Ekadanta, come home to spend the Vighna of the devotees

ಭಕ್ತರ ವಿಘ್ನ ಕಳೆಯಲು ಮನೆಗೆ ಬಾ ಏಕದಂತ

ಭಕ್ತರ ವಿಘ್ನ ಕಳೆಯಲು ಮನೆಗೆ ಬಾ ಏಕದಂತ

ವಿಷೇಶ ಲೇಖನ: ರೇವಣಸಿದ್ದ ಬಗಲಿ

ಭಾರತೀಯರು ಹಬ್ಬ ಪ್ರೀಯರು. ಗಣೇಶ ಚತುರ್ಥಿ ಅನ್ನುವದು ರಾಷ್ಟ್ರೀಯ ಹಬ್ಬ. ಬ್ರೀಟಿಷರಿಗೆ ಭಾರತವನ್ನು ಬಿಟ್ಟು ತೊಲಗಿಸಲು ಅಂದು ನಮ್ಮ ನೆಚ್ಚಿನ ರಾಷ್ಟ್ರಾಭಿಮಾನಿಯಾದ ಬಾಲಗಂಗಾಧರ ತಿಲಕ ರವರು ಭಾರತೀಯರನ್ನು ಒಂದುಗೂಡಿಸುವ ಸಲ್ಲುವಾಗಿ ಈ ಗಣೇಶನನ್ನು ಸಾರ್ವಜನಿಕವಾಗಿ ಕೂರಿಸುವ ಉತ್ಸವವನ್ನು ಪ್ರಾರಂಭಿಸಿದರು.

ಇನ್ನಷ್ಟು ‌ಸುದ್ದಿಗಳಿಗಾಗಿ ನಮ್ಮ‌ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಅಂದಿನಿಂದ ರಾಷ್ಟ್ರ ವ್ಯಾಪಿಯಾಗಿ ಪ್ರತಿವರ್ಷವೂ ಭಾದ್ರಪದ ಮಾಸದ ಚತುರ್ಥಿಯಂದು ಶಿವ-ಗೌರಿಸುತ್ತನಾದ ಗಣಪತಿಯನ್ನು ನಗರ-ಗ್ರಾಮೀಣ ಪ್ರದೇಶವೆನ್ನದೇ ಎಲ್ಲಡೇಯೂ ಭಕ್ತಿ ಪೂರ್ವಕವಾಗಿ ಆರಾಧನೆ ಮಾಡುವುದು ಜೋರಾಗಿರುತ್ತದೆ.

ಗಣೇಶ ಚತುರ್ಥಿ ಬಂದರೆ ಸಾಕು ಪಟ್ಟಣವೇಲ್ಲ ವಿಘ್ನೇಶನ ಆರಾಧನೆಯಲ್ಲಿ ಮಗ್ನಗೊಳುವದು. ಅದರಲ್ಲೂ ಚಿಕ್ಕ ಪುಟ್ಟ ಮಕ್ಕಳಿಗಂತು ಗಣೇಶ ಕೂರಿಸುವದು ಒಂದು ಸಡಗರ ಹಾಗೂ ಸಂಭ್ರಮದ ಹಬ್ಬವಾಗಿದೆ. ಪ್ರತಿ ವರ್ಷವೂ ಪಟ್ಟಣದಲ್ಲಿ ನೂರಾರೂ ಕಡೆಗಳಲ್ಲಿ ವಿಘ್ನ ನಿವಾರಕನನ್ನು ಕೂಡಿಸುವದು ಸರ್ವೆ ಸಾಮಾನ್ಯ.

