DKSvsHDK: ಕುಮಾರಸ್ವಾಮಿಯ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ: ಡಿಕೆ ಶಿವಕುಮಾರ್

DKSvsHDK: ಕುಮಾರಸ್ವಾಮಿಯ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ: ಡಿಕೆ ಶಿವಕುಮಾರ್

ಕನಕಪುರ, (ಆಗಸ್ಟ್.11); ಕುಮಾರಸ್ವಾಮಿ ನನ್ನ ಬಗ್ಗೆ ಏನೆಲ್ಲಾ ಹೇಳಿದರು? ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಅವರ ಜತೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ನಾನು ಬಹಳ ತಾಳ್ಮೆಯಿಂದ ಇದ್ದೆ. ಅವರನ್ನು ಅಣ್ಣ ಎಂದು ಸ್ವೀಕರಿಸಿದ್ದೆ, ಅವರು ಈ ರೀತಿ ಮಾತನಾಡಿದರೆ ನಾನು ಹೆದರಿ ಕುಳಿತುಕೊಳ್ಳಲು ಸಾಧ್ಯವೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕನಕಪುರದ ನಿವಾಸದಲ್ಲಿ ಕನಕಪುರ, ರಾಮನಗರ, ಚನ್ನಪಟ್ಟಣ ಜನರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜಿಲ್ಲೆಯ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನನ್ನ ನೋಡಲು ಬೆಂಗಳೂರಿಗೆ ಬರುವುದನ್ನು ತಪ್ಪಿಸುವ ಸಲುವಾಗಿ ಇನ್ನು ಮುಂದೆ ತಿಂಗಳಲ್ಲಿ ಪ್ರತಿ ಎರಡು ಮತ್ತು ಮೂರನೇ ಶನಿವಾರ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಈ ವೇಳೆ ಕುಮಾರಸ್ವಾಮಿ ಹಾಗೂ ನಿಮ್ಮ ನಡುವೆ ವೈಯಕ್ತಿಕ ನಿಂದನೆಗಳು ಹೆಚ್ಚುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಇದನ್ನು ಆರಂಭಿಸಿದ್ದು ಯಾರು?, ಕುಮಾರಸ್ವಾಮಿಯ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಗುಡುಗಿದರು.

ಕಳೆದ 2-3 ವರ್ಷಗಳಿಂದ ಕುಮಾರಸ್ವಾಮಿಯಟೀಕೆಗಳನ್ನು ಸಹಿಸಿಕೊಂಡಿದ್ದೆ. ಮಗನ ಸೋಲಿನ ನಂತರ ಅವರ ಮಾತು ಮಿತಿಮೀರಿದ್ದು ನಾನು ಎಷ್ಟು ದಿನ ಸಹಿಸಲಿ, ಅವರ ಹೇಳಿಕೆಗಳಿಗೆ ನಾನು ಉತ್ತರ ನೀಡಿದ್ದೇನೆ, ನನ್ನ ವಿರುದ್ಧ ಅವರ ಬಳಿ ಇರುವ ದಾಖಲೆಗಳನ್ನ ಆದಷ್ಟು ಬೇಗ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.

ಸದನದಲ್ಲಿ ಚರ್ಚೆ ಮಾಡಲಿ ನನ್ನ ವಿರುದ್ದ ಇಲ್ಲ- ಸಲ್ಲದ ಆರೋಪಗಳನ್ನು ಹಾದಿ-ಬೀದಿಯಲ್ಲಿ ಮಾಡುತ್ತಾ ಕಾಲ ಕಳೆಯುವ ಬದಲು ಸದನದಲ್ಲಿ ಚರ್ಚೆ ಮಾಡಲಿ, ಎಸ್‌.ಎಂ ಕೃಷ್ಣ ಅವರ ಅಳಿಯನ ಸಾವಿಗೆ ಯಾರು ಕಾರಣ ಎಂದು ಮೈಸೂರಿನಲ್ಲಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ನಾನು ಅವರ ತಂದೆ ದೇವೇಗೌಡರ ವಿರುದ್ಧ 1985ರಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಬಂಗಾರಪ್ಪನವರ ಸಂಪುಟದಲ್ಲಿ ಸಚಿವನಾಗಿದ್ದೆ, ನನ್ನ ಹಾಗೂಎಸ್.ಎಂ ಕೃಷ್ಣ ಅವರ ನಡುವಣ ಸಂಬಂಧ ಏನು ಎಂದು ಕುಮಾರಸ್ವಾಮಿಗೇನು ಗೊತ್ತು? ಅವರಿಗೆ ಹುಚ್ಚು ಹಿಡಿದಿದೆ ಎಂದು ನನಗೆ ಅನಿಸುತ್ತಿದ್ದು ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಅವರ ಪಕ್ಷದ ನಾಯಕರಿಗೆ, ಹಿತೈಷಿಗಳಿಗೆ ಹೇಳೋಣ ಎಂದು ಹೇಳಿದರು.

ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಚ್ಚಿಡಲಿ, ನಾನು ವಿಧವೆಯರಿಗೆ ಗನ್ ಪಾಯಿಂಟ್ ಇಟ್ಟು ಆಸ್ತಿ ಬರೆಸ ಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪಿಸಿದ್ದು ಅವರನ್ನು ಕರೆದುಕೊಂಡು ಬಂದು ನನ್ನ ವಿರುದ್ದ ಎಫ್‌ಐ ಆರ್‌ದಾಖಲಿಸಲಿ ಎಂದು ಸವಾಲೆಸೆದರು.

ನಾನು ಯಾರಿಗೆ ಗನ್ ಪಾಯಿಂಟ್ ಇಟ್ಟು ಆಸ್ತಿ ಬರೆಸಿ ಕೊಂಡಿದ್ದೇನೆ ಹೇಳಲಿ, ಕುಮಾರಸ್ವಾಮಿ ಕೇತಗಾನಹಳ್ಳಿಯಲ್ಲಿ ದಲಿತರ ಭೂಮಿ ಲೂಟಿ ಮಾಡಿದ್ದಾರೆ ಎಂದು ಯೋಗೇಶ್ವ‌ರ್ ಮಾತನಾಡಿದ್ದಾರೆ. ಅಲ್ಲಂ ವೀರಭದ್ರಪ್ಪ ಖರೀದಿ ಮಾಡಿದ್ದ ಆಸ್ತಿಯನ್ನು ನನ್ನ ಮಗಳು ಖರೀದಿ ಮಾಡಿದ್ದಾಳೆ. ನನ್ನ ಸಾಮರ್ಥಕ್ಕೆ ಅನುಸಾರವಾಗಿ ನಾನು ಆಸ್ತಿ ಖರೀದಿ ಮಾಡುತ್ತೇನೆ, ಇನ್ನು ಮಾರಟವಾಗಲು ಸಿದ್ಧವಿರುವ ಜಾಗಗಳಿದ್ದರೆ ಹೇಳಿ ಖರೀದಿಸುತ್ತೇನೆ.

ಅವರು ಈ ಹಿಂದೆ ಏನು ಮಾತನಾಡಿದ್ದಾರೆ ಒಮ್ಮೆ ನೋಡಿ, ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ, ಅಂದರೆ ನಾನು ಮತ್ತೆ ಜೈಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ನಾನು ಜೈಲು ನೋಡಿರುವವನು, ನಾನು ಜೈಲಲ್ಲಿದ್ದಾಗ ಬಂದು ನನ್ನ ನೋಡಿದ್ದರು, ಜೈಲಿನ ಒಳಗೆ ನಾನು ಎಷ್ಟು ಶಕ್ತಿಯಲ್ಲಿದ್ದೆ ಎಂದು ನೋಡಿದ್ದಾರೆ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನನ್ನ ಮೇಲೆ, ನನ್ನ ಸಹೋದರ, ತಂಗಿ, ಪತ್ನಿ ಮೇಲೆ ಅದಿರು ಕಳ್ಳತನದ ಸುಳ್ಳು ಎಫ್‌ಐಆರ್‌ದಾಖಲಿಸಿದ್ದರು. ಅದೆಲ್ಲವನ್ನು ಮರೆತು ಅವರುಮುಖ್ಯಮಂತ್ರಿಯಾಗಲು ನೆರವಾಗಿದ್ದೆ, ಆನಂತರ ನಡೆದ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ ಎಂದರು.

ನಾನು ಪ್ರಧಾನಿ, ಮುಖ್ಯಮಂತ್ರಿಯ ಮಗನಾಗಿ ರಾಜಕೀಯಕ್ಕೆ ಬಂದಿಲ್ಲ. ನಾನು ಬಡವನಲ್ಲದಿದ್ದರೂ ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದವನು. ನನ್ನ ಆಸ್ತಿ ಮಾಹಿತಿ ತೆರೆದ ಪುಸ್ತಕದಂತೆ. ನಾನು ಬದುಕಲು ಸಾಧ್ಯವಾಗದಂತಹ ದಾಖಲೆ ಏನಿದೆಯೋ ಅದನ್ನು ಬಿಚ್ಚಿಡಲಿ. ನಾನು ಮಾಡಬಾರದ ತಪ್ಪು ಏನುಮಾಡಿದ್ದೇನೆ ತಿಳಿಸಲಿ. ನೀನು ದೆಹಲಿಯಲ್ಲಿ ನನ್ನ ವಿರುದ್ಧ ಯಾರಿಗೆ ಯಾವ ಪತ್ರ ನೀಡಿದ್ದೀರಿ ಎಂದು ನನಗೆ ಗೊತ್ತಿದೆ. ನಿಮ್ಮ ತಂದೆ ಏನೇನು ಬರೆದಿದ್ದೀರಿ ಎಂದು ನನಗೆ ಮಾಹಿತಿ ಇದೆ,

ನನ್ನ ವಿರುದ್ಧ ದೆಹಲಿಯಲ್ಲಿ ಏನೆಲ್ಲಾ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದಿದೆ. ನಾನು ಹಾಸನದಲ್ಲಿ ಪೆನ್‌ಡ್ರೈವ್ ಹಂಚಿದ್ದೇನೆ ಎಂದು ಕುಮಾರಸ್ವಾಮಿ ಯಾವ ಆಧಾರದಲ್ಲಿ ಆರೋಪ ಮಾಡಿದರು? ನಾನು ಅಂತಹ ಕೆಲಸ ಮಾಡಲು ಮೂರ್ಖನಲ್ಲ, ನಾನು ಅದನ್ನು ಚುನಾವಣೆಗೆ ಬಳಸಿಕೊಳ್ಳುವುದಾದರೆ ನೇರವಾಗಿಯೇ ಬಳಸಿಕೊಳ್ಳುತ್ತಿದ್ದೆ ಎಂದರು.

Latest News

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಇಳಕಲ್ಲ: ತಾಲೂಕಿನ ಗಡಿಸುಂಕಾಪುರ ಗ್ರಾಮದ ಹತ್ತಿರ ಇಳಕಲ್ ದತ್ತ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿಯ ಜಾಗೆಯ ಕುರಿತು ಕಲಬುರ್ಗಿ ಉಚ್ಛ ನ್ಯಾಯಾಲಯ ಸರ್ವೆ ನಂ.98ಕ್ಕೆ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಧಾರವಾಡ ಜುಲೈ.1: ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕು ಅಂದಾಗ ಶಾಲೆಗಳು ಉತ್ತಮ ಫಲಿತಾಂಶ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಧಾರವಾಡ, ಜುಲೈ 1: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ,

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ ಪಟ್ಟಣದ ಶ್ರೀ ಅಭಿನವ ತಿರುಪತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 11 ನೇ ರಾಜ್ಯ ಪೆಂಕಾಕ್ ಸಿಲಾಸ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಾದ ಶಕುಂತಲಾ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ )25 ರಿಂದ 30 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ವಿಕ್ರಾಂತ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ ) 20 ರಿಂದ 25 ಕೆಜಿ ವಿಭಾಗದಲ್ಲಿ ಕಂಚಿನ ಪದಕ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ ಬೇಕು. ಪ್ರತಿಯೊಬ್ಬ ನಾಗರಿಕರಲ್ಲಿಯೂ ಇದು ನಮ್ಮ ನಗರ, ನಮ್ಮ ಓಣಿ, ನನ್ನ ಮನೆ ಎಂಬ ಹೆಮ್ಮೆ ಮೂಡಿದಾಗ ಮಾತ್ರ ಸ್ವಚ್ಛ ನಗರ ಹೊಂದಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಹೆಮ್ಮ ಮೂಡುವಂತೆ ನಾವು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