ತಮಿಳು OK.. ಕನ್ನಡಕ್ಕಿಲ್ಲ ಅವಕಾಶ! ಕನ್ನಡಿಗನೇ ಕೇಂದ್ರ ಸಚಿವರಾಗಿರುವ ರೈಲ್ವೆ ಇಲಾಖೆಯಿಂದಲೇ ಈ ಅನ್ಯಾಯ!

ತಮಿಳು OK.. ಕನ್ನಡಕ್ಕಿಲ್ಲ ಅವಕಾಶ! ಕನ್ನಡಿಗನೇ ಕೇಂದ್ರ ಸಚಿವರಾಗಿರುವ ರೈಲ್ವೆ ಇಲಾಖೆಯಿಂದಲೇ ಈ ಅನ್ಯಾಯ!

ಬೆಂಗಳೂರು: ರೈಲ್ವೆ ಇಲಾಖೆಯ ರಾಜ್ಯ ಖಾತೆಯ ಕೇಂದ್ರ ಸಚಿವರಾಗಿ ಕನ್ನಡಿಗರಾದ ವಿ. ಸೋಮಣ್ಣ ಅವರು ಇದ್ದರೂ ಇಲಾಖೆ ನಡೆಸಲು ಮುಂದಾಗಿರುವ ಪರೀಕ್ಷೆಯಲ್ಲಿ ಕನ್ನಡಗರಿಗೆ ಅನ್ಯಾಯ ಮಾಡಲಾಗುತ್ತಿದೆ. ಏತನ್ಮಧ್ಯೆ, ತಮಿಳರಿಗೆ ತಮಿಳಿನಲ್ಲೇ ಪರೀಕ್ಷೆ ಬರಯುವ ಅವಕಾಶ ನೀಡಿ, ಕನ್ನಡಿಗರಿಗೆ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯುವಂತೆ ಸೂಚಿಸಿರುವುದು ಇಲಾಖೆಯು ಕನ್ನಡಿಗರಿಗೆ ಮಾಡಿದ ಮಹಾ ಅನ್ಯಾಯವಾಗಿದೆ.

ಹೌದು, ಬಡ್ತಿಗಾಗಿ ಕನ್ನಡದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ರೈಲ್ವೆ ಉದ್ಯೋಗಿಗಳಿಗೆ ನೈಋತ್ಯ ರೈಲ್ವೆ ಮತ್ತೆ ಈ ಶಾಕ್ ಕೊಟ್ಟಿದೆ. ಪರೀಕ್ಷಾ ಸುತ್ತೋಲೆಯಲ್ಲಿ ಕನ್ನಡಕ್ಕೆ ಅವಕಾಶ ನೀಡಿದ್ದ ಇಲಾಖೆ ಇದೀಗ ಹಾಲ್ ಟಿಕೆಟ್‌ನಲ್ಲಿ ಕನ್ನಡಕ್ಕೆ ಕೊಕ್ ನೀಡಿ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆವ ಆಯ್ಕೆ ಕೊಟ್ಟಿದೆ. ಇದರಿಂದ ಕನ್ನಡಿಗ ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ.

ನೈಋತ್ಯ ರೈಲ್ವೆಯು ಸಹಾಯಕ ಲೋಕೋಪೈಲಟ್ ಹುದ್ದೆಗಳಿಗೆ ಮೇ ತಿಂಗಳಲ್ಲಿ ಸಾಮಾನ್ಯ ವಿಭಾಗದ ಸ್ಪರ್ಧಾತ್ಮಕ ಪಚ್ಚಯ (ಜೆಡಿಸಿಇ) ಸುತ್ತೋಲೆ ಹೊರಡಿಸಿತ್ತು. ಹೀಗಾಗಿ, ಕನ್ನಡಿಗ ಅಭ್ಯರ್ಥಿಗಳು ಪರೀಕ್ಷಾ ಸಿದ್ಧತೆ ಕೈಗೊಂಡಿದ್ದರು.

