ಹುನಗುಂದ: ಅಕ್ಷರ ಹಣತೆ ಹಚ್ಚಿದ ಸುತ್ತೂರು ರಾಜೇಂದ್ರ ಗುರುಗಳು ತಮ್ಮ 12 ನೇ ವಯಸ್ಸಿನಲ್ಲಿ ಉತ್ತರಾಧಿಕಾರಿಗಳಾಗಿ ಇಂದು ಮೈಸೂರು ಜಿಲ್ಲೆ ಮಾತ್ರವಲ್ಲದೇ ನಾಡಿನ ಬಡ ಮಕ್ಕಳಿಗೆ ಅನ್ನ, ವಸತಿ ನೀಡಿ ಅಕ್ಷರ ಹಣತೆ ಹಚ್ಚಿದ ಕೀರ್ತಿ ರಾಜೇಂದ್ರ ಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಚಿತ್ತರಗಿ ಸಂಸ್ಥಾನಮಠ ಇಲಕಲ್‌ನ ಗುರು ಮಹಾಂತ ಸ್ವಾಮಿಗಳು ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಪಟ್ಟಣದ ಶರಣ ಮಲ್ಲಣ್ಣ ಲೆಕ್ಕಿಹಾಳ ಅವರ ಮನೆಯಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಗುರವಾರ ನಡೆದ ಸುತ್ತೂರ ರಾಜೇಂದ್ರ ಸ್ವಾಮಿಗಳ 109 ನೇ ಜನ್ಮ ದಿನೋತ್ಸವ ಹಾಗೂ 24ನೇ ಮನೆ ಮನಗಳಿಗೆ ವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜೇಂದ್ರ ಗುರುಗಳ ಜನ್ಮದಿನ ವನ್ನು ವಚನ ದಿನ ಎಂದು ಆಚರಸುತ್ತಿರುವದು ಬಸವಾದಿ ಶರಣರ ವಚನಗಳನ್ನು ನಾಡಿನ ಜನತೆಗೆ ತಲುಪಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.
ಸಭೆಯಲ್ಲಿ ಅನುಭಾವ ನುಡಿಗಳನ್ನಾಡಿದ ವಿಜಯಪುರ ಜ್ಞಾನ ಯೋಗಾಶ್ರಮದ ಸಂಗಮೇಶ್ವರ ಸ್ವಾಮಿಗಳು ರಾಜೇಂದ್ರ ಗುರುಗಳ ಅಕ್ಷರ ದಾಸೋಹ,ಅನ್ನ ದಾಸೋಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಕ್ಷರ ಕ್ರಾಂತಿಯ ಹರಿಕಾರರಾಗಿ
ಕಾರ್ಯ ಮಾಡಿದರು ಎಂದರು.
ಶರಣ ಸಾಯಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಎಸ್.ಎನ್. ಹಾದಿಮನಿ ಮಾತನಾಡಿ ರಾಜೇಂದ್ರ ಸ್ವಾಮಿಗಳು ಚಿಕ್ಕ ವಯಸ್ಸಿನಲ್ಲೇ ಸುತ್ತೂರ ಸಂಸ್ಥೆಯ ಬೆಳವಣಿಗೆ ಮಾಡುವ ಮೂಲಕ ಇಂದು ಈ ಸಂಸ್ಥೆ ಜಗತ್ತಿನ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸವ ಮೂಲಕ ಅಕ್ಷರ ಕಾಯಕದ ಗುರುಗಳು ಎಂದು ಕರೆಸಿಕೊಂಡಿದ್ದಾರೆ ಎಂದರು.
ಶಿರೂರಿನ ಬಸವಲಿಂಗ ಸ್ವಾಮಿಗಳು ಮಾತನಾಡಿದರು.
ಸಭೆಯಲ್ಲಿ ಭಕ್ತಿಸೇವೆ ಮಾಡಿದ ಶರಣ ಮಲ್ಲಣ್ಣ ಲೆಕ್ಕಿಹಾಳ ದಂಪತಿಗಳನ್ನು ಗೌರವಿಸಿದರು.
ಸಭೆಯ ಪ್ರಾರಂಭದಲ್ಲಿ ಫ್ರಭುದೇವ ಮಾಲಗಿತ್ತಿಮಠ ವಚನ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಕೊನೆಯಲ್ಲಿ ಶರಣು ಸಮರ್ಪಿಸಿದರು.
ಇದನ್ನೂ ಓದಿ: ನಾಲ್ಕು ತಿಂಗಳಲ್ಲಿ ಮೋದಿ ಸರ್ಕಾರ ಪತನ.. 15 ವರ್ಷ ರಾಹುಲ್ ಗೆ ಅಧಿಕಾರ..! ಸ್ಫೋಟಕ ಬಾಂಬ್ ಸಿಡಿಸಿದ ಸಚಿವ
ಎಂ. ಎನ್ ತೆನಿಹಳ್ಳಿ,ಸಂಗಣ್ಣ ನಾಗರಾಳ, ಎಸ್.ಆರ್.ಕಡಿವಾಲ್, ಎಸ್.ಎಂ.ಕೊಪ್ಪರದ ಲೆಕ್ಕಿಹಾಳ ಬಂಧುಗಳು ಉಪಸ್ಥಿತರಿದ್ದರು.