ನಾಲತವಾಡ : ಪಟ್ಟಣದ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಶರಣ ವೀರೇಶ್ವರರ ಹೆಸರು ನಾಮಕರಣ ಮಾಡಬೇಕು ಅಗತ್ಯ ಬಿದ್ದರೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಲು ನಿಯೋಗ ಕರೆದೊಯ್ಯಲು ಸಿದ್ಧ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ,ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ನಾಲತವಾಡ ಪಟ್ಟಣದಲ್ಲಿ ಈಚೇಗೆ ಮಾಜಿ ಸಚಿವರಾದ ದೇಶಮುಖ ಅವರ ನಿವಾಸದಲ್ಲಿ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ.ಪಂ ಅಧ್ಯಕ್ಷ,ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿ ನಾಡಗೌಡರ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ.ಕ್ಷೇತ್ರದಲ್ಲಿ ಶರಣ ವೀರೇಶ್ವರರ ಹೆಸರು ಅಜರಾಮರವಾಗಿದ್ದು ಈ ಭಾಗದ ಜನತೆಯ ಆಶಯದಂತೆ ಶಾಸಕರು ಶೀಘ್ರವೇ ಬಸ್ ನಿಲ್ದಾಣಕ್ಕೆ ವೀರೇಶ್ವರರ ಹೆಸರು ನಾಮಕರಣ ಮಾಡಿಸಲು ಸಂಬಂಧಿಸಿದವರ ಮೇಲೆ ಒತ್ತಡ ಹೇರಬೇಕು ಎಂದರು.
ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಇಲಕಲ್, ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಪೃಥ್ವಿರಾಜ ನಾಡಗೌಡ, ಗುರುಪ್ರಸಾದ್ ದೇಶಮುಖ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಉದ್ಯಮಿ ಮಹಾಂತೇಶ ಗಂಗನಗೌಡ್ರ, ಆಮರೇಶ ಗೂಳಿ, ಪಪಂ ಸದಸ್ಯ ಸಂಗಣ್ಣ ಬಾರಡ್ಡಿ, ಸಂಗಮೇಶ ಗಂಗನಗೌಡರ, ಸಿದ್ದಣ್ಣ ಕಟ್ಟಿಮನಿ, ಮುತ್ತು ಯರಗೋಡಿ, ಶಿವಶರಣ ಇಲಕಲ್, ಮುತ್ತು ಕ್ಷತ್ರಿ, ವೀರೇಶ ಗಂಗನಗೌಡ್ರ, ಸಂಗಮೇಶ ಜಾವಳಗೇರಿ, ಮಹಾಂತೇಶ ಚಿತ್ರನಾಳ, ಪ್ರಶಾಂತ ಕೆಂಭಾವಿ, ಶರಣಪ್ಪ ಕಾನಿಕೇರಿ ಇದ್ದರು.
ಇದನ್ನೂ ಓದಿ: ಬನಶಂಕರಿ ಸಂಘಕ್ಕೆ 8.77 ಲಕ್ಷ ರೂಪಾಯಿ ಲಾಭ