
ಮುದ್ದೇಬಿಹಾಳ : ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಹಲವೆಡೆ ಗುಡುಗು, ಮಿಂಚು ಸಿಡಿಲಿನ ಆರ್ಭಟದೊಂದಿಗೆ ಭಾನುವಾರ ಮಳೆ ಸುರಿಯಿತು. ಸಂಜೆ 4.30ರ ನಂತರ ಶುರುವಾದ ಮಳೆ ಅರ್ಧ ಗಂಟೆ ಕಾಲ ಎಡೆಬಿಡದೇ ಸುರಿಯಿತು.

ಇದರಿಂದ ಚರಂಡಿಗಳು ತುಂಬಿ ರಸ್ತೆಯ ಮೇಲೆಲ್ಲಾ ಕೊಳಚೆ ನೀರು ಹರಿದಾಡಿತು. ಗಾಳಿಯೊಂದಿಗೆ ಸಿಡಿಲು ಗುಡುಗು ಆರ್ಭಟ ಜೋರಾಗಿತ್ತು. ಮಳೆ ಹಿನ್ನೆಲೆಯಲ್ಲಿ ಹೆಸ್ಕಾಂನಿಂದ ಎರಡು ತಾಸು ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಕಾದ ಹಂಚಿನಂತಾಗಿದ್ದ ಭೂಮಿಗೆ ಸುರಿದ ಮಳೆ ತಂಪನ್ನೆರೆಯಿತು.