ಬೆಂಗಳೂರು: ಇದೇ ವರ್ಷ ನವೆಂಬರ್ 5ರಂದು ಅಮೆರಿಕ ಅಧ್ಯಕ್ಷರ ಆಯ್ಕೆಯ (Election of the President of the United States) ಐತಿಹಾಸಿಕ ಚುನಾವಣೆ ನಡೆಯಲಿದ್ದು, ಡೆಮಾಕ್ರೆಟಿಕ್ ಪಕ್ಷದಿಂದ ಭಾರತೀಯ ಮೂಲದ ಕಮಲಾ ಹ್ಯಾರೀಸ್ (Kamala Harris) ಅಭ್ಯರ್ಥಿಯಾಗಿದ್ದರೆ ರಿಪಬ್ಲಿಕನ್ ಪಕ್ಷದಿಂದ (Republican Party) ಡೊನಾಲ್ಡ್ ಟ್ರಂಪ್ 2ನೇ ಸಲ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಈಗ ಕಮಲಾ ಹ್ಯಾರಿಸ್ ಪರವಾಗಿ ಪ್ರಚಾರ ಮಾಡಲು ಅನಿವಾಸಿ ಭಾರತೀಯರು, ಅಮೆರಿಕದಲ್ಲಿರುವ ಕನ್ನಡಿಗರ ಮತ ಸೆಳೆಯಲು ಡಿ.ಕೆ ಶಿವಕುಮಾರ್ (DK Shivakumar) ಅಮೆರಿಕಾಗೆ ತೆರಳಿದ್ದಾರೆ.
ಹ್ಯಾರಿಸ್‌ಗೂ ಡಿಸಿಎಂಗೂ ಹೇಗೆ ನಂಟು?
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ನಿಂತಿರುವ ಭಾರತ ಮೂಲದ ಕಮಲಾ ಹ್ಯಾರಿಸ್‌ಗೂ ಕರ್ನಾಟಕದ ಡಿ.ಕೆ.ಶಿವಕುಮಾರ್‌ಗೂ ಏನಪ್ಪಾ ಸಂಬಂಧ ಅಂತೀರಾ? ಹೌದು, ಇದು ಡಿ.ಕೆ.ಶಿವಕುಮಾರ್ ಆಪ್ತರು, ಕಾಂಗ್ರೆಸ್ಸಿಗರು, ಬಿಜೆಪಿ, ಜೆಡಿಎಸ್‌ನವರ ಜೊತೆ ಬಹುತೇಕ ಕನ್ನಡಿಗರನ್ನೂ ಕಾಡ್ತಿರೋ ಪ್ರಶ್ನೆಯಾಗಿದೆ. ಎಲ್ಲಿಯ ಕಮಲಾ ಹ್ಯಾರಿಸ್, ಎಲ್ಲಿಯ ಡಿಕೆಶಿ ಹ್ಯಾರಿಸ್‌ಗೂ ಏನು ನಂಟು ಅಂತಾ ಅದಕ್ಕೂ ಉತ್ತರ ಇದೆ ನೋಡಿ..
ಕಮಲಾ ಹ್ಯಾರಿಸ್-ಡಿಕೆಶಿ ಗೆಳೆತನ!
ಕಮಲಾ ತಾಯಿ ಶ್ಯಾಮಲಾ ಗೋಪಾಲನ್ ತಮಿಳುನಾಡಿನವರು. ಅಮೆರಿಕದಲ್ಲಿದ್ದರೂ ಭಾರತದಲ್ಲಿ ಟ್ರಸ್ಟ್ ಮೂಲಕ ಜನಸೇವೆ ಮಾಡ್ತಿದ್ದಾರೆ. ಕಮಲಾ ಹ್ಯಾರಿಸ್ ತಾಯಿ ಟ್ರಸ್ಟ್ ಜೊತೆ ಡಿಕೆಶಿ ಅವರಿಗೆ ನಂಟಿದೆಯಂತೆ! ಕಮಲಾ ಹ್ಯಾರಿಸ್ ತಾಯಿ ಟ್ರಸ್ಟ್‌ಗೆ ಡಿಕೆ ಶಿವಕುಮಾರ್ ಎಲ್ಲಾ ರೀತಿಯ ನೆರವನ್ನೂ ಕೊಟ್ಟಿದ್ದಾರೆ ಅಂತೆ. ಹಾಗಾಗಿನೇ ಕಮಲಾ ಹ್ಯಾರಿಸ್ ಜೊತೆ ಡಿಕೆಶಿ ರಾಜಕೀಯ ಒಡನಾಟ ಶುರುವಾಗುವ ಲಕ್ಷಣ ಕಾಣಿಸಿದ್ದು. ಅನಿವಾಸಿ ಕನ್ನಡಿಗರ ಮತ ಸೆಳೆಯಲು ಆಹ್ವಾನ ಕೊಟ್ಟಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 10ರಂದು ಅಮೆರಿಕದ ನಾರ್ತ್ ಕ್ಯಾರೊಲಿನಾದಲ್ಲಿ ಭವ್ಯ ಸಮಾರಂಭ ಆಯೋಜಿಸಲಾಗಿದೆ. ಆ ಕಾರ್ಯಕ್ರಮಕ್ಕೆ ಅಮೆರಿಕದಲ್ಲಿರುವ ಭಾರತೀಯ ಮತದಾರರನ್ನು ಸೇರಿಸಲಾಗ್ತಿದ್ದು ಭಾರತೀಯ ಗಣ್ಯರನ್ನೂ ಆಹ್ವಾನಿಸಲಾಗಿದ್ದು ಡಿ.ಕೆ.ಶಿವಕುಮಾರ್ ಕೂಡ ಒಬ್ಬರು ಅನ್ನೋದು ಪ್ರಮುಖ ವಿಷ್ಯ.
ಅಂದಹಾಗೆ, ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ದೇಶ ಬಿಟ್ಟು ಹೋಗುವಂತಿಲ್ಲ. ಹೀಗಾಗಿ ಕೋರ್ಟ್‌ನಿಂದ ಅನುಮತಿಯನ್ನೂ ಪಡೆದು ಅಮೆರಿಕಗೆ ಹೋಗಿದ್ದಾರೆ. ಸೆಪ್ಟೆಂಬರ್ 14ಕ್ಕೆ ಡಿಕೆಶಿ ವಾಪಸ್ಸಾಗಲಿದ್ದಾರೆ. ಆದರೆ, ಇದು ಖಾಸಗಿ ಕಾರ್ಯಕ್ರಮ ಅಷ್ಟೇ ಅಂತ ಯಾವ ಗುಟ್ಟನ್ನೂ ಡಿ.ಕೆ.ಶಿವಕುಮಾರ್ ಬಿಟ್ಟುಕೊಟ್ಟಿಲ್ಲ.
ಡಿಕೆಶಿಗೂ ಮೊದಲೇ ಅಮೆರಿಕ ತಲುಪಿದ ರಾಹುಲ್:
ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂದಿನ ಚುನಾವಣೆಯಲ್ಲಿ ಬೆಂಬಲ ಘೋಷಿಸಿತ್ತು. ಅವತ್ತು ಮೋದಿಯವ್ರೇ ಅಮೆರಿಕಾಗೆ ತೆರಳಿ ಟ್ರಂಪ್ ಪರ ಮತಯಾಚಿಸಿದ್ರು. ಈಗ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಪರ ಕಾಂಗ್ರೆಸ್ ಪ್ರಚಾರ ಮಾಡ್ತಿದೆ. ರಾಹುಲ್ ಗಾಂಧಿಯವ್ರು ಕೂಡ 3 ದಿನಗಳ ಅಮೆರಿಕ ಪ್ರವಾಸ ನಡೆಸ್ತಿದ್ದು ಈಗಾಗ್ಲೇ ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್ ತಲುಪಿದದಾರೆ ಟೆಕ್ಸಾಸ್ ಏರ್‌ಪೋರ್ಟ್‌ನಲ್ಲಿ ರಾಹುಲ್ ಗಾಂಧಿಯವ್ರನ್ನ ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಸ್ವಾಗತಿಸಿದ್ದರು.
ರಾಹುಲ್ ಗಾಂಧಿ ವಾಷಿಂಗ್ಟನ್, ಡಲ್ಲಾಸ್ ನಗರಗಳಲ್ಲಿ, ಜಾರ್ಜ್‌ಟೌನ್ ಮತ್ತು ಟೆಕ್ಸಾಸ್ ವಿಶ್ವವಿದ್ಯಾಲಯಗಳಲ್ಲಿ ಸಂವಾದ ನಡೆಸ್ತಾರೆ. ಡಿ.ಕೆ.ಶಿವಕುಮಾರ್ ನಾರ್ತ್ ಕ್ಯಾರೊಲಿನಾದಲ್ಲಿ ಕಮಲಾ ಹ್ಯಾರಿಸ್ ಪರ ಪ್ರಚಾರ ಮಾಡ್ತಿದ್ದಾರೆ. ಏನೇ ಆಗ್ಲಿ ಅಮೆರಿಕಾ ಎಲೆಕ್ಷನ್‌ನಲ್ಲೂ ಭಾರತೀಯರ ಪಾತ್ರ ಅದ್ರಲ್ಲೂ ದಕ್ಷಿಣ ಭಾರತದವ್ರು, ನಮ್ಮ ಕನ್ನಡಿಗರ ಪಾತ್ರನೂ ಮುಖ್ಯವಾಗಿದೆ ಅನ್ನೋದಕ್ಕೆ ಡಿಕೆಶಿ ಅಮೆರಿಕ ಟೂರೇ ಸಾಕ್ಷಿ.
ಇದನ್ನೂ ಓದಿ: FDI: ಸಿಂಗಪುರ್ ಉದ್ಯಮಿಗಳ ಹೂಡಿಕೆಗೆ ಕರ್ನಾಟಕದಲ್ಲಿ ಮುಕ್ತ ಸ್ವಾಗತ: ಸಚಿವ ಎಂ ಬಿ ಪಾಟೀಲ
ಇದೇ ವೇಳೆ ರಾಹುಲ್ ಗಾಂಧಿ ಮತ್ತು ಡಿಕೆಶಿ ರಹಸ್ಯೆ ಸಭೆಗೆ ವೇದಿಕೆ ಸಿದ್ಧವಾಗಿದೆಯಂತೆ. ಆ ಸಭೆಯಲ್ಲಿ, ಒಂದು ವೇಳೆ ಕರ್ನಾಟಕದ ಸಿಎಂ ಬದಲಾವಣೆ ಮಾಡುವ ಪ್ರಸಂಗ ಬಂದರೆ ಆಗ ಯಾರನ್ನು ಸಿಎಂ ಮಾಡಬೇಕು ಎಂದು ನಿರ್ಧಾರ ಮಾಡಲಾಗುತ್ತದೆ ಅಂತೆ. ಡಿಕೆಶಿ ತಮಗೆ ಸಿಎಂ ಹುದ್ದೆ ನೀಡುವಂತೆ ಲಾಭಿ ಮಾಡಲು ಇದು ಸಕಾಲ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆಯಾಗಿದೆ.