ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾದ ಆಕಾಶ್

ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾದ ಆಕಾಶ್

ಮುದ್ದೇಬಿಹಾಳ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಹತ್ತು ವರ್ಷದ ಬಾಲಕನೋರ್ವನ ಕಣ್ಣುಗಳನ್ನು ದಾನ ಮಾಡುವ ಮೂಲಕ ಆತನ ಕುಟುಂಬವು ಸಾವಿನಲ್ಲೂ ಸಾರ್ಥಕತೆ ಮೆರೆದ ಮಾನವೀಯ ಘಟನೆ ನಗರದ ಬಿ.ಎಲ್.ಡಿ.ಇ (ಬಿಎಂ ಪಾಟೀಲ) ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ.

ಮುದ್ದೇಬಿಹಾಳ ತಾಲ್ಲೂಕಿನ ಮಲ್ಲಪ್ಪ ಹರಿಜನ ಹಾಗೂ ಸುಜಾತಾ ದಂಪತಿಯ ಏಕೈಕ ಪುತ್ರ ಆಕಾಶ ಹರಿಜನ (10) ಕಳೆದ ಮಾರ್ಚ್ 22ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದನು. ಕೂಡಲೇ ಬಾಲಕನನ್ನು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕನ ಮೆದುಳು ನಿಷ್ಕಿçಯಗೊಂಡಿತ್ತು.ಕುಟುಂಬದ ಉದಾತ್ತ ನಿರ್ಧಾರ : ಮಗನ ಮೆದುಳು ನಿಷ್ಕ್ರಿಯಗೊಂಡ ಸುದ್ದಿ ತಿಳಿದ ಪೋಷಕರು, ದುಃಖದ ನಡುವೆಯೂ ಅಂಗಾOಗ ದಾನ ಮಾಡಲು ಮುಂದೆ ಬಂದಿದ್ದರು.

ಇಂದು (ಮಾರ್ಚ್ 25) ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ, ‘ದೇಹ ಬೆಂಕಿಯಲ್ಲಿ ಸುಟ್ಟು ಹೋಗುವ ಬದಲು ಅಂಧರ ಬಾಳಿಗೆ ಬೆಳಕಾಗಲಿ” ಎಂಬ ಉದಾತ್ತ ಉದ್ದೇಶದಿಂದ ಪೋಷಕರು ನೇತ್ರದಾನ ಮಾಡಲು ನಿರ್ಧರಿಸಿ ಅದರಂತೆ ಬಾಲಕನ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ ಎಂದು ಢವಳಗಿ ಗ್ರಾಮ ಪಂಚಾಯ್ತಿ ನೌಕರ ಎಂ.ಕೆ,ಗುಡಿಮನಿ ತಿಳಿಸಿದರು.

ಮೃತ ಆಕಾಶ ತಂದೆಗೆ ಒಬ್ಬನೇ ಮಗನಾಗಿದ್ದು, ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.
ಗಣ್ಯರ ಸಂತಾಪ: ಬಾಲಕನ ಕುಟುಂಬದ ಈ ಮಹತ್ವದ ನಿರ್ಧಾರಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಮಂಡಳಿ, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ, ಬಾಲಕನ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಸಂಚಾಲಕ ಪ್ರೀತು ದಶವಂತ ಪ್ರಾರ್ಥಿಸಿದರು

Latest News

ಪಿಎಸ್‌ಐ ಸಂಜಯ ತಿಪರೆಡ್ಡಿಗೆ ಸನ್ಮಾನ:                                       ಜೀವ ಪಣಕ್ಕಿಟ್ಟು ಕಳ್ಳರನ್ನು ಬಂಧಿಸಿದ ದಕ್ಷ ಅಧಿಕಾರಿ ತಿಪರೆಡ್ಡಿ

ಪಿಎಸ್‌ಐ ಸಂಜಯ ತಿಪರೆಡ್ಡಿಗೆ ಸನ್ಮಾನ: ಜೀವ ಪಣಕ್ಕಿಟ್ಟು ಕಳ್ಳರನ್ನು ಬಂಧಿಸಿದ ದಕ್ಷ ಅಧಿಕಾರಿ ತಿಪರೆಡ್ಡಿ

ಮುದ್ದೇಬಿಹಾಳ : ಜೀವ ಪಣಕ್ಕಿಟ್ಟು ಅಂತರಾಜ್ಯದ ಕಳ್ಳರನ್ನು ಹೆಡೆಮುರಿ ಕಟ್ಟಿದ ದಕ್ಷ ಅಧಿಕಾರಿ ಸಂಜಯ

