ಮುಧೋಳ : ಎರಡು ದಶಕದಿಂದ ಶಾಶ್ವತ ಪರಿಹಾರ ಕಲ್ಪೊಸದೆ ನಮ್ಮ ಬದುಕು ಬೀದಿಗೆ ಬರುವಂತಾಗಿದೆ ನೀವಾದರು ನಮಗೆ ಶಾಶ್ವತ ಪರಿಹಾರ ಕಲ್ಪಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಪ್ರವಾಹದಿಂದ ಮನೆ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮಹಿಳೆಯರು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಎದುರು ಕಣ್ಣೀರು ಹಾಕಿದ ಪ್ರಸಂಗ ಜರುಗಿತು.
ಪ್ರವಾಹ ಪರಿಶೀಲನೆಗಾಗಿ ಮುಧೋಳ ನಗರದ ಕುಂಬಾರ ಓಣಿಯ ಕಾಳಜಿ ಕೇಂದ್ರಕ್ಕೆ ಆಗಮಿಸದ ವೇಳೆ ಸಚಿವರನ್ನು ಸುತ್ತುವರಿದ ಮಹಿಳೆಯರು, ಶಾಶ್ವತ ಪರಿಹಾರ ನೀಡುವ ಮೂಲಕ ಪ್ರವಾಹ ಪರಿಸ್ಥಿತಿಯಿಂದ ನಮಗೆ ಮುಕ್ತಿ ನೀಡಿ ಎಂದು ಮನವಿ ಮಾಡಿಕೊಂಡರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಉಮಾಶ್ರೀ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಸೇರಿದಂತೆ ಇತರರು ಇದ್ದರು.