ಸಗಣಿ ಎರಚಿಕೊಂಡು ಓಕುಳಿ ಆಟ! ಗದಗನಲ್ಲೊಂದು ವಿಶಿಷ್ಟ ಆಚರಣೆ (ವಿಡಿಯೋ ನೋಡಿ)

ಸಗಣಿ ಎರಚಿಕೊಂಡು ಓಕುಳಿ ಆಟ! ಗದಗನಲ್ಲೊಂದು ವಿಶಿಷ್ಟ ಆಚರಣೆ (ವಿಡಿಯೋ ನೋಡಿ)

ಗದಗ : ಓಕುಳಿ ಆಟ ಅಂದ್ರೆ ತಲೆಯಲ್ಲಿ ಬರೋದು ಬಣ್ಣದೋಕುಳಿ. ರಾಜ ಮಹರಾಜರ ಕಾಲದಲ್ಲಿ ಹಾಲಿನ ಓಕುಳಿಯೂ ನಡೆಯುತ್ತಿತ್ತು ಅನ್ನೋದನ್ನ ಕೇಳಿರ್ತೇವೆ. ಆದ್ರೆ, ಗದಗನಲ್ಲಿ ಸಗಣಿಯ ಓಕುಳಿ (Dung spitting game) ನಡೆಯುತ್ತೆ ಅನ್ನೋದು ವಿಶೇಷವಾಗಿದೆ.

Join Our Telegram: https://t.me/dcgkannada

ಗದಗ ನಗರದ ಗಂಗಾಪುರ ಪೇಟೆಯಲ್ಲಿ ಶತಮಾನದಿಂದ ಸಗಣಿ ಆಟದ ವಿಶಿಷ್ಟ ಆಚರಣೆ ನಡೆದುಕೊಂಡು ಬಂದಿದೆ. ನಾಗರ ಪಂಚಮಿ ಹಬ್ಬದಂದು ಹುತ್ತಕ್ಕೆ ಹಾಲೆರುದು ನಾಗದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಜನರು. ಮಾರನೇ ದಿನ ಸಗಣಿ ಎರಚಾಟದ ವಿಶಿಷ್ಠ ಆಚರಣೆ ನಡೆಸ್ತಾರೆ. ವಿಶೇಷ ಓಕುಳಿ ಆಟಕ್ಕೆ ತಿಂಗಳಿಂದ ಪೂರ್ವಭಾವಿಯಾಗಿ ಸಗಣಿ ಸಂಗ್ರಹಣೆ ಕೆಲಸ ನಡೆಯುತ್ತೆ. ದನ ಕರುಗಳಿರುವ ಮನೆಗಳಿಗೆ ತೆರಳುವ ಯುವಕರು ಸಗಣಿ ಸಂಗ್ರಹಿಸುತ್ತಾರೆ.

ಇದನ್ನೂ ಓದಿ: Murder case: ಶೆಡ್‌ನಲ್ಲಿ ನಡೀತು ಮತ್ತೊಂದು ಭೀಕರ ಹತ್ಯೆ..! ಇಲ್ಲಿ ಸ್ನೇಹಿತನೇ ಕೊಲೆಗಾರ

ಪಂಚಮಿ ಮಾರನೇ ದಿನ ನಡೆಯೋ ಓಕುಳಿಯಲ್ಲಿ ಬಡಾವಣೆ ಜನ ಉತ್ಸಾಹದಿಂದ ಆಚರಿಸ್ತಾರೆ. ಬಡಾವಣೆಯ ಮುಖ್ಯರಸ್ತೆಯಲ್ಲಿ ಸಗಣಿಯ 20 ಗುಂಪುಗಳನ್ನು ಹಾಕಿ ಅವುಗಳ ಮೇಲೆ ವಿವಿಧ ಬಣ್ಣಗಳನ್ನು ಹಾಕಲಾಗುತ್ತೆ. 12 ರಿಂದ 16 ಜನ ಯುವಕರು ಎರಡು ತಂಡ ರಚಿಸಿ ಹತ್ತಿರದ ದೈವದವರ ತೋಟದಲ್ಲಿ ಸಗಣೆ ಆಟಕ್ಕೆ ಸಿದ್ಧತೆ ನಡೆಸ್ತಾರೆ. ಚಿತ್ರ ವಿಚಿತ್ರ ಬಟ್ಟೆ ಹಾಕಿಕೊಂಡು ಬದನೆಕಾಯಿ, ಈರುಳ್ಳಿ, ಹಿರೇಕಾಯಿ, ಟೊಮೆಟೊ, ಸೇರಿದಂತೆ ವಿವಿಧ ತರಕಾರಿಗಳಿಂದ ಸಿದ್ಧವಾದ ಹಾರ ಹಾಕಿಕೊಳ್ಳುವ ಯುವಕರು, ತಂಡ ರಚಿಸಿಕೊಂಡು ಪರಸ್ಪರ ಸಗಣಿ ಎರಚಿ ಖುಷಿ ಪಡ್ತಾರೆ.

ರೈತ ಸಮುದಾಯ ಸಗಣಿಗೆ (Dung spitting game) ಬಂಗಾರದ ಸ್ಥಾನಮಾನ ನೀಡುತ್ತೆ. ಪವಿತ್ರತೆಯ ಸಂಕೇತವಾದ ಸಗಣಿಯನ್ನ ಕೀಳರಮೆಯಿಂದ ಕಾಣದೆ ಬಣ್ಣದ ರೀತಿ ಬಳಸುವುದೇ ಈ ಓಕುಳಿ ವಿಶೇಷತೆಯಾಗಿದೆ. ಸಗಣಿ ಮೈಮೇಲೆ ಹಾಕಿಕೊಳ್ಳುವುದರಿಂದ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ನೂರಾರು ವರ್ಷದಿಂದ ನಡೆದುಕೊಂಡು ಬಂದಿರೋ ವಿಶೇಷ ಆಚರಣೆ ಇಂದಿಗೂ ಮುಂದುವರೆದಿದೆ. ಸಾಂಸ್ಕೃತಿಕ ಸಂಕೇತದಿಂತಿರುವ ಸಗಣಿ ಓಕುಳಿ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆ ಹೆಚ್ಚಿಸಿಕೊಳ್ಳುತ್ತಿದೆ. ಗೋ ಮಾತೆಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಹಾಗೂ ಪೂರ್ವಿಕರ ಸಂಸ್ಕೃತಿ ಮುಂದುವರೆಸಿಕೊಂಡು ಹೋಗ್ತಿರೋದು ನಿಜಕ್ಕೂ ವಿಶೇಷವಾಗಿದೆ.

Latest News

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: ನಿಮಗೆ ತಕ್ಷಣ ಹಣದ ಅವಶ್ಯಕತೆ ಇದೆಯಾ? ಶ್ಯೂರಿಟಿ ಇಲ್ಲದೆ ಸಾಲ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಮುದ್ದೇಬಿಹಾಳ : ಅನಿರೀಕ್ಷಿತ ಫಲಿತಾಂಶವನ್ನು ಇಲ್ಲಿನ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ನೂತನ

Prize Money Scholarship: ವಿದ್ಯಾರ್ಥಿಗಳ ಖಾತೆಗೆ 35 ಸಾವಿರ ಜಮಾ!

Prize Money Scholarship: ವಿದ್ಯಾರ್ಥಿಗಳ ಖಾತೆಗೆ 35 ಸಾವಿರ ಜಮಾ!

Prize Money Scholarship 2025: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ನೀಡಿದೆ. 2024 ಮತ್ತು 2025 ನೇ ಸಾಲಿನ ಮೆಟ್ರಿಕ್ ನಂತರ ವಿದ್ಯಾರ್ಥಿಗಳು ಹಾಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಅರ್ಜಿಯನ್ನು ಕರೆಯಲಾಗಿದೆ. Join Our Telegram: https://t.me/dcgkannada ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣ ಅನುಕೂಲಕ್ಕಾಗಿ ಸಾಕಷ್ಟು ಯೋಜನೆ ಮತ್ತು ಸ್ಕಾಲರ್ಶಿಪ್ ಗಳನ್ನು ಜಾರಿಗೆ ತರುತ್ತಿದೆ ಮತ್ತು ಅವರ ಪರೀಕ್ಷೆ ಉತ್ತಮವಾಗಿ ಪಾಸಾಗಿದ್ದರೆ ಸಾಕು.

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ₹601 5G ರೀಚಾರ್ಜ್ ಯೋಜನೆಯು Jio ಬಳಕೆದಾರರಿಗೆ, ವಿಶೇಷವಾಗಿ ಇಡೀ ವರ್ಷಕ್ಕೆ ಅನಿಯಮಿತ 5G ಡೇಟಾವನ್ನು ಬಯಸುವವರಿಗೆ ಆಕರ್ಷಕ ಕೊಡುಗೆಯಾಗಿದೆ. Jio ₹601 5G ರೀಚಾರ್ಜ್ ಯೋಜನೆ ಮುಖ್ಯಾಂಶಗಳು ವೆಚ್ಚ : ಒಂದು ವರ್ಷಕ್ಕೆ ₹601.ಪ್ರಯೋಜನಗಳು : 12 ತಿಂಗಳವರೆಗೆ ಅನಿಯಮಿತ 5G ಡೇಟಾ.ಅರ್ಹತೆ : Jio 5G ಸಿಮ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.ವಿನಾಯಿತಿಗಳು : 4G ಸಿಮ್ ಬಳಕೆದಾರರಿಗೆ ಅನ್ವಯಿಸುವುದಿಲ್ಲ. Join Our Telegram: https://t.me/dcgkannada ಈ