ಭಾವಸಾರ ಕ್ಷತ್ರಿಯ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ಪದಗ್ರಹಣ

ಭಾವಸಾರ ಕ್ಷತ್ರಿಯ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ಪದಗ್ರಹಣ

ಇಳಕಲ್: ಭಾವಸಾರ ಕ್ಷತ್ರೀಯ ಸಮಾಜದಿಂದ
ಇಳಕಲ್ ಭಾವಸಾರ ಕ್ಷತ್ರಿಯ ಪತ್ತಿನ ಸಹಕಾರ ಸಂಘ ನಿ, ಇಲಕಲ್ಲ ಇದರ ಉದ್ಘಾಟನಾ ಹಾಗೂ ನಿರ್ದೇಶಕ ಮಂಡಳಿಯ ಪದಗ್ರಹಣ ಸಮಾರಂಭ ನಗರದ ಶ್ರೀ ಹಿಂಗುಲಾಂಬಿಕಾ ದೇವಿ ದೇವಸ್ಥಾನದ ಸಭಾ ಭವನದಲ್ಲಿ ನೆರವೇರಿತು.

ದಿವ್ಯ ಸಾನಿಧ್ಯ ವಹಿಸಿದ್ದ ಸದ್ಗುರು ಶ್ರೀ ಹ.ಬ.ಪ ಪ್ರಭಾಕರದಾದಾ ಬೋದಲೆ ಮಹಾರಾಜ
ಶ್ರೀ ಕ್ಷೇತ್ರ ಪಂಢರಪುರ – ಬಾಗಲಕೋಟ, ಸಮಾಜದ ಹಿರಿಯರಾದ ಪಲ್ಲಾದರಾವ್ ಮಹೇಂದ್ರಕರ, ದಿಲೀಪ ದೇವಗಿರಿಕರ, ಲಕ್ಷ್ಮಣ್ ಮಹೇಂದಕರ, ನಾರಾಯಣರಾವ ಅಂಬೋರೆ ಸೇರಿದಂತೆ ವೇದಿಕೆ ಮೇಲಿದ್ದ ಗಣ್ಯರು ಸಸಿಗೆ ನೀರು ಎರೆದು, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಕುರಿತು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಶಾಂತ್ ಹಂಚಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಸಮಾಜದ ಹಿರಿಯರಾದ ದಿಲೀಪ್ ದೇವಗೀರಕರ್ ಅವರು ಮಾತನಾಡಿ, ಸಮಾಜದಹಿರಿಯರ ಬಹುದಿನಗಳ ಕನಸು ಇಂದು ಈ ಯುವಕರ ಮೂಲಕ ಸಕಾರಗೊಂಡಿದೆ. ಸಮಾಜ ಬಾಂಧವರು ಈ ಸರ್ಕಾರಿ ಸಂಸ್ಥೆಯ ಸದುಪಯೋಗ ಪಡೆದುಕೊಂಡು ತಮ್ಮ ಉದ್ಯೋಗ ವ್ಯಾಪಾರಗಳನ್ನು ಬಲಪಡಿಸಿ ಜೀವನದಲ್ಲಿ ಯಶಸ್ಸು ಕಾಣುವಂತಾಗಲಿ ಎಂದು ಶುಭ ಹಾರೈಸಿದ್ರು.

ಇದನ್ನು ಓದಿ: ಮಚ್ಚಿನಿಂದ ಹೊಡೆದಾಡಿಕೊಂಡು ಸತ್ತ ನವಜೋಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮೂರನೇ ವ್ಯಕ್ತಿ ಕೈವಾಡ ಶಂಕೆ

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಸದ್ಗುರು ಪ್ರಭಾಕರ್ ದಾದಾ ಬೋಧಲೆ ಮಹಾರಾಜ್ ಅವರು ಆಶೀರ್ವಚನ ನೀಡಿ, ಈ ಮೊದಲಿಗಿಂತಲೂ ಸಮಾಜ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆದಿದೆ. ಈಗಿನ ಮಕ್ಕಳಿಗೆ ಅತ್ಯುತ್ತಮ ಸಂಸ್ಕಾರ ನೀಡುವ ಅವಶ್ಯಕತೆ ಇದೆ. ಅಜವಾದಾರಿಯನ್ನು ತಂದೆ ತಾಯಿಯರು ಹಿರಿಯರು ನಿರ್ವಹಿಸಬೇಕು.

ಯಾವುದೇ ಕಾರಣಕ್ಕೂ ಸಮಾಜ ತಲೆತಗ್ಗಿಸುವಂತಹ ಕೆಲಸ ಆಗಬಾರದು. ಈಗ ನಾನು ಉದ್ಘಾಟಿಸಿರುವ ಈ ಪತ್ತಿನ ಸಹಕಾರಿ ಸಂಘ ಮುಂದೊಂದು ದಿನ ಹೆಮ್ಮೆರವಾಗಿ ಬೆಳೆಯುತ್ತಿದೆ ಎಂಬ ನಂಬಿಕೆ ನನಗಿದೆ, ಮುಂದೊಂದು ದಿನ ಈ ಸಹಕಾರಿ ಸಂಘ ಬ್ಯಾಂಕ್ ಆಗಿ ಪರಿವರ್ತನೆ ಯಾಗುವುದನ್ನು ನಾನು ನೋಡಲಿದ್ದೇನೆ ಎಂದು ಭವಿಷ್ಯ ನುಡಿದರು.

