾಂತ್ ಕಾಳೆ, ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತ ಬಸವರಾಜ ಈ. ಕುಂಬಾರ (ಚವನಭಾವಿ), ದೇಶ ಸೇವೆಯಲ್ಲಿ ಸೈನಿಕ ಬಸವರಾಜ ಎಸ್. ಶಿಕ್ಷಣ ಕ್ಷೇತ್ರದದಲ್ಲಿ ಪಿ.ಪಿ. ಮುರಡಿ, ಡಾ. ಎಸ್.ಎಸ್. ಒಡೆಯರ್, ಬಸಮ್ಮ ಪಟ್ಟಣಶೆಟ್ಟಿ, ಶಾಂತಾ ಎಚ್., ಶಾಮಿಮಬಾನು ತೆಲಸಂಗ, ಮಹಮ್ಮದಯೂಸುಫ್ ಅವಟಿ, ಅರವಿಂದ್ ಬಿರಾದಾರ, ಜಿ.ವಿ. ಹಾದಿಮನಿ, ಚಾಮುಂಡೇಶ್ವರಿ ಹಿರೇಮಠ, ಬಸವರಾಜ ಕಾಳಪ್ಪನವರ, ಎಂ.ವೈ. ಕಳ್ಳಿಮನಿ, ಶರಣಮ್ಮ ಬಿರಾದಾರ, ಅಂಬಿಕಾ ಕರಕೊಪ್ಪಗೋಳ, ದೀಪಾ ಕೇಶ್ವಾಪೂರ, ರವಿ ಲಮಾಣಿ, ಬಸವರಾಜ್ ಮೂಲಿಮನಿ, ಆಯೇಷಾ ನದಾಫ್, ಕೆ.ಎಂ. ಲಮಾಣಿ, ಪಿ.ಎಂ. ಕೊಪ್ಪದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.







