ಸೆ.26 ರಂದು ನಿಖಿಲ್ ಕುಮಾರಸ್ವಾಮಿ ಪ್ರವಾಸ: ಜೆಡಿಎಸ್ ಸದಸ್ಯತ್ವ ಅಭಿಯಾನ ಯಶಸ್ವಿಗೆ ಹವಾಲ್ದಾರ್ ಮನವಿ

ಸೆ.26 ರಂದು ನಿಖಿಲ್ ಕುಮಾರಸ್ವಾಮಿ ಪ್ರವಾಸ: ಜೆಡಿಎಸ್ ಸದಸ್ಯತ್ವ ಅಭಿಯಾನ ಯಶಸ್ವಿಗೆ ಹವಾಲ್ದಾರ್ ಮನವಿ

ಮುದ್ದೇಬಿಹಾಳ : ಜಾತ್ಯಾತೀತ ಜನತಾದಳದಿಂದ ಸದಸ್ಯತ್ವ ಅಭಿಯಾನ ಹಾಗೂ ಬೂತ್ ಮಟ್ಟದ ಸಮಿತಿಯ ಉದ್ಘಾಟನಾ ಕಾರ್ಯಕ್ರಮ ಸೆ.26 ರಂದು ಬೆಳಗ್ಗೆ 11ಕ್ಕೆ ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪವಾಡೆಪ್ಪ ಹವಾಲ್ದಾರ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ‌ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಭಿಯಾನದ ಉದ್ಘಾಟನೆಗೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ಕೋರ್‌ಕಮೀಟಿ ಅಧ್ಯಕ್ಷ,ಶಾಸಕ ಜಿ.ಟಿ.ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪಕ್ಷ ಬೇರು ಮಟ್ಟದಿಂದ ಗಟ್ಟಿಯಾದರೆ ಮಾತ್ರ ಜೆಡಿಎಸ್ ಹೆಮ್ಮರವಾಗಿ ಬೆಳೆಯುತ್ತದೆ. ಎಲ್ಲ ಸಮುದಾಯಗಳ ಜನರನ್ನು ಒಳಗೊಂಡು ನೋಂದಣಿ ಮಾಡುವ ಪ್ರಕ್ರಿಯೆ ನಡೆಸುವ ಉದ್ದೇಶದಿಂದ ಪಕ್ಷದ ಸಂಘಟನೆ ಹಾಗೂ ಶಕ್ತಿ ಹೆಚ್ಚಿಸಿಕೊಳ್ಳಲು ಆಂತರಿಕವಾಗಿ ಸದಸ್ಯತ್ವ ಅಭಿಯಾನ ಚುರುಕುಗೊಳಿಸಲು ಹಾಗೂ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸಲು ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಿ ಹೊಸಬರನ್ನು ಪಕ್ಷಕ್ಕೆ ಕರೆತರುವ ಉದ್ದೇಶದಿಂದ ಪ್ರತಿ ಬೂತ್‌ನಲ್ಲಿ ಕನಿಷ್ಠ 10 ಪ್ರಾಮಾಣಿಕ ಸದಸ್ಯರನ್ನು ನೋಂದಣಿ ಮಾಡಿಸುವ ಪ್ರತಿಜ್ಞೆಯನ್ನು ಕಾರ್ಯಕರ್ತರು ಪಕ್ಷದ ವರಿಷ್ಠರ ಮುಂದೆ ಮಾಡಬೇಕು ಎಂದು ಹವಾಲ್ದಾರ್ ತಿಳಿಸಿದ್ದಾರೆ.

ಯಾರು ಪಕ್ಷದ ಪರವಾಗಿ ದುಡಿಯುತ್ತಾರೆ. ಮುಂದಿನ ಚುನಾವಣೆಯ ನಿಮ್ಮ ಟಿಕೆಟ್ ನಿಮ್ಮ ಮತಕ್ಷೇತ್ರದಲ್ಲಿ ಎಷ್ಟು ಜನರಿಗೆ ಸದಸ್ಯತ್ವದ ನೋಂದಣಿ ಮಾಡಿಸಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುವ ಸಾಧ್ಯತೆಗಳಿದ್ದು ಕಾರ್ಯಕರ್ತರು ಈ ಸದಸ್ಯತ್ವ ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುವಂತೆ ಅವರು ತಿಳಿಸಿದ್ದಾರೆ.

ಇದನ್ನು ಓದಿ: ಸಚಿವರ ಬಳಿ ನಿಯೋಗಕ್ಕೂ ಸಿದ್ಧ-ಸಿ.ಬಿ.ಅಸ್ಕಿ

Latest News

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಕೋಲ್ಕತ್ತ: ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ವಿರುದ್ಧ ಸೋಲುವ ಮೂಲಕ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ: ಕೆಎಸ್ಆರ್.ಟಿಸಿ ಬಸ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ಆರೇಶಂಕರ ಕ್ರಾಸ್

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮುದ್ದೇಬಿಹಾಳ : ಪಟ್ಟಣದ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಮುದ್ದೇಬಿಹಾಳ, ಕೋಳೂರು, ಅಡವಿ

ನಿರ್ಲಕ್ಷ್ಯದ ವಿರುದ್ಧ ಆಕ್ರೋಶ : ಜಾತಿ ಗಣತಿಗೆ ಅಧಿಕಾರಿಗಳ ಅನಾದರ-ಆರೋಪ

ನಿರ್ಲಕ್ಷ್ಯದ ವಿರುದ್ಧ ಆಕ್ರೋಶ : ಜಾತಿ ಗಣತಿಗೆ ಅಧಿಕಾರಿಗಳ ಅನಾದರ-ಆರೋಪ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಒಳಮೀಸಲಾತಿ ಕಲ್ಪಿಸಲು ಆರಂಭಿಸಿರುವ ಜಾತಿ ಗಣತಿಗೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಲಿಂಗಸಗೂರು: ತಾಲ್ಲೂಕಿನ ಚಿತ್ತಾಪೂರ ಗ್ರಾಮದಲ್ಲಿ ಬೋರವೇಲ್ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಗ್ರಾಮದ ಜನರಿಗೆ ಯೋಗ್ಯವಾದ ಕೃಷ್ಣ ನದಿಯ ನೀರನ್ನು ಒದಗಿಸಬೇಕು ಎಂದು ಸಹಾಯಕ ಆಯುಕ್ತರಿಗೆಅಂಬೇಡ್ಕರ ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕಳೆದ ವರ್ಷ ಬೇಸಿಗೆಯಲ್ಲಿ ಚಿತ್ತಾಪೂರ ಗ್ರಾಮದ ಸಂಪೂರ್ಣ ಜನರಿಗೆ ವಾಂತಿ ಬೇಧಿಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದರು. ಇಡೀ ರಾಜ್ಯಾದ್ಯಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಬೇಟಿ ನೀಡಿ, ಹತೋಟಿಗೆ ತರುವ

ಅಕ್ರಮ ಗಣಿಗಾರಿಕೆ ಗಾಲಿ ಜನಾರ್ಧನ್ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ

ಅಕ್ರಮ ಗಣಿಗಾರಿಕೆ ಗಾಲಿ ಜನಾರ್ಧನ್ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ

ದೆಹಲಿ: ಅನಂತಪುರ ಜಿಲ್ಲೆಯ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇದೀಗ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಇದರ ಬೆನ್ನಲ್ಲೇ ಕೋರ್ಟ್ ಶಿಕ್ಷೆ ಪ್ರಕಟಿಸಿದ್ದು ಶಾಸಕ ಜನಾರ್ಧನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಓಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