ಮುದ್ದೇಬಿಹಾಳ : ಈಚೇಗೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಚಿನ್ನದ ಅಂಗಡಿ ಕಳ್ಳತನ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಚಿನ್ನಾಭರಣ ಮಳಿಗೆಗಳು,ಅಂಗಡಿಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಪೊಲೀಸ್ ಇಲಾಖೆಯಿಂದ ಮೇಲಧಿಕಾರಿಗಳು ಸೂಚನೆ ನೀಡಿದ್ದು ಅಂಗಡಿಕಾರರು ಸೂಕ್ತ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರಾಫ ವರ್ತಕರ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.
ಬಂಗಾರದ ಅಂಗಡಿಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು,ಸಿಸಿಟಿವಿ ಸರಿ ಇರುವ ಬಗ್ಗೆ ಅರಿತುಕೊಂಡು ಸದಾ ಕಾರ್ಯನಿರ್ವಹಣೆಯಲ್ಲಿರುವಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.ಅಂಗಡಿಯಲ್ಲಿ ಸೇಫ್ಟಿ ಲಾಕರ್ ಇರುವ ಬಗ್ಗೆ ಅಂಗಡಿಗೆ ಸಂಶಯುಕ್ತ ಜನರು ಬಂದಾಗ ಕೂಡಲೇ ಪೊಲೀಸ ಠಾಣೆಯ ಗಮನಕ್ಕೆ ತರಬೇಕು ಎಂದು ಹೇಳಿದರು.
ವರ್ತಕ ವೀರೂಪಾಕ್ಷಿ ಪತ್ತಾರ ಮಾತನಾಡಿ, ದ್ಯಾಮವ್ವನ ಕಟ್ಟೆಯ ಬಳಿ ಪೊಲೀಸರ ಚೌಕಿ ಸ್ಥಾಪಿಸಬೇಕು.ಅಲ್ಲಿ ಪೊಲೀಸರು ಸದಾ ಇರುವಂತೆ ನೋಡಿಕೊಂಡರೆ ಕಳ್ಳರಿಗೆ ಭಯ ಇರುತ್ತದೆ ಎಂದರು.
ವರ್ತಕ ಸುನೀಲ ಇಲ್ಲೂರ, ವಿಜಯಕುಮಾರ ಬಡಿಗೇರ ಮಾತನಾಡಿದರು. ಎ.ಎಸ್.ಐ ಕೆ.ಎಸ್.ಅಸ್ಕಿ , ಸರಾಫ ವರ್ತಕರ ಸಂಘದ ಪದಾಧಿಕಾರಿಗಳಾದ ಕಲ್ಯಾಣಕುಮಾರ ನಾಗಠಾಣ, ಜೆ.ಎಸ್.ಓಸ್ವಾಲ್, ಬಿಪಿನ ಓಸ್ವಾಲ್,ಮಲ್ಲಣ್ಣ ಪತ್ತಾರ,ಮಳೀಯಪ್ಪ ಪತ್ತಾರ,ರಾಘವೇಂದ್ರ ಪತ್ತಾರ ಇತರರು ಇದ್ದರು.







