ಮುದ್ದೇಬಿಹಾಳ : ಸ್ಥಳೀಯ ಕಲಾವಿದರ ನೇತೃತ್ವದಲ್ಲಿ ಚಿಗುರು ಕಲಾ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ ನಮನ ಕಾರ್ಯಕ್ರಮ ನ.11 ರಂದು ಪಟ್ಟಣದ ಪುರಸಭೆಯ ಎದುರಿಗಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಮದ್ಯಾಹ್ನ 1.30 ಗಂಟೆಯಿAದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುವುದು.ಸಾಯಂಕಾಲ 4 ಗಂಟೆಗೆ ಟ್ರ‍್ಯಾಕ್ಸ್, ಕಾರು ಹಾಗೂ ಆಟೋಗಳಿಂದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಯಲಿದೆ ಎಂದು ಬಳಗದ ಸದಸ್ಯ ಗೋಪಾಲ ಹೂಗಾರ, ಶ್ರೀಶೈಲ್ ಹೂಗಾರ ತಿಳಿಸಿದರು.
ಸಂಜೆ 7 ಗಂಟೆಗೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಕಲಾವಿದರಾದ ಮ್ಯೂಜಿಕ್ ಮೈಲಾರಿ ಹಾಗೂ ಗಾಯಕಿ ತೃಪ್ತಿ ಧಾರವಾಡ ಅವರಿಗೆ ಸನ್ಮಾನಿಸಲಾಗುವುದು.ಪಟ್ಟಣದ ಪ್ರೌಢ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಹಾಲಿ, ಮಾಜಿ ಶಾಸಕರು, ಜನಪ್ರತಿನಿಧಿಗಳು,ಸಮಾಜ ಸೇವಕರು, ಗಣ್ಯರು ಆಗಮಿಸುವರು ಎಂದು ಅವರು ತಿಳಿಸಿದರು.
ಕಲಾವಿದರಾದ ಮುನೀರ ಅವಟಗೇರಿ,ವಿನಾಯಕ ಭಟ್, ನಿಜಾಮ್ ಬಾಗೇವಾಡಿ , ಹನಮಂತ ಮಹಾಲಿಂಗಪೂರ, ಮಲ್ಲು ತಟ್ಟಿ, ಸುನೀಲ ಬಿಸನಾಳ, ಅಟೋ ಕುಮಾರ ,ಮೌನೇಶ ಬಡಿಗೇರ, ಪ್ರಸನ್ನ ಪಾಟೀಲ ಇದ್ದರು.