ಬರಹ: ಶ್ರೀಕಾಂತ ಸರಗಣಾಚಾರಿ
ಕುಷ್ಟಗಿ: ಹಿಂದೂ – ಮುಸ್ಲಿಂ ಭಾಂದವರು ಸೌಹಾರ್ಧತೆಯುತವಾಗಿ ಆಚರಿಸಿಕೊಂಡು ಬಂದಿರುವ ನಾಲ್ಕು ದಶಕಗಳ ಸಂಭ್ರಮದ ನಡೆವೆಯೂ ಪ್ರತಿವರ್ಷಕ್ಕಿಂತ ಈ ವರ್ಷ ವಿಭಿನ್ನವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ವಿಘ್ನ ನಿವಾರಣೆಗೆ:
ಪಟ್ಟಣವು ವಾಣ ಜ್ಯ ವಹಿವಾಟು ಮಾರುಕಟ್ಟೆಯ ಕೇಂದ್ರವಾಗಿದ್ದ ಈ ಹಿಂದಿನ ವೆಳೆಯಲ್ಲಿ ಹಳೆ ಬಜಾರ ಓಣ ಯ ಪ್ರತಿಯೊಬ್ಬ ಹಿಂದೂ- ಮುಸ್ಲಿಂ ಸಮುದಾಯದವರು ಸಭೆ ಸೇರಿ ವಿಘ್ನ ವಿನಾಯಕನ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಊರಿಗೆ ಒಳ್ಳೆಯದು ಆಗಲಿ ಎಂಬ ಸದುದ್ದೇಶದಿಂದ ಹಿಂದೂ, ಮುಸ್ಲಿಂ ಗೆಳೆಯರ ಬಳಗದವನ್ನು ರಚಿಸಿಕೊಂಡು ಗಣೇಶೋತ್ಸವ ಆರಂಭಿಸಲು ನಿರ್ಧಾರ ಮಾಡಿ, ೧೯೮೩ ರಲ್ಲಿ ಪ್ರಥಮ ಬಾರಿಗೆ ಗಣೇಶೋತ್ಸವ ಆರಂಭಿಸಿದರು.
ಅಲ್ಲಿಂದ ಇಲ್ಲಿಯ ವರೆಗೂ ಯಾವುದೇ ಅಡೆತಡೆಗಳು ಆಗದಂತೆ ನಿರಂತರವಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬಂದಿದ್ದಾರೆ. ಹಿಂದು-ಮುಸ್ಲಿಂ ಧರ್ಮ ಸಮನ್ವಯತೆಗೆ ಸಾಕ್ಷಿಯಾಗುವ ಮೂಲಕ ಹಲವಾರು ಜನ ಜಾಗೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಜನ ಮನ್ನಣೆ ಗಳಿಸಿದ್ದಾರೆ.
ಭಾವೈಕ್ಯೆತೆಗೆ ಹೆಸರು ವಾಸಿ:
ಪ್ರತಿವರ್ಷವು ಪ್ರತಿಷ್ಠಾಪಿತ ಗಣೇಶ ಮೂರ್ತಿ ಒಂದು ವರ್ಷದಂತೆ ಇನ್ನೊಂದು ವರ್ಷದಲ್ಲಿ ವಿಭಿನ್ನವಾಗಿ ವಿವಿಧ ಅವತಾರಗಳಲ್ಲಿ ವೈವಿದ್ಯಮಯವಾಗಿ ಆಚರಿಕೊಂಡು ಬಂದಿರುವುದು ವಿಶೇಷ. ಹಿಂದಿನ ಕೆಲ ವರ್ಷಗಳ ಹಿಂದೆ ತೆಂಗಿನ ಕಾಯಿ, ಯಡೆಯೂರು ಸಿದ್ದಲಿಂಗೇಶ್ವರ, ಪುಟ್ಟರಾಜ ಕವಿ ಗವಾಯಿಗಳ ಮೂರ್ತಿ ಸೇರಿದಂತೆ ಇನ್ನೂ ಅನೇಕ ವಿಭಿನ್ನ ಗಣೇಶನನ್ನು ಕೂಡಿಸುತ್ತಾ ಬಂದಿದ್ದಾರೆ. ಹಳೆ ಬಜಾರದ ಗಣಪ ಎಂದರೆ ಪ್ರತಿ ವರ್ಷ ಒಂದಾಲ್ಲ ಒಂದು ರೀತಿ ವೈಶ್ಯಷ್ಠತೆಯಿಂದ ಕೂಡಿರಬೇಕು ಎಂಬ ಛಲದಿಂದ ವಿಘ್ನ ವಿನಾಯಕನನ್ನು ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಅದೇ ಪ್ರೀತಿ, ಅದೇ ವಿಶ್ವಾಸ ಮೇಳೈಸಿದ್ದು ಅದರಲ್ಲೂ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮೆರವಣ ಗೆಯಲ್ಲು ವಿಶೇಷತೆ ಉಳಿಸಿಕೊಂಡು ಬರುವ ಮೂಲಕ ಭಾವೈಕ್ಯೆತೆ ಸಾರುತ್ತಿದ್ದಾರೆ.