ಈ ಬಾರಿಯೂ ವ್ಯಾಪಾರಿ ನಗರಿ ಚಡಚಣ ಪಟ್ಟಣದಲ್ಲಿ ಗಣೇಶ ಚತುರ್ಥಿ ನಿಮಿತ್ಯವಾಗಿ ಗಣೇಶನ ಮೂರ್ತಿಯನ್ನು ಮನೆ, ಗಲ್ಲಿ, ಸರ್ಕಾರಿ ಕಛೇರಿ, ಸಂಘ-ಸಂಸ್ಥೆ, ಪ್ರಮುಖ ಬಿದಿಗಳಲ್ಲಿ ಐದು ದಿನ, ಏಳು ದಿನ, ಒಂಬತ್ತು ದಿನ ಹೀಗೆ ಆಯಾ ಮಂಡಳಿಗಳು ಪ್ರತಿಷ್ಠಾಪಿಸಿ ಮೋದಕ ಪ್ರೀಯ ಗಣೇಶನಿಗೆ ವಿಶೇಷ ತಿಂಡಿ ಕಡಬು, ಲಾಡು, ಗರಿಕೆ, ಹಣ್ಣು ಹಂಪಲ್‌ಗಳು ಅರ್ಪಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸಲಾಗುವುದು.

ಭಾದ್ರಪದ ಶುಕ್ಲದ ಚೌತಿಯಂದು ಹಸ್ತಾ ನಕ್ಷತ್ರವಿರುವ ದಿನವೇ ಗಣೇಶ ಚತುರ್ಥಿ ದಿವಸ. ಈ ದಿವಸ ಶಿವ-ಗೌರಿ ದಂಪತಿಗಳಿಗೆ ವಿನಾಯಕನಾಗಿ ಜನಿಸಿದ ಗಣೇಶನ ಹುಟ್ಟಿದ ದಿನ. ಈ ದಿನವನ್ನು ಕರ್ನಾಟಕ, ಮಹಾರಾಷ್ಟ್ರ ಎನ್ನದೇ ಭಾರತದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಗಣೇಶನನ್ನು ಕೂರಿಸಿ, ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ.

ನಮ್ಮ ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದಲ್ಲಂತು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಗಣೇಶನನ್ನು ಕೂರಿಸಿ, ನಿತ್ಯವೂ ರಾತ್ರಿ ಒಂದೊಂದು ತರಹದ ಮನರಂಜನೆ, ನಾಟಕ, ಡ್ಯಾನ್ಸ್, ಹಾಡು, ಮಿಮಿಕ್ರೀಗಳು ಗಣೇಶ ಮಂಡಳಿಯವರು ಆಯೋಜಿಸುತ್ತಾ ಜನರನ್ನು ಭೇದ-ಭಾವವಿಲ್ಲದೇ ಒಂದೂಗೂಡಿಸುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಸಂಭ್ರಮಿಸುವ ಜತೆಯಲ್ಲಿ ಕೊನೆಯ ದಿನದಂದು ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಯೆಯೂ ಮಾಡುವವರು.

ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಗಣಪತಿ ಊರೋಳಗಡೆ ಕುಳಿತರೆ, ಜನರು ತಮ್ಮ ಮನೆಗಳಲ್ಲಿ ಪುಟ್ಟ ಪುಟ್ಟ ವಿನಾಯಕನ್ನು ಕೂರಿಸಿ ಹಬ್ಬವನ್ನು ಎಲ್ಲ ಹಬ್ಬಕ್ಕಿಂತ ವಿಜೃಂಭಣೆಯಿಂದ ಆಚರಿಸುವರು.

ಈ ಬಾರಿ ಪ್ರತಿಯೊಬ್ಬರೂ ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗಣಪನ ಮೂರ್ತಿ ವಿಸರ್ಜನೆ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸಿ, ಶಾಂತಿಯುತ ಹಬ್ಬವನ್ನು ಆಚರಣೆ ಮಾಡುವಂತಾಗಲಿ ಎನ್ನುವದು ನನ್ನ ಆಶಯ.

Latest News

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: ಸರ್ಕಾರದಿಂದ ಆಧಾರ್ ಕಾರ್ಡ್ ಹೊಂದಿದವರಿಗೆ 5 ಹೊಸ ರೂಲ್ಸ್ ಜಾರಿ ಮಾಡಿದೆ. ಈ ಐದೂ ನಿಮಯ ಪಾಲಿಸದಿದ್ದರೆ ದಂಡ ಗ್ಯಾರಂಟಿ! ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆಯಾಗಿ ಗುರುತಿಸಲಾಗಿದೆ. ಇದು ನಮ್ಮ ಗುರುತಿನ ಕಡ್ಡಾಯ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳು ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. Join Our Telegram: https://t.me/dcgkannada

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ. ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