ಮುದ್ದೇಬಿಹಾಳ : ಪಟ್ಟಣದ ತಾಳಿಕೋಟಿ ರಸ್ತೆಯಲ್ಲಿರುವ ವಿನಾಯಕ ನಗರದ ವಿನಾಯಕ ಹಾಗೂ ಭದ್ರಕಾಳಿ ಅಮ್ಮನವರ ಸಮೇತ ವೀರಭದ್ರೇಶ್ವರ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಮೇ.1 ರಿಂದ 5ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೇ.1 ರಂದು ಬೆಳಗ್ಗೆ 5ಕ್ಕೆ ಮೂಲ ಮೂರ್ತಿಗಳಿಗೆ ಅಭಿಷೇಕ, ಸಂಜೆ 6ಕ್ಕೆ ಗೋಪೂಜೆ ನಂತರ ಇಟಗಿ ಗುರುಶಾಂತವೀರ ಶಿವಾಚಾರ್ಯರಿಂದ ಆಧ್ಯಾತ್ಮಿಕ ಪ್ರವಚನ ಸಂಜೆ 7 ಕ್ಕೆ ನಡೆಯಲಿದೆ.
ದಿವ್ಯ ಸಾನಿಧ್ಯವನ್ನು ಇಟಗಿ ಗುರುಶಾಂತವೀರ ಶಿವಾಚಾರ್ಯರು ವಹಿಸುವರು. ಈರಯ್ಯ ಹಿರೇಮಠ ಸಾನಿಧ್ಯ ವಹಿಸುವರು.ವಿಶ್ವನಾಥ ನಾಗಠಾಣ ಅಧ್ಯಕ್ಷತೆ ವಹಿಸುವರು. ಉದ್ಯಮಿ ಸಂಜೀವಕುಮಾರ ಓಸ್ವಾಲ್ ಉದ್ಘಾಟಿಸುವರು. ಗಣ್ಯರಾದ ಕಾಶೀಬಾಯಿ ರಾಂಪೂರ, ಅನುರಾಧಾ ಪ್ಯಾಟಿಗೌಡರ, ಸಂಗೀತಾ ನಾಡಗೌಡರ, ಶಿವಶಂಕರಗೌಡ ಹಿರೇಗೌಡರ, ಸಂಗಯ್ಯ ಗಣಾಚಾರಿ ಉಪಸ್ಥಿತರಿರಲಿದ್ದಾರೆ. ಬಳಿಕ ದಾನಿಗಳಿಗೆ ಸನ್ಮಾನ ನಡೆಯಲಿದೆ. ಮೇ.2 ಹಾಗೂ 3 ರಂದು ಸಂಜೆ ಆಧ್ಯಾತ್ಮಿಕ ಪ್ರವಚನ, ಮೇ.4 ರಂದು ಬೆಳಗ್ಗೆ 7ಕ್ಕೆ ಕಿಲ್ಲಾದಲ್ಲಿನ ಗುಗ್ಗಳ ಬಸವೇಶ್ವರ ಹಾಗೂ ವೀರಭದ್ರೇಶ್ವರ ದೇವಸ್ಥಾನದಿಂದ ನೂತನ ಪಲ್ಲಕ್ಕಿ ಹಾಗೂ ಮೂರ್ತಿಗಳನ್ನು ಮೆರವಣಿಗೆ ಮೂಲಕ ವಿನಾಯಕ ನಗರದ ನೂತನ ದೇವಸ್ಥಾನಕ್ಕೆ ಕರೆತರುವುದು.
ಮೇ. 5 ರಂದು ಮೂಲ ಮೂರ್ತಿಗಳಿಗೆ ಅಭಿಷೇಕ ನಂತರ ನೂತನ ಮೂರ್ತಿಗಳ ಸ್ಥಾಪನೆ, ಮಹಾಭಿಷೇಕ, ಉತ್ಸವಮೂರ್ತಿ, ದೇವಸ್ಥಾನದ ಕಳಸವನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಸಂಜೆ 5ಕ್ಕೆ ಶ್ರೀಶೈಲ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಧರ್ಮಸಭೆ ನಡೆಯಲಿದೆ ಎಂದು ದೇವಸ್ಥಾನ ಕಮೀಟಿ ಅಧ್ಯಕ್ಷ ಶಾಹೀಲ್ ನಾಗಠಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.