Murder Case Image of murder symbol

Koppal: ಮಕ್ಕಳಾಗದ ಕಾರಣಕ್ಕೆ ಪತಿಯಿಂದಲೇ ಪತ್ನಿಯ ಕೊಲೆ?

Koppal: ಮಕ್ಕಳಾಗದ ಕಾರಣಕ್ಕೆ ಪತಿಯಿಂದಲೇ ಪತ್ನಿಯ ಕೊಲೆ?

ಕೊಪ್ಪಳ: ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಕುಕನೂರು ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ನಡೆದಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ವಿವಾಹ ಪೂರ್ವದಿಂದಲೂ ಸಂಬಂಧಿಕರೇ ಆಗಿದ್ದ ಕೊಲೆ ಆರೋಪಿ ಅರಕೇರಿ ಗ್ರಾಮದ ದೇವರಡ್ಡೆಪ್ಪ ಭಾವಿಕಟ್ಟಿ ಹಾಗೂ ಗೀತಾ (25) ಆರು ವರ್ಷಗಳ ಹಿಂದೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು.

ಮಕ್ಕಳಾಗದ ಕಾರಣಕ್ಕೆ ಅವರ ನಡುವೆ ಹಲವು ಬಾರಿ ವಾದ, ಸಂಘರ್ಷ. ಆಗಿತ್ತು. ಇದೇ ರೀತಿ ಸೆ. 7ರಂದು ತಡರಾತ್ರಿ ತಮ್ಮ ಮನೆಯಲ್ಲಿ ಸಂಘರ್ಷ ಶುರುವಾಗಿದ್ದು, ಪತ್ನಿಗೆ ಕಟ್ಟಿಗೆಯಿಂದ ಮುಖಕ್ಕೆ ಹೊಡೆದು ಪತಿ ಗಾಯಗೊಳಿಸಿ ಕೊಲೆ ಮಾಡಿದ್ದಾನೆ ಎಂದು ಮೃತ ಗೀತಾ ಅವರ ಸಹೋದರ ಸಿದ್ದರೆಡ್ಡಿ ಗಿರಡ್ಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಾಗಿದೆ.

ಆರೋಪಿ, ಅವರ ತಂದೆ ಮಲ್ಲಾರಡ್ಡೆಪ್ಪ ಭಾವಿಕಟ್ಟಿ ಹಾಗೂ ಇತರರು ಗೀತಾ ಅವರ ಪೋಷಕರಿಗೆ ಸುಳ್ಳುಹೇಳಿ ಅವಸರದಿಂದಲೇ ಮೃತದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೀತಾ ಅವರ ತಂದೆ ಈಶಪ್ಪ ‘ಮಾವನ ಮಗನಿಗೇ ಮಗಳನ್ನು ಕೊಟ್ಟಿದ್ದೆ. ಎರಡು ದಿನಗಳ ಹಿಂದೆ ರಾತ್ರಿ ನಮ್ಮ ಮನೆಗೆ ಬಂದು ಊಟ ಮಾಡಿ ಗಂಡನ ಮನೆಗೆ ಹೋಗಿದ್ದಳು. ರಾತ್ರಿ ವೇಳೆ ಕುಡಿದು ಬಂದ ಗಂಡ ಆಕೆಯನ್ನು ಹೊಡೆದು ಕೊಂದಿದ್ದಾನೆ. ಆಕೆಗೆ ಮಕ್ಕಳಾಗಿಲ್ಲ ಎನ್ನುವ ಒಂದು ಕಾರಣಕ್ಕೆ ಆಕೆಯನ್ನು ಕೊಂದಿದ್ದಾನೆ’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Viral news: ಪತ್ನಿಗೆ ಡ್ರಗ್ಸ್ ನೀಡಿ 73 ಜನರಿಂದ ಅತ್ಯಾಚಾರ ಮಾಡಿಸಿದ ಪಾಪಿ ಪತಿ..!

ಘಟನೆ ಸಂಬಂಧ ಅಪ್ಪ ಹಾಗೂ ಮಗನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Latest News