ಆಗಸ್ಟ್ 3ಕ್ಕೆ ಈ ಪರೀಕ್ಷೆಯಿದೆ. ಆದರೆ, ಈ ನಡುವೆ ಪರೀಕ್ಷಾರ್ಥಿಗಳಿಗೆ ನೀಡಲಾದ ಹಾಲ್ ಟಿಕೆಟ್‌ನಲ್ಲಿ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆವಂತೆ ಆಯ್ಕೆ ನೀಡಲಾಗಿದೆ. ಹುಬ್ಬಳ್ಳಿ ವಿಭಾಗದಲ್ಲಿ 521, ಮೈಸೂರು 130, ಬೆಂಗಳೂರು ವಿಭಾಗದಲ್ಲಿ 278 ಹುದ್ದೆಗಳಿಗೆ ಈ ಪರೀಕ್ಷೆ ನಡೆಯಲಿದೆ. ಎರಡು ತಿಂಗಳಿಂದ ಪರೀಕ್ಷೆ ಸಿದ್ಧತೆ ನಡೆಸಿದ್ದ ಕನ್ನಡಿಗರು ಇದೀಗ ಮಾತೃಭಾಷೆಯಲ್ಲಿ ಪರೀಕ್ಷೆ ಬರೆವ ಆಯ್ಕೆ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತಿದ್ದಾರೆ.

ಈ ಹಿಂದೆ ನಡೆದ ಜಿಡಿಸಿಇ ಪರೀಕ್ಷೆಗಳಲ್ಲಿ ಕನ್ನಡದ ಅವಕಾಶ ನೀಡಿದ್ದ ಇಲಾಖೆ ಈ ಬಾರಿ ಯಾಕೆ ನೀಡುತ್ತಿಲ್ಲ ಎಂದು ನೌಕರರು ಪ್ರಶ್ನಿಸಿದ್ದಾರೆ.

ತಮಿಳಲ್ಲಿದೆ, ಕನ್ನಡದಲ್ಲೇಕಿಲ್ಲ?: ದಕ್ಷಿಣ ರೈಲ್ವೆಯು ತಮಿಳುನಾಡಿನಲ್ಲಿ 2017-18 ರಿಂದಲೇ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನುತಮಿಳಿನಲ್ಲಿ ಬರೆವ ಆಯ್ಕೆಯನ್ನು ನೀಡಿದೆ. ಪ್ರತಿ ವರ್ಷವೂ ಸಾವಿರಾರು ಬಡ್ಡಿ ಪರೀಕ್ಷೆಗಳು ಆ ರಾಜ್ಯದ ಅಧಿಕೃತ ಭಾಷೆಯಲ್ಲಿ ನಡೆಯುತ್ತಿದೆ. ಆದರೆ, ಕರ್ನಾಟಕದಲ್ಲಿ ನೈಋತ್ಯ ರೈಲ್ವೆಯಿಂದಇದಿನ್ನೂ ಜಾರಿಯಾಗಿಲ್ಲ. ಕನ್ನಡಿಗರು ಹಿಂದಿ/ ಇಂಗ್ಲಿಷ್‌ನಲ್ಲೇ ಪರೀಕ್ಷೆ ಬರೆವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದಲೂ ರಾಜ್ಯದವರು ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಕೇಳುತ್ತಿದ್ದರೂ ಇನ್ನೂ ಬೇಡಿಕೆ ಈಡೇರಿಲ್ಲ. ‘ನಾವು ಕನ್ನಡದಲ್ಲೇ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದೆವು. ಆದರೆ, ಹಾಲ್ ಟಿಕೆಟ್‌ನಲ್ಲಿ ಹಿಂದಿ/ಇಂಗ್ಲಿಷ್‌ಗೆ ಮಾತ್ರ ಅವಕಾಶ ನೀಡಿರುವ ಕಾರಣ ಸಮಸ್ಯೆಯಾಗಿದೆ. ಇಲಾಖೆ ಪರೀಕ್ಷೆ ಮುಂದೂಡಬೇಕು. ಜೊತೆಗೆ ಕನ್ನಡದ ಆಯ್ಕೆ ನೀಡಬೇಕು’ ಎಂದು ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ ಹೇಳಿದರು.

