ಹಿಂದುತ್ವಕ್ಕೆ ಸಮಸ್ಯೆ ಎದುರಾದರೆ ಆರ್.ಎಸ್.ಎಸ್‌ನಿಂದ ದಿಟ್ಟ ಹೋರಾಟ

ಹಿಂದುತ್ವಕ್ಕೆ ಸಮಸ್ಯೆ ಎದುರಾದರೆ ಆರ್.ಎಸ್.ಎಸ್‌ನಿಂದ ದಿಟ್ಟ ಹೋರಾಟ

ಮುದ್ದೇಬಿಹಾಳ : ಹಿಂದುತ್ವಕ್ಕೆ ಸವಾಲು,ಸಮಸ್ಯೆ ಎದುರಾದಾಗ ಆರ್.ಎಸ್.ಎಸ್ ಮುಂಚೂಣಿಯಲ್ಲಿ ನಿಂತು ಹಿಂದೂ ಸಮಾಜವನ್ನು ಒಗ್ಗೂಡಿಸಿ ಹೋರಾಟ ನಡೆಸಲು ಪ್ರೇರಣಾ ಶಕ್ತಿಯಾಗಿದೆ ಎಂದು ಆರ್.ಎಸ್.ಎಸ್ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಣಿ ಸದಸ್ಯ ಅರವಿಂದರಾವ ದೇಶಪಾಂಡೆ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದ ಸಿದ್ದೇಶ್ವರ ವೇದಿಕೆ ಮುಂಭಾಗದಲ್ಲಿ ಶನಿವಾರ ಆರ್.ಎಸ್.ಎಸ್ ಪಥಸಂಚಲನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.


ಆರ್.ಎಸ್.ಎಸ್ ಮುಸಲ್ಮಾನರ ವಿರೋಧಿ ಎಂದು ಬಿಂಬಿಸಲಾಗುತ್ತದೆ.ಆದರೆ ಸಂಘದಲ್ಲಿ ಬಂದರ‍್ಯಾರು ಅದನ್ನು ಒಪ್ಪಿಲ್ಲ.ಸಂಘದಲ್ಲೂ ಮುಸ್ಲಿಂ ಬಾಂಧವರು ಇದ್ದಾರೆ. ದೇಶವನ್ನು ಮಾತೃಭೂಮಿ, ತಾಯಿ ಎಂದು ಭಾವಿಸಿದವರು, ಭಾರತ ಮಾತಾಕೀ ಜೈ ಎಂದು ಹೇಳುವವರು ಅವರೆಲ್ಲರೂ ಹಿಂದೂಗಳು.ಪೂಜಾ ಪದ್ಧತಿ, ಧರ್ಮ,ಆಚರಣೆಗಳು ಏನೇ ಇದ್ದರೂ ಅವರು ಹಿಂದೂಗಳೇ ಆಗಿದ್ದಾರೆ.ಇಂಡೋನೇಷ್ಯಾದಲ್ಲಿ ಶೇ.95ರಷ್ಟು ಮುಸ್ಲಿಂರಿದ್ದರೂ ಅಲ್ಲಿನ ಏರಲೈನ್ ಹೆಸರು ಗರುಡಾ ಏರಲೈನ್ಸ್ ಎಂದು ಇರಿಸಲಾಗಿದೆ.ಏರಪೋರ್ಟ್ನಲ್ಲಿ ರಾಮಾಯಣದ ದೃಶ್ಯಗಳನ್ನು ಅಳವಡಿಸಲಾಗಿದೆ.ಹಿಂದೂ ಮಂದಿರಗಳ ಮೇಲೆ, ಹಿಂದೂ ಸಮಾಜದ ಮೇಲೆ ಸಮಸ್ಯೆ ಆದಾಗ ಆರ್.ಎಸ್.ಎಸ್ ಅಲ್ಲಿರುತ್ತದೆ ಎಂದರು.


ಶಿವಾಜಿ ಮಹಾರಾಜರಂತಹ ವ್ಯಕ್ತಿ ಹಿಂದವೀ ಸಮಾಜ ಕಟ್ಟಿದ್ದರಿಂದ ಹಿಂದೂಗಳು ಉಳಿದಿದ್ದೇವೆ. ಸಂಘ ಆಸ್ಪತ್ರೆ, ರಕ್ತನಿಧಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಸಮಾಜದಲ್ಲಿ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. 1990ರ ನಂತರ ಹಿಂದುತ್ವಕ್ಕೆ ದೇಶದಲ್ಲಿ ಜಗತ್ತಿನಲ್ಲಿ ಮಾನ್ಯತೆ ದೊರೆಯುತ್ತಿದೆ.ಹಿಂದೆ ನಾವೆಲ್ಲ ಹಿಂದೂ ಎಂದು ಹೇಳಿಕೊಳ್ಳುತ್ತಿರಲಿಲ್ಲ.ಈಗ ನಾವು ದೇಶದ ಮೂಲೆ ಮೂಲೆಯಲ್ಲಿ ಹಿಂದೂ ಎಂದು ಹೇಳಿಕೊಳ್ಳುವಂತಾಗಿದೆ. ಜಗತ್ತಿನ ವಿವಿಧ ರಾಷ್ಟçಗಳಲ್ಲಿ ಐದು ಕೋಟಿ ಜನ ಹಿಂದೂಗಳಿದ್ದು ಅವರನ್ನು ಒಗ್ಗೂಡಿಸಿ ಶಕ್ತಿ ತುಂಬ ಕೆಲಸ ಆರ್.ಎಸ್.ಎಸ್ ಮಾಡುತ್ತಿದೆ.ಈಗಾಗಲೇ 52 ದೇಶಗಳಲ್ಲಿ ಸಂಘದ ಕೆಲಸ ನಡೆಯುತ್ತಿದೆ ಎಂದರು.

ಗಣ್ಯ ವರ್ತಕ ಬಿ.ಸಿ.ಮೋಟಗಿ ವೇದಿಕೆಯಲ್ಲಿದ್ದರು.ವಿನೋದ ಮಡಿವಾಳರ ಪ್ರಾರ್ಥನಾ ಗೀತೆ ಹಾಡಿದರು.ಗಿರೀಶ ದೇಶಪಾಂಡೆ ಸ್ವಾಗತಿಸಿದರು. ಪ್ರಭು ನಂದೆಪ್ಪನವರ ಹಾಗೂ ರಾಘವೇಂದ್ರ ಕುಲಕರ್ಣಿ ನಿರೂಪಿಸಿದರು.ಚೇತನ ಮಾಗನೂರ ವಂದಿಸಿದರು.

Latest News

ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಸಿದ್ದಪ್ಪ ಪೂಜಾರಿ ಆಯ್ಕೆ

ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಸಿದ್ದಪ್ಪ ಪೂಜಾರಿ ಆಯ್ಕೆ

ಮುದ್ದೇಬಿಹಾಳ : ನಗರದ ಎಂಜಿವಿಸಿ ಕಾಲೇಜಿನ ವಿಶೇಷಚೇತನ ವಿದ್ಯಾರ್ಥಿ ವಿನಾಯಕ ಸಿದ್ದಪ್ಪ ಪೂಜಾರಿರಾಷ್ಟ್ರೀಯ ಹಿರಿಯ

ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾದ ಆಕಾಶ್

ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾದ ಆಕಾಶ್

ಮುದ್ದೇಬಿಹಾಳ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಹತ್ತು ವರ್ಷದ ಬಾಲಕನೋರ್ವನ ಕಣ್ಣುಗಳನ್ನು ದಾನ ಮಾಡುವ

ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಸಿಂಡಿಕೇಟ್‌ಗೆ ಹೊಸಮನಿ ನಾಮನಿರ್ದೇಶನ

ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಸಿಂಡಿಕೇಟ್‌ಗೆ ಹೊಸಮನಿ ನಾಮನಿರ್ದೇಶನ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕು ಕುಂಟೋಜಿ ಗ್ರಾಮದ ನಿವಾಸಿ, ಬಸವನ ಬಾಗೇವಾಡಿ ತಾಲೂಕಿನ

ಆಲಿಕಲ್ಲು ಮಳೆಯಿಂದ ಬೆಳೆ‌ ಹಾನಿ:                                            3 ದಿನದೊಳಗೆ‌ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ‌

ಆಲಿಕಲ್ಲು ಮಳೆಯಿಂದ ಬೆಳೆ‌ ಹಾನಿ: 3 ದಿನದೊಳಗೆ‌ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ‌

ವಿಜಯಪುರ : ಇತ್ತೀಚಿಗೆ ಬೀಸಿದ‌‌ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕೃಷಿ, ತೋಟಗಾರಿಕಾ ಬೆಳೆ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ತಮಗೆ ಸಾಷ್ಟಾಂಗ ಹಾಕಿರುವುದಾಗಿ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ಶಾಸಕ ನಾಡಗೌಡರು ನಿಲ್ಲಿಸಬೇಕು.ಹಾಗೊಂದು ವೇಳೆ ಸಾಕ್ಷಿ ಏನಾದರೂ ಇದ್ದರೆ ನನ್ನ ತಲೆ ನಾನೇ ತಗೆದುಕೊಳ್ಳಲು ಸಿದ್ದನಿದ್ದೇನೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ದಾಸೋಹ ನಿಲಯದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಆ ಅಯೋಗ್ಯನ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ.ಅಷ್ಟೇ ಅಲ್ಲದೇ ಕಾಂಗ್ರೆಸ್,

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ಮುದ್ದೇಬಿಹಾಳ : ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳ ಮದುವೆಗಳನ್ನು ದುಂದುವೆಚ್ಚದಲ್ಲಿ ಮಾಡುವಬದಲು ಅದೇ ಖರ್ಚಿನಲ್ಲಿ ನೂರಾರು ಬಡವರ ಮಕ್ಕಳ ಮದುವೆಗಳನ್ನು ಮಾಡಿಕೊಟ್ಟರೆ ಸಮಾಜಕ್ಕೆ ಮಾದರಿಯಾಗಿರುತ್ತಾರೆ.ರಾಜಕಾರಣಿಗಳ ಬುದ್ಧಿ ಬದಲಾಗಬೇಕಿದೆ ಎಂದು ಬಸವನ ಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಶುಕ್ರವಾರ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಬ್ಬ ರಾಜಕಾರಣಿಯ ಮಗನ ಮದುವೆಯಲ್ಲಿ ಮಾಡುವ ಖರ್ಚು 500 ಮದುವೆಗಳನ್ನು ಮಾಡಿಕೊಡಬಹುದಾಗಿದೆ.ಮಠಗಳಲ್ಲಿ