ನವದೆಹಲಿ: ಗಂಡು ಮಕ್ಕಳ ವಿವಾಹದ ವಯೋಮಿತಿಯನ್ನು (Marriage age) 18ರಿಂದ 15ಕ್ಕೆ ಮತ್ತು ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 9ಕ್ಕೆ ಇಳಿಸುವ ವಿವಾದಿತ ಮಸೂದೆಯೊಂದನ್ನು ಇರಾಕ್‌ನ ಸಂಸತ್‌ನಲ್ಲಿ ಮಂಡಿಸಲಾಗಿದೆ.
Join Out Telegram: https://t.me/dcgkannada
ಹೌದು, ಮಸೂದೆ ಅಂಗೀಕಾರವಾದರೆ, ಇರಾಕ್‌ನಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುವ ಆತಂಕವಿದೆ ಎಂದು ಮಾನವ ಹಕ್ಕು ಸಂಘಟನೆಗಳು, ಮಹಿಳಾ ಹಕ್ಕು ಸಂಘಟನೆಯು ಈ (Marriage age) ಮಸೂದೆಯನ್ನು ಬಲವಾಗಿ ವಿರೋಧಿಸಿವೆ. ಈ ನಿರ್ಧಾರದಿಂದ ಇರಾಕ್‌ನಲ್ಲಿ ಲಿಂಗ ತಾರತಮ್ಯ ಹೆಚ್ಚಳವಾಗಬಹುದು ಎಂದೂ ಆತಂಕ ವ್ಯಕ್ತಪಡಿಸಿವೆ.
ಹೆಣ್ಣು ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರಬಹುದು. ಆರಂಭಿಕ ಗರ್ಭಾವಸ್ಥೆ, ಕೌಟುಂಬಿಕ ದೌರ್ಜನ್ಯಗಳು ಹೆಚ್ಚಳವಾಗಬಹುದು. ಜತೆಗೆ ಲೈಂಗಿಕ ಸಮಸ್ಯೆಗಳು ಎದುರಾಗಬಹುದು ಎಂದು ಅವು ಆಕ್ರೋಶ ವ್ಯಕ್ತಪಡಿಸಿವೆ.
ಇದನ್ನೂ ಓದಿ: Car Accident: ಯುವತಿ ಡ್ರೈವಿಂಗ್.. ಕಾರಿಂದ ಕೆಳಗೆ ಬಿದ್ದ ಯುವಕ..!
ವಿವಾಹದ ಬಳಿಕ ಉಂಟಾಗುವ ಯಾವುದೇ ವಿವಾದ ನ್ಯಾಯಾಲಯಗಳು ಪರಿಹರಿಸಬೇಕೇ ಅಥವಾ ಧಾರ್ಮಿಕ ಕೋರ್‌ಗಳು ಬಗೆಹರಿಸಬೇಕೆ ಎಂಬುದರ ಕುರಿತು ದಂಪತಿ ಮೊದಲೇ ನಿರ್ಧರಿಸಬೇಕು ಎಂಬ ಅಂಶವೂ ವಿವಾದಿತ ಮಸೂದೆಯಲ್ಲಿದೆ ಎಂದು ವರದಿಯಾಗಿದೆ.