ಬೆಂಗಳೂರು: ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ (Kodishree) ಇದೀಗ ಮತ್ತೊಂದು ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ.
Join Our Telegram: https://t.me/dcgkannada
ಹೌದು, ಕ್ರೋಧಿನಾಮ ಸಂವತ್ಸರದ ಶ್ರಾವಣ ಮಾಸದಲ್ಲಿ ದೇಶದಲ್ಲಿ ಜಲ, ಅಗ್ನಿ, ವಾಯು ಕಂಟಕಗಳು ಸಂಭವಿಸಲಿವೆ. ಈ ಮಾಸದಲ್ಲಿ ಗುರುಗಳು ಶಿಷ್ಯರಾಗುತ್ತಾರೆ. ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ ಎಂದು ಭಯಾನಕವಾದ ಭವಿಷ್ಯವನ್ನು ಕೋಡಿಶ್ರೀ ಹೇಳಿದ್ದಾರೆ.
ಇದನ್ನೂ ಓದಿ: Marriage age: ಮದುವೆ ವಯಸ್ಸನ್ನು ಗಂಡಿಗೆ 15, ಹೆಣ್ಣಿಗೆ 9 ವರ್ಷಕ್ಕೆ ಇಳಿಸಲು ಸಿದ್ಧತೆ!
ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಅತಿವೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಎಚ್ಚರಿಕೆಯ ಭವಿಷ್ಯ ಹೇಳಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಮಳೆಯಿಂದ ಅನಾಹುತ ಸಂಭವಿಸಿದ್ದು, ಕಾರವಾರದ ಶಿರೂರು ಬಳಿ ಪಶ್ಚಿಮ ಘಟ್ಟ ಕುಸಿದು ರಾಷ್ಟ್ರ ಮಟ್ಟದ ಗಮನ ಸೆಳೆದಿತ್ತು. ಈಗ ಮತ್ತೆ ಕಂಟಕದ ಭವಿಷ್ಯವನ್ನು ಶ್ರೀಗಳು (Kodishree) ನುಡಿದಿದ್ದು, ಆತಂಕಕ್ಕೆ ಕಾರಣವಾಗಿದೆ.