ಇಂಗ್ಲಿಷ್ ಜ್ಞಾನಕ್ಕೆ ಪ್ರತ್ಯೇಕ ಪರೀಕ್ಷೆ: ರೈಲ್ವೆ ಮಂಡಳಿ ಪ್ರಕಾರ ಪರೀಕ್ಷೆಯಲ್ಲಿ ಇಂಗ್ಲಿಷ್ ಬದಲಿಗೆ ಪ್ರಾದೇಶಿಕ ಭಾಷೆಯ ಬಳಕೆಗೆ ಅನುಮತಿಸಬಹುದು.

ಏಕಾಏಕಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಕೊಕ್ ನೀಡಿರುವ ಬಗ್ಗೆ ನೌಕರರ ಸಂಘದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಆ.3ರ ಪರೀಕ್ಷೆಗಳನ್ನೇ ಮುಂದೂಡಲು ಚಿಂತನೆ ನಡೆಸಿದೆ. ಬಳಿಕ ಕನ್ನಡದಲ್ಲಿ ಪ್ರಶ್ನೆಪತ್ರಿಕೆ ನೀಡುವ ಅವಕಾಶ ನೀಡಬೇಕೆ, ಬೇಡವೆ ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Latest News

ಗ್ಯಾಸ್ ಸಿಗುತ್ತಿಲ್ಲವೇ ? ಈ ಹೆಲ್ಪಲೈನ್‌ಗೆ ಕರೆ ಮಾಡಿ…

ಗ್ಯಾಸ್ ಸಿಗುತ್ತಿಲ್ಲವೇ ? ಈ ಹೆಲ್ಪಲೈನ್‌ಗೆ ಕರೆ ಮಾಡಿ…

ಮುದ್ದೇಬಿಹಾಳ : ಕೊಲ್ಲಿ ರಾಷ್ಟ್ರಗಳ ಮಧ್ಯೆ ನಡೆದಿರುವ ಯುದ್ದದ ಸಂಘರ್ಷದಿAದ ತೈಲೋತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು

ಅಸ್ಕಿ ಫೌಂಡೇಶನ್ ನೇತೃತ್ವ :                                            ಮಾ.17 ರಂದು ಬಾವೂರನಲ್ಲಿ ಸೌಹಾರ್ದ ಇಫ್ತಾರಕೂಟ

ಅಸ್ಕಿ ಫೌಂಡೇಶನ್ ನೇತೃತ್ವ : ಮಾ.17 ರಂದು ಬಾವೂರನಲ್ಲಿ ಸೌಹಾರ್ದ ಇಫ್ತಾರಕೂಟ

ತಾಳಿಕೋಟಿ : ರಂಜಾನ್ ಹಬ್ಬದ ಪ್ರಯುಕ್ತ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ತಾಲ್ಲೂಕಿನ ಬಾವೂರ ಗ್ರಾಮದಲ್ಲಿ

ಪತ್ರಕರ್ತ ಮುರಾಳಗೆ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ

ಪತ್ರಕರ್ತ ಮುರಾಳಗೆ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ

ಮುದ್ದೇಬಿಹಾಳ : ರಾಯಚೂರಿನ ಸಿದ್ದರಾಮ ಜಮ್ಮಲದಿನ್ನಿ ಕಲ್ಯಾಣ ಮಂಟಪದಲ್ಲಿ ನಡೆದ ಮಾತೋಶ್ರೀ ಮಹಾಂತಮ್ಮ ಶಿವಬಸ್ಸಪ್ಪ

ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ :                   ಶಿಕ್ಷಣ ಸಂಸ್ಥೆ ಬೆಳೆಸುವುದು ಸಾಹಸದ ಕಾರ್ಯ-ಧಮ್ಮೂರಮಠ

ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ : ಶಿಕ್ಷಣ ಸಂಸ್ಥೆ ಬೆಳೆಸುವುದು ಸಾಹಸದ ಕಾರ್ಯ-ಧಮ್ಮೂರಮಠ

