
ಮುದ್ದೇಬಿಹಾಳ / ನಾಲತವಾಡ : ಅಸ್ಕಿ ಫೌಂಡೇಶನ್‌ದಿಂದ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಕಾಂಗ್ರೆಸ್ ಮುಖಂಡರು, ಫೌಂಡೇಶನ್ ಅಧ್ಯಕ್ಷ ಸಿ. ಬಿ. ಅಸ್ಕಿ ಅವರ ನೇತೃತ್ವದಲ್ಲಿ ಮಾ.24 ರಂದು ನಾಲತವಾಡ ಪಟ್ಟಣದಲ್ಲಿ ರಂಜಾನ್ ಹಬ್ಬದ ನಿಮಿತ್ಯ ಇಫ್ತಾರಕೂಟವನ್ನು ಆಯೋಜಿಸಲಾಗಿದೆ.

ನಾಲತವಾಡ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಅಂದು ಸಂಜೆ 6.30ಕ್ಕೆ ಇಫ್ತಾರಕೂಟ ನಡೆಸಲಾಗುತ್ತಿದೆ ಎಂದು ಅಸ್ಕಿ ಫೌಂಡೇಶನ್ ಉಪಾಧ್ಯಕ್ಷ ವೀರೇಶಗೌಡ ಅಸ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.