ಬೆಂಗಳೂರು: ಮೂಡಾ ಹಗರದ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಖಂಡಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಹೃದಯಾಘಾತ (Heart attack) ಸಂಭವಿಸಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆದಿದೆ.
ರವಿಚಂದ್ರ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಕುರುಬ ಸಮುದಾಯದಿಂದ ಸುದ್ದಿಗೋಷ್ಠಿ ವೇಳೆ ಈ ಅನಾಹುತ ಸಂಭವಿಸಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ.. https://t.me/dcgkannada
ಮೃತ ವ್ಯಕ್ತಿಯೂ ಕೋಲಾರದ ಕುರುಬ ಸಂಘದ ಮುಖಂಡರಾಗಿದ್ದರು ಎನ್ನಲಾಗಿದೆ. ಇಂದು ನಡೆಯುತ್ತಿದ್ದ ಪ್ರೆಸ್ ಕ್ಲಬ್ನಲ್ಲಿ ಈ ಘಟನೆ ಸಂಭವಿಸಿದೆ.
ಕೂಡಲೇ ಹೃದಯಾಘಾತಕ್ಕೀಡಾದ (Heart attack) ರವಿಚಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ರವಿಚಂದ್ರ ಮೃತಪಟ್ಟಿದ್ದಾರೆ.
ಸಿಎಂ ಸಂತಾಪ
ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಆದೇಶ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಸಂಘದ ವತಿಯಿಂದ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಸಂಘದ ಸದಸ್ಯ, ನಮ್ಮ ಪಕ್ಷದ ಕಾರ್ಯಕರ್ತ ಸಿ.ಕೆ.ರವಿಚಂದ್ರನ್ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿಯಿತು.
ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿನ ಈ ಹೋರಾಟದಲ್ಲಿ ನಮ್ಮ ಜೊತೆಯಾಗಿದ್ದ ರವಿಚಂದ್ರನ್ ಅವರ ನಿಧನ ಅತೀವು ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಇದನ್ನೂ ಓದಿ: Protest: ಬಾಗಲಕೋಟೆಯಲ್ಲಿ ಬೆಂಕಿ ಹಚ್ಚಿಕೊಂಡ ಸಿಎಂ ಸಿದ್ದರಾಮಯ್ಯ ಅಭಿಮಾನಿ.. ಆಸ್ಪತ್ರೆಗೆ ದಾಖಲು..
ಅವರ ದುಃಖತಪ್ತ ಕುಟುಂಬಸ್ಥರು ಮತ್ತು ಬಂಧುಬಳಗದ ಜೊತೆ ನಾನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.
ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಸಿಮೆಂಟ್ ಬೆಳ್ಳುಳ್ಳಿ!
ನವದೆಹಲಿ: ಯಾವುದೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದಾಗ ಅದರ ನಕಲು ಮಾಡಿ ಮಾರಾಟ ಮಾಡುವುದು ಅಪರಾಧ ಜಗತ್ತಿನಲ್ಲಿ ಹೊಸ ಬೆಳವಣಿಗೆ ಅಲ್ಲ. ಇಂಥದ್ದೇ ಆತಂಕಕಾರಿ ಬೆಳವಣಿಗೆಯೊಂದಲ್ಲಿ ಸಿಮೆಂಟ್‌ನಲ್ಲಿ ಬೆಳ್ಳುಳ್ಳಿ ಪ್ರತಿಕೃತಿ ಮಾಡಿ, ಅದನ್ನು ನಿಜವಾದ ಬೆಳ್ಳುಳ್ಳಿ ಜೊತೆ ಮಾರಾಟ ಮಾಡುತ್ತಿರುವ ಪ್ರಕರಣ ಮಹಾರಾಷ್ಟ್ರದ ಹಲವು ಕಡೆ ಬೆಳಕಿಗೆ ಬಂದಿದೆ.
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆ.ಜಿ.ಗೆ 300-350 ರು. ತಲುಪಿರುವ ಬೆನ್ನಲ್ಲೇ, ಮಹಾರಾಷ್ಟ್ರದ ಮಾರುಕಟ್ಟೆಗಳಲ್ಲಿ ಸಿಮೆಂಟ್ ಬೆಳ್ಳುಳ್ಳಿ ಮಾರಾಟದ ಪ್ರಕರಣಗಳು ಪತ್ತೆಯಾಗಿವೆ. ಆಕೋಲಾದಲ್ಲಿ ಬಿಕರಿಗೆ ಇಟ್ಟಿದ್ದ ನೈಜ ಬೆಳ್ಳುಳ್ಳಿ ನಡುವೆ ನೈಜ ಬೆಳ್ಳುಳ್ಳಿಯನ್ನೇ ಹೋಲುವ ಸಿಮೆಂಟ್ ಬೆಳ್ಳುಳ್ಳಿ ಪತ್ತೆಯಾಗಿದೆ. ಸಿಮೆಂಟ್ ಬಳಸಿ ಪ್ರತಿಮೆಗಳನ್ನು ನಿರ್ಮಿಸುವಂತೆ ಬೆಳ್ಳುಳ್ಳಿ ಪ್ರತಿಕೃತಿ ಮಾಡಿ ಅದಕ್ಕೆ ಬಿಳಿಯ ಬಣ್ಣ ಹಚ್ಚಲಾಗಿದೆ.
ಸುಭಾಷ್ ಪಾಟೀಲ್ ಎಂಬ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಮಾರುಕಟ್ಟೆಯಿಂದ 250 ಗ್ರಾಂ ಬೆಳ್ಳುಳ್ಳಿ ಖರೀದಿಸಿ ಮನೆಗೆ ತಂದಿದ್ದರು. ಮನೆಯಲ್ಲಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸಲು ಹೋದಾಗ ಆಗಿಲ್ಲ. ಬಳಿಕ ಚಾಕುವಿನಿಂದ ಕತ್ತರಿಸಿದಾಗ ಒಳಗೆ ಸಿಮೆಂಟ್ ಕಂಡುಬಂದಿದೆ. ಇದೇ ರೀತಿ ಹಲವು ಗ್ರಾಹಕರು ತಾವು ವಂಚನೆಗೆ ಒಳಗಾಗಿದ್ದರ ಕುರಿತು ಮಾಹಿತಿ ಹಂಚಿ ಕೊಂಡಿದ್ದಾರೆ.
ನೈಜ ಬೆಳ್ಳುಳ್ಳಿ ಜೊತೆಗೆ ಈ ನಕಲಿ ಬೆಳ್ಳುಳ್ಳಿ ಸೇರಿಸುವಮೂಲಕ ತೂಕ ಹೆಚ್ಚಿಸುವ ತಂತ್ರಕ್ಕೆ ವ್ಯಾಪಾರಿಗಳು ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಖರೀದಿಸಿದ ಹಲವು ವ್ಯಕ್ತಿಗಳು ನಕಲಿ ಬೆಳ್ಳುಳ್ಳಿ ಒಡೆದಾಗ ಒಳಗಿನಿಂದ ಸಿಮೆಂಟ್ ಪುಡಿ ಉದುರುತ್ತದೆ.