ಸರ್ಕಾರಿ ಶಾಲೆ ಉಳಿವಿಗಾಗಿ 3 ದಿವಸ ಉಪವಾಸ ಸತ್ಯಾಗ್ರಹ

ಸರ್ಕಾರಿ ಶಾಲೆ ಉಳಿವಿಗಾಗಿ 3 ದಿವಸ ಉಪವಾಸ ಸತ್ಯಾಗ್ರಹ

ಮಂಡ್ಯ : ದೇಶಕ್ಕೆ ಸ್ವತಂತ್ರ ಬಂದು ಸುಮಾರು 78 ವರ್ಷವಾದರೂ, ಸಂವಿಧಾನದಲ್ಲಿ ಆರ್ಟಿಕಲ್ 21ಎ

ಮುದ್ದೇಬಿಹಾಳ : ತೆರಿಗೆ ವಸೂಲಾತಿಯಲ್ಲಿ ಶೇ.100% ಪ್ರಗತಿ: ಗ್ರಾ.ಪಂ ನೌಕರರಿಗೆ ಸನ್ಮಾನ

ಮುದ್ದೇಬಿಹಾಳ : ತೆರಿಗೆ ವಸೂಲಾತಿಯಲ್ಲಿ ಶೇ.100% ಪ್ರಗತಿ: ಗ್ರಾ.ಪಂ ನೌಕರರಿಗೆ ಸನ್ಮಾನ

ಮುದ್ದೇಬಿಹಾಳ : ತಾಲೂಕಿನ ಗ್ರಾಪಂನ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಗುರಿಗೆ ಮೀರಿ ವಸೂಲಾತಿಯಲ್ಲಿ ಶೇ.100%

ಮುದ್ದೇಬಿಹಾಳ : ಡಿ.13 ರಂದು ಜಲಾನಯನ ಮಹೋತ್ಸವ-2025

ಮುದ್ದೇಬಿಹಾಳ : ಡಿ.13 ರಂದು ಜಲಾನಯನ ಮಹೋತ್ಸವ-2025

ಮುದ್ದೇಬಿಹಾಳ : ಜಲಾನಯನ ಇಲಾಖೆ,ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಡಿ.13 ರಂದು ಮದ್ಯಾಹ್ನ

MUDDEBIHAL : PWD AEE ರೆಡ್ಡಿ ಅಧಿಕಾರ ಸ್ವೀಕಾರ

MUDDEBIHAL : PWD AEE ರೆಡ್ಡಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾಗಿ ಅಯ್ಯಪ್ಪಗೌಡ ರೆಡ್ಡಿ ಶುಕ್ರವಾರ ಅಧಿಕಾರ

ಡಿ.21 ರಿಂದ 24 ರವರೆಗೆ ಅಭಿಯಾನ:                           MUDDEBIHAL : ಐದು ವರ್ಷದೊಳಗಿನ 39,370 ಮಕ್ಕಳಿಗೆ ಪೋಲಿಯೋ ಲಸಿಕೆ

ಡಿ.21 ರಿಂದ 24 ರವರೆಗೆ ಅಭಿಯಾನ: MUDDEBIHAL : ಐದು ವರ್ಷದೊಳಗಿನ 39,370 ಮಕ್ಕಳಿಗೆ ಪೋಲಿಯೋ ಲಸಿಕೆ

ಮುದ್ದೇಬಿಹಾಳ : ತಾಲ್ಲೂಕಿನಾದ್ಯಂತ ಡಿ.21ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನಾಗರಿಕರು ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ತಹಶೀಲ್ದಾರ್ ಕೀರ್ತಿ ಚಾಲಕ ಮನವಿ ಮಾಡಿದರು. ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪಲ್ಸ್ ಪೋಲಿಯೋ ಲಸಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಡಿ.21ರಂದು ಬೂತ್ ಮಟ್ಟದಲ್ಲಿ ಪೋಲಿಯೋ ಲಸಿಕೆ ಹಾಕಲಾಗುತ್ತಿದ್ದು ನಂತರ ಮೂರು ದಿನ ಮನೆ ಮನೆಗೆ ತೆರಳಿ ಪೋಲಿಯೋ

IND vs SA: ಕಿಂಗ್ ಕೊಹ್ಲಿ ಸಲಹೆ ಲೆಕ್ಕಿಸದ ಕನ್ನಡಿಗ ರಾಹುಲ್; ರೋಹಿತ್ ರಿಯಾಕ್ಷನ್ ವೈರಲ್

IND vs SA: ಕಿಂಗ್ ಕೊಹ್ಲಿ ಸಲಹೆ ಲೆಕ್ಕಿಸದ ಕನ್ನಡಿಗ ರಾಹುಲ್; ರೋಹಿತ್ ರಿಯಾಕ್ಷನ್ ವೈರಲ್

ವಿಶಾಖಪಟ್ಟಣ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat kohli) ಅವರು ಮೈದಾನದಲ್ಲಿ ಕ್ಷೇತ್ರರಕ್ಷಣೆಯ ವೇಳೆ ಸದಾ ಸಕ್ರಿಯರಾಗಿಯೇ ಇರುತ್ತಾರೆ ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ಸಂಗತಿ. ಹಾಗೇ ಓರ್ವ ಅನುಭವಿ ಆಟಗಾರನಾಗಿ ನಾಯಕರೊಂದಿಗೆ ತಮ್ಮ ಸಲಹೆ ಸೂಚನೆಗಳನ್ನು ಹಂಚಿಕೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ. IND vs SA Match ಹೌದು, ಪ್ರಸ್ತುತ ವಿಶಾಖಪಟ್ಟಣದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಇಂತಹದೊಂದು ಘಟನೆ