ಹೆಸ್ಕಾಂ ಎಇಇ ಆರ್.ಆರ್.ಹಂಡಿ ಭಾಗಿ :                                              ಹೆಸ್ಕಾಂ ಕಚೇರಿಯಲ್ಲಿ ನಾರಾಯಣಗುರು,ನೂಲಿಯ ಚಂದಯ್ಯ ಜಯಂತಿ

ಹೆಸ್ಕಾಂ ಎಇಇ ಆರ್.ಆರ್.ಹಂಡಿ ಭಾಗಿ : ಹೆಸ್ಕಾಂ ಕಚೇರಿಯಲ್ಲಿ ನಾರಾಯಣಗುರು,ನೂಲಿಯ ಚಂದಯ್ಯ ಜಯಂತಿ

ಮುದ್ದೇಬಿಹಾಳ : ಬ್ರಹ್ಮಶ್ರೀ ನಾರಾಯಣಗುರು ಹಾಗೂ ಶರಣ ನೂಲಿಯ ಚಂದಯ್ಯನವರು ಕಾಯಕದ ಮಹತ್ವ ಸಾರುವ

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

ಮುದ್ದೇಬಿಹಾಳ : ರಾಜ್ಯಾದ್ಯಂತ ಬರದ ಪರಿಸ್ಥಿತಿ ಇದ್ದರೂ ವಿಜಯಪುರ ಜಿಲ್ಲೆಯಲ್ಲಿ ಕೇವಲ ಮೂರು ತಾಲ್ಲೂಕುಗಳನ್ನು

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಎಂ.ಎಸ್.ಬಡದಾನಿ ಅವರಿಗೆ ತಾಲ್ಲೂಕಿನ ಅನುದಾನಿತ

ಕಲಾವಿದರ ಸಂಘ ಉದ್ಘಾಟನೆ:                                                           ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಕಲಾವಿದರ ಸಂಘ ಉದ್ಘಾಟನೆ: ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿ ಜನಪದ ಹಾಡುಗಳಲ್ಲಿ ಅಶ್ಲೀಲತೆ ಹೆಚ್ಚುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು ಎಂದು ಎಲ್ಲರೂ ಹೇಳುತ್ತಾರೆ.ಆದರೆ ಜನರು,ಸಮಾಜ ಬಯಸುವುದನ್ನೇ ಬಡ ಕಲಾವಿದರು ನೀಡುತ್ತಾರೆ.ಮೊದಲು ಸಮಾಜ ಯಾವುದನ್ನು ಕಲಾವಿದರಿಂದ ಬಯಸಬೇಕು ಎಂಬುದನ್ನು ಆತ್ಮಾವಲೋಕನಕ್ಕೆ ಇದು ಸಕಾಲ ಎಂದು ಹಾಸ್ಯ ಕಲಾವಿದ ಗೋಪಾಲ ಹೂಗಾರ ಹೇಳಿದರು. ಪಟ್ಟಣದ ಓಸ್ವಾಲ್ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಪಂ.ಪುಟ್ಟರಾಜ ಗವಾಯಿಗಳ ಜನಪದ ಹಾಗೂ ಸಾಂಸ್ಕೃತಿಕ ಕಲಾವಿದರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬಹುತೇಕ ಕಡೆಗಳಲ್ಲಿ

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ  ಮೆಚ್ಚುಗೆ

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ

ಮುದ್ದೇಬಿಹಾಳ : ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಕೊಡುವ ಪ್ರಮಾಣ ಪತ್ರವೇ ನಿಮ್ಮ ಸೇವೆಯ ನಿಜವಾದ ಅರ್ಹತೆಯಾಗಿದೆ.ಒಳ್ಳೆಯ ಸೇವೆ ನೀಡುವುದನ್ನು ಮುಂದುವರೆಸಿಕೊoಡು ಸಾಗಿ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಆಸ್ಪತ್ರೆಯ ಮೂಲಸೌಕರ‍್ಯಗಳನ್ನು ವೀಕ್ಷಿಸಿ ಬಾಣಂತಿಯರ ಕೊಠಡಿ,ಹೆರಿಗೆ ಕೊಠಡಿಗಳನ್ನು ಪರಿಶೀಲನೆ ನಡೆಸಿದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ರೋಗಿಗಳನ್ನು ಅವರ ಸಂಬoಧಿಕರನ್ನು ಮಾತನಾಡಿಸಿ ಆಸ್ಪತ್ರೆಯ ಸೇವೆ ಬಗ್ಗೆ ಮೆಚ್ಚುಗೆ