ಅಲ್ಲದೆ ಸಿಬ್ಬಂದಿ ವರ್ಗದವರು ಆಡಳಿತ ಮಂಡಳಿಯವರು ಗ್ರಾಹಕರೊಂದಿಗೆ ಸೌಜನ್ಯಪೂರ್ವಕವಾಗಿ ಪತಿನ ಸಹಕಾರಿ ಸಂಘದ ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದು ಆಶೀರ್ವದಿಸಿದ್ದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪೂಜ್ಯರು ಹಾಗೂ ಸಮಾಜದ ಹಿರಿಯರು ಗೌರವಿಸಿ ಸಕರಿಸಿದ್ದರು.

ಆಡಳಿತ ಮಂಡಳಿ ವತಿಯಿಂದ ವೇದಿಕೆ ಮೇಲಿದ್ದ ಗಣ್ಯರ ಸಮ್ಮುಖದಲ್ಲಿ ಶೇರುದಾರರಿಗೆ ಶೇರು ಪತ್ರ ಹಾಗೂ ಖಾತೆದಾರರಿಗೆ ಪಾಸ್ ಬುಕ್ ವಿತರಣೆ ಮಾಡಲಾಯಿತು.

ನೂತನ ಆಡಳಿತ ಮಂಡಳಿ ವತಿಯಿಂದ ಸಮಾಜದ ಗುರುಗಳು ಹಾಗೂ ಸಮಾಜದ ಹಿರಿಯರಿಗೆ ಗೌರವಿಸಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಇಳಕಲ್ ಭಾವಸಾರ ಕ್ಷತ್ರಿಯ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಪ್ರಶಾಂತಕುಮಾರ ಹಂಚಾಟೆ, ಉಪಾಧ್ಯಕ್ಷ ಸುನೀಲಕುಮಾರ ದೇವಗಿರಿಕರ, ನಿರ್ದೇಶಕರಾದ
ಪ್ರಕಾಶ ದೇವಗಿರಿಕರ, ರಮೇಶ್ ಹಂಚಾಟೆ, ಜಮದಗ್ನಿ ಮಹೇಂದ್ರಕರ, ಲಕ್ಷಣ ದಾಯಮಲೆ, ರಾಮಚಂದ್ರ ಕಠಾರೆ, ಸಂತೋಷ ದೇವಗಿರಿಕರ,
ಭಾಗ್ಯಶ್ರೀ ಹಂಚಾಟೆ, ರೇಣುಕಾ ದೇವಗಿರಿಕರ, ಗೀತಾಬಾಯಿ ಲೋಕರೆ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು, ಸಮಾಜದ ಹಿರಿಯರು, ಯುವಕರು, ಪ್ರಮುಖರು ಪಾಲ್ಗೊಂಡಿದ್ದರು.

Latest News

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನೂತನ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಬೆಂಗಳೂರು, ಜೂನ್‌ 26: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ವಿವಿಧ ಕಾರ್ಖಾನೆಗಳು ಹಾಗೂ ಮನೆ ಕೆಲಸದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಚರ್ಚಿಸಿದರು. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಕಾರ್ಮಿಕರ ಸಮಸ್ಯೆ ಚರ್ಚೆ:ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಬೆಂಗಳೂರು ಇವರ ಮನವಿ ಮೇರೆಗೆ ಮೆ. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಲಿಮಿಟೆಡ್.. ಕಾರ್ಮಿಕರ ಸಮಸ್ಯೆಗಳ ಕುರಿತು ಸಭೆ ನಡೆಸಿ ಚರ್ಚಿಸಿದರು.

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಮುದ್ದೇಬಿಹಾಳ : ಜೂ.27 ರಿಂದ ಮೊಹರಂ ಹಬ್ಬದ ಆಚರಣೆ ಆರಂಭಗೊಳ್ಳಲಿದ್ದು ಶಾಂತಿಯುತವಾಗಿ ಆಚರಿಸುವಂತೆ ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಜೂ.27 ರಂದು ಮೊಹರಂ ಹಬ್ಬದ ಆಚರಣೆ ಆರಂಭಗೊಂಡು 29 ರಂದು ದಫನ್ ಮಾಡಲಾಗುತ್ತದೆ. ಈ ಸಮಯದಲ್ಲಿ ಅಲಾಯ್ ದೇವರುಗಳನ್ನು ಪ್ರತಿಷ್ಠಾಪಿಸುವ ಸಮಿತಿಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತವಾಗಿದ್ದು ಉಭಯ