Let us, as Kannadigas, cultivate