ಮುದ್ದೇಬಿಹಾಳ : ನಗರ ಪ್ರದೇಶಗಳಲ್ಲಾದರೆ ಸಂಸ್ಥೆಗಳು ಕೇಳಿದಷ್ಟು ಶುಲ್ಕ ಕೊಡಲು ಪಾಲಕರು ಸಿದ್ಧರಿರುತ್ತಾರೆ.ಅಲ್ಲಿ ಶಿಕ್ಷಣ

ಮೀನುಗಾರಿಕೆ ಕ್ಷೇತ್ರದಲ್ಲಿ ವಿಫುಲ ಉದ್ಯೋಗವಕಾಶ-ಶಾಸಕ ನಾಡಗೌಡ

ಮೀನುಗಾರಿಕೆ ಕ್ಷೇತ್ರದಲ್ಲಿ ವಿಫುಲ ಉದ್ಯೋಗವಕಾಶ-ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮ ಭಾಗದ ನಾರಾಯಣಪೂರ ಹಾಗೂ ಆಲಮಟ್ಟಿ ಜಲಾಶಯದ ಮಧ್ಯೆದಲ್ಲಿ ಬರುವ ಕೃಷ್ಣಾ ನದಿ ತೀರದಲ್ಲಿ ವ್ಯಾಪಕವಾಗಿ ಮೀನುಗಾರಿಕೆಗೆ ಅವಕಾಶ ಇದ್ದು ಯುವಕರು ಈ ಕ್ಷೇತ್ರದಲ್ಲಿ ತರಬೇತಿ ಪಡೆದುಕೊಂಡರೆ ನಿರುದ್ಯೋಗ,ಬಡತನ ನಿವಾರಣೆ ಮಾಡಲು ಸಾಧ್ಯವಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಶನಿವಾರ ಸನ್ 2025-26ಸಾಲಿನ ಜಿಪಂ ಲಿಂಕ್ ಡಾಕ್ಯುಮೆಂಟ್ ಯೋಜನೆಯಡಿ ಮೀನುಗಾರಿಕಾ ಇಲಾಖೆಯ ನೂತನ ಕಚೇರಿಯ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮ್ಮಿಶ್ರ

ವಿದ್ಯುತ್ ಸ್ಪರ್ಶಿಸಿ ಪಿಗ್ಮಿ ಏಜೆಂಟ್ ಸಾವು

ವಿದ್ಯುತ್ ಸ್ಪರ್ಶಿಸಿ ಪಿಗ್ಮಿ ಏಜೆಂಟ್ ಸಾವು

ಮುದ್ದೇಬಿಹಾಳ : ಮನೆ ಕಟ್ಟಡಕ್ಕೆ ನೀರು ಹೊಡೆಯುವ ಸಂದರ್ಭದಲ್ಲಿ ಮೋಟರ್‌ಗೆ ಪೈಪ್ ಜೋಡಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ತಾಲ್ಲೂಕಿನ ನಾಲತವಾಡ ಪಟ್ಟಣದ ನಿವಾಸಿ, ಭಾವಸಾರ ಕ್ಷತ್ರಿಯ ಕೋ ಆಪರೇಟಿವ್ ಬ್ಯಾಂಕಿನ ಪಿಗ್ಮಿ ಸಂಗ್ರಾಹಕರ ನಾಗೇಶ ಬಿ.ಲೋಕರೆ (42) ಶುಕ್ರವಾರ ಮೃತಪಟ್ಟಿದ್ದಾರೆ. ವಿದ್ಯುತ್ ಸ್ಪರ್ಶಿಸಿ ಪ್ರಜ್ಞಾಹೀನರಾದ ಅವರನ್ನು ಸ್ಥಳದಲ್ಲೇ ಇದ್ದ ಯುವಕರು ಸ್ಥಳೀಯ ಆರೋಗ್ಯ ಸಮುದಾಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸುವುದರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಅವರಿಗೆ