ಕೆಜಿಎಫ್: ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನವ ವಧು ಹಾಗೂ ವರ ಬಡಿದಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ವ್ಯಕ್ತಿಯ ಕೈವಾಡ ಇರುವ ಬಗ್ಗೆ ವಧು ಲಿಖಿತಶ್ರೀ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮೃತ ಲಿಖಿತ ಶ್ರೀಯ ತಾತ ಹಾಗೂ ತಂಗಿ ಮೂರನೇ ವ್ಯಕ್ತಿಯ ಕೈವಾಡದ ಬಗ್ಗೆ ಆರೋಪ ಮಾಡಿದ್ದಾರೆ.
ಇದನ್ನು ಓದಿ: ನಿನ್ನೆ ಬೆಳಗ್ಗೆ ಮದುವೆ, ಮಧ್ಯಾಹ್ನ ಜಗಳ, ಸಂಜೆ ವಧು.. ಇಂದು ವರ ಸಾವು..!
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಡ ಹೆಂಡತಿ ಇಬ್ಬರೂ ಬಹಳಷ್ಟು ಅನ್ಯೋನ್ಯವಾಗಿದ್ದವರು, ಪ್ರೀತಿಸಿ ಮದುವೆಯಾಗಿದ್ದವರು. ಇಬ್ಬರು ಹೊಡೆದಾಡಿಕೊಂಡಿರುವುದು ಅನುಮಾನ. ಯಾರೋ ಮೂರನೇ ವ್ಯಕ್ತಿ ಇದರ ಹಿಂದೆ ಇದ್ದಾರೆ ಎಂದು ನವ ವಧು ವರನ ಸಾವಿನ ಬಗ್ಗೆ ಲಿಖಿತ ಶ್ರೀ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಮದುವೆಯಾದ ದಿನವೇ ಹೊಡೆದಾಡಿದ ದಂಪತಿ; ವಧು ದುರ್ಮರಣ, ವರನ ಸ್ಥಿತಿ ಚಿಂತಾಜನಕ!
ನಾವು ಮದುವೆಗೆ ಹೋಗಿದ್ದೆವು. ಇಬ್ಬರೂ ತುಂಬಾ ಖುಷಿಯಾಗಿ ಇದ್ದರು. ಅವರು ಹೊಡೆದಾಡಿಕೊಂಡಿರುವುದು ಸುಳ್ಳು. ಇಬ್ಬರನ್ನೂ ಯಾರೋ ಹೊಡೆದಿರುವ ಅನುಮಾನ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.