ಇಳಕಲ್: ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಏಕವಚನದಲ್ಲಿ ನಿಂದಿಸಿ, ಸುಳ್ಳು ಆರೋಪ ಮಾಡಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ್ ಅವರ ರಾಜುಗೌಡ ದೊಡ್ಡನಗೌಡ ಪಾಟೀಲ್ ವಿರುದ್ಧ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಹೌದು, ದಿನಾಂಕ 26-8-2024 ರಂದು ತಾಲೂಕಿನ ಚಿಕ್ಕ ಆದಾಪೂರ ಗ್ರಾಮದಲ್ಲಿ ಆಯೋಜಿಸಿದ್ದ “ಕಿಲಾಡಿ ರಂಗಣ್ಣ” ನಾಟಕ ಉದ್ಘಾಟನೆ ಮಾಡಿದ ನಂತರ ಶಾಸಕ ಕಾಶಪ್ಪನವರ ವಿರುದ್ಧ ರಾಜುಗೌಡ ಪಾಟೀಲ್ ವಾಗ್ದಾಳಿ ಮಾಡಿದ್ದರು.
“ಈ ವೇಳೆ ಏಕವಚನದಲ್ಲಿ ವಾಗ್ದಾಳಿ ನಡೆಸಿ, ಇಲ್ಲಸಲ್ಲದ ಸುಳ್ಳು ಆರೋಪ ಮಾಡಿದ್ದಾರೆ” ಎಂದು ಮಲ್ಲಿಕಾರ್ಜುನ್ ಬಸಪ್ಪ ಮಡಿವಾಳರ ಎಂಬುವರು ದಿನಾಂಕ 29-8-2024ರಂದು ರಾಜುಗೌಡ ದೊಡ್ಡನಗೌಡ ಪಾಟೀಲ್ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ: Death news: ಮಾಜಿ ಸಚಿವ ಶ್ರೀನಿವಾಸ್ ಇನ್ನಿಲ್ಲ
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಇಳಕಲ್ ಗ್ರಾಮೀಣ PSI ಎಂ.ಎ. ಸತಿಗೌಡರ್ ತನಿಖೆ ಕೈಗೊಂಡಿದ್ದಾರೆ.

ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತಿದ್ದೇನೆ: ಏಕ ವಚನದಲ್ಲಿಯೇ ರಾಜುಗೌಡ ಪಾಟೀಲ್ ವಾಗ್ದಾಳಿ
ಇಳಕಲ್: “** ವಿಜ್ಜಾ.. ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತಿದ್ದೇನೆ” ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ್ ಅವರ ಮಗನಾದ ರಾಜುಗೌಡ ಪಾಟೀಲ್ ಅವರು ಸವಾಲು ಹಾಕಿದರು.
ತಾಲೂಕಿನ ಚಿಕ್ಕ ಆದಾಪೂರ ಗ್ರಾಮದಲ್ಲಿ ಗ್ರಾಮ ದೇವತೆ ಕಾಳಿಕಾ ದೇವಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ “ಕಿಲಾಡಿ ರಂಗಣ್ಣ” ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
“ಇಂದು ನಾನು ರಾಜಕೀಯ ಮಾತನಾಡಲು ಬಂದಿರಲಿಲ್ಲ. ಆದರೆ, ಇಳಕಲ್ ನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಸುದ್ದಿಗೋಷ್ಠಿಯಲ್ಲಿ ನಮ್ಮ ತಂದೆಯವರಿಗೆ ದೊಡ್ಡನಗೌಡ ನೀ ದಡ್ಡ ಎಂದು ನಿಂದಿಸಿದ ಕಾರಣ ರಾಜಕೀಯ ಮಾತನಾಡಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ” ಎಂದು ಮಾತು ಆರಂಭಿಸಿದರು.
“ನಾವು ಇಳಕಲ್ ನಲ್ಲಿ ಇರುವವರು. ಬಾಯಿಗೆ ಬಂದಂಗ ಮಾತನಾಡಿದರೆ ಸುಮ್ಮನೆ ಕೂರಲು ಆಗಲ್ಲ. ಇನ್ನು ಮುಂದೆ ನೀ ಬೊಗಳು.. ನಾನು ನೋಡ್ತಿನಿ…” ಎಂದು ಎಚ್ಚರಿಕೆ ರೀತಿ ಮಾತನಾಡಿದರು.
“ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು, ಬಾಯಿಗೆ ಬಂದಂಗ ಮಾತನಾಡುತ್ತಾ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿಯಾ? ನಾಳೆ ಚಿಕ್ಕ ಆದಾಪೂರ ಗ್ರಾಮಕ್ಕೆ ಬರ್ತಿಯಲ್ಲ… ಬಾ.. ಏನು ಮಾಡ್ತಿ ನೋಡ್ತಿವಿ” ಎಂದು ಗುಡುಗಿದರು.
ವಾಗ್ವಾದಕ್ಕೆ ಕಾರಣ ಏನು?
ಇಳಕಲ್ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಂತರ ಶಾಸಕರು ಮತ್ತು ಮಾಜಿ ಶಾಸಕರ ನಡುವಿನ ವಾಕ್ಸಮರ ಜೋರಾಗಿದೆ. ಈಗ ಮಾಜಿ ಶಾಸಕ ದೊಡ್ಡನಗೌಡ ಅವರ ಮಗನೂ ಮಾತಿನ ಮಲ್ಲ ಯುದ್ಧಕ್ಕೆ ಮತ್ತೆ ಪ್ರವೇಶವನ್ನು ಚಿಕ್ಕ ಆದಾಪೂರ ಗ್ರಾಮದಿಂದ ಮಾಡಿದ್ದಾರೆ.
ಬಿಜೆಪಿ ನಾಯಕತ್ವ ಯಾರದ್ದು?
ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೂ ಹೀಗೆ ಮಾತಿನ ಯುದ್ಧ ನಡೆಸಿದ್ದ ಕಾಶಪ್ಪನವರ ಮತ್ತು ದೊಡ್ಡನಗೌಡ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದರು. ಈಗ ತಾಲೂಕು ಬಿಜೆಪಿ ನಾಯಕತ್ವ ಚರ್ಚೆ ಜೋರಾಗಿರುವಾಗಲೇ ಮಾಜಿ ಶಾಸಕರು ತಮ್ಮ ಮಗನನ್ನು ಮತ್ತೆ ಮುನ್ನೆಲೆ ತರಲು ಮುಂದಾಗಿದ್ದಾರಾ ಎಂಬ ಚರ್ಚೆ ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಏತನ್ಮಧ್ಯೆ, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರಿಸಿದ ನಂತರ ಎಸ್. ಆರ್. ನವಲಿಹಿರೇಮಠ ಅವರೂ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಬಿಜೆಪಿ ನಾಯಕತ್ವ ಯಾರ ಬಳಿ ಉಳಿಯುತ್ತದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.