ಮುದ್ದೇಬಿಹಾಳ : ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ಏಳು ತಿಂಗಳ ಗರ್ಭಿಣಿ ಹತ್ಯೆಗೈದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಡಿಎಸ್ಎಸ್ ಕಾದ್ರೋಳ್ಳಿ ಬಣದ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಸಂಘಟನೆ ಮುಖಂಡರು ಶಿರಸ್ತೇದಾರ ಎ.ಬಿ.ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು ಎಂಬ ಕಾರಣಕ್ಕೆ ಆಕೆಯ ತಂದೆ ಹಾಗೂ ಇತರರು ಸೇರಿ ಗರ್ಭಿಣಿಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳಾದ ಪ್ರಕಾಶಗೌಡ ಪಾಟೀಲ,ವೀರನಗೌಡ,ಅರುಣಗೌಡ ಅವರನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಬಾಲಚಂದ್ರ ಹುಲ್ಲೂರ,ಗೀತಾ ಮಾದರ,ಮಾರುತಿ ಸಿದ್ದಾಪೂರ, ಆನಂದ ಮುದೂರ,ರಾಘವೇಂದ್ರ ಮಾದರ,ಸಂಗು ಢವಳಗಿ,ಮುತ್ತು ಅಮರಗೋಳ ಮೊದಲಾದವರು ಇದ್ದರು.