ಹಿನ್ನೆಯಲ್ಲಿ: ಗುಡಗೇರಿಯ ದ್ಯಾಮವ್ವನ ಗುಡಿಗೆ ಸಂತ ಶಿಶುನಾಳ ಶರೀಫರು ಹಾಗೂ ಅವರ ಗುರುಗಳಾದ ಗುರುಗೋವಿಂದ ಭಟ್ಟರು ಹೋಗಿದ್ದ ಸಂದರ್ಭದಲ್ಲಿ ಅವರ ಬಳಿ ಇದ್ದ (ಮದ್ಯ ) ಶಂಕರಿ ಖಾಲಿಯಾಗಿರುತ್ತದೆ. ಆವಾಗ ಅವರ ಹತ್ತಿರ ದುಡ್ಡುನೂ ಇಲ್ಲದ ಬಗ್ಗೆ ಗೋಂವಿದ ಭಟ್ಟರಿಗೆ ಸಂತ ಶಿಶು ಶರೀಫಜ್ಜನವರು ಹೇಳುತ್ತಾರೆ. ಆ ಸಂದರ್ಭದಲ್ಲಿ ಶ್ರೀದ್ಯಾಮವ್ವನ ಬಳಿ ಶರೀಪಜ್ಜನವರು ದ್ಯಾಮವ್ವ ನ ಬೇಡಿಕೊಂಡಾಗ ದ್ಯಾಮವ್ವ ದೇವರು ಪ್ರತ್ಯಕ್ಷಳಾಗಿ ಅವರಿಗೆ ನತ್ತು (ಮೂಗತಿ) ಕೊಡುತ್ತಾಳೆ. ಅವಾಗ ಅದನ್ನು ಕೊಟ್ಟು ಅದರಿಂದ ಅವರು (ಮದ್ಯ) ಶಂಕರಿ ಸರಾಯಿ ಖರೀದಿಸಿ ತಂದು ಸೇವೆನೆ ಮಾಡಿ ದ್ಯಾಮವ್ವನ ಗುಡಿಯಲ್ಲಿ ಮಲಗಿರುತ್ತಾರೆ.
ಬೆಳಿಗ್ಗೆ ಪೂಜಾರಿಯೂ ಪೂಜೆ ಮಾಡುವಾಗ ದೇವಿಯ ಮೂಗಿನಲ್ಲಿ ನತ್ತು ಕಾಣ ಸುವದಿಲ್ಲ. ಆಗ ಗ್ರಾಮಸ್ಥರು ಗುರು, ಶಿಷ್ಯರನ್ನು ಕರೆದು ವಿಚಾರಿಸಿದಾಗ ಪನಃ ಆ ನತ್ತು(ಮೂಗತಿ) ದೇವಿಯ ಮೂಗಿನಲಿರುತ್ತದೆ. ಆದನ್ನು ಕಂಡು ಗ್ರಾಮಸ್ಥರು ಆಶ್ಚರ್ಯಗೊಂಡು ಬಗ್ಗೆ ಇತಿಹಾಸ ತಿಳಿದುಕೊಂಡ ನಾವುಗಳು ಅದೇ ಹೊಲಿಕೆಯಲ್ಲಿ ಪಟ್ಟಣದ ಆರಾಧ್ಯ ದೇವಿತೆ ಹಾಗೂ ಗ್ರಾಮದೇವೆತೆ ಶ್ರೀದ್ಯಾಮವ್ವದೇವಿ ದೇವಸ್ಥಾನವನ್ನು ಹೊಲುವ ಪ್ರತಿರೂಪ ಪ್ರತಿಷ್ಠಾಪಿಸಿ, ದೇವಸ್ಥಾನದ ಕಟ್ಟೆಯ ಮೇಲೆ ಶ್ರೀಗಣೇಶ ನು ತಲೆಗೆ ರೂಮಾಲು ಸುತ್ತಿಕೊಂಡು ಕಟ್ಟಿಯ ಮೇಲೆ ಕುಳಿತಿರುವುದು ಮತ್ತು ಈಶ್ವರ ಮೂರ್ತಿ ಗಮನ ಸೆಳೆಯುತ್ತಿದೆ.
ಅದರಂತೆ, ಕಟ್ಟೆಯ ಬಲಭಾಗದಲ್ಲಿ ಸಂತ ಶಿಶುನಾಳ ಶರಿಫಜ್ಜನವರ ಪ್ರತಿರೂಪ ಹಾಗೂ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಂರವರ ಮೂರ್ತಿ ಸ್ಥಾಪಿಸಲಾಗಿದೆ.
ಇದನ್ನೂ ಓದಿ: Karnataka cm race: ‘ಬಂಡೆ’ ಫಾರಿನ್ ಟೂರ್; ಡಿಕೆಶಿಗೂ ಮೊದಲೇ ಅಮೆರಿಕದಲ್ಲಿ ರಾಹುಲ್ ಗಾಂಧಿ!
ಆಕರ್ಷಣೆಯ ಕೇಂದ್ರ ಬಿಂದುವಾಗಿ ಸರ್ವಧರ್ಮದವರು ಸೌರ್ಹಾದತೆಯಿಂದ ಗಣೇಶೋತ್ಸವವನ್ನು ಆಚರಿಕೊಂಡು ಬರಲಾಗುತ್ತಿದೆ ಎಂದು ಶ್ರೀಧರ ಎನ್ ಘೋರ್ಪಡೆ, ಅನ್ವರ್ ಅತ್ತಾರ್, ಅಮಿನುದ್ದಿನ್ ಮುಲ್ಲಾ, ಸಂತೋಷ ಸರಗಣಚಾರಿ, ಬಸವರಾಜ ವಣಗೇರಿ, ರವಿ ಅಗಳಕೇರಿ, ಕಳಕಪ್ಪ ಬಸಿರಿಗಿಡದ, ಬಸವರಾಜ ಗುತ್ತೂರು, ಸಂಗಮೇಶ ಕುರ್ನಾಳ, ಶಿವಕುಮಾರ , ಗೋಪಾಲ ಶೆಟ್ಟರ್, ವಸಂತ ರಾಯ್ಕರ್ ಹಾಗೂ ಇತರರು ತಿಳಿಸಿದರು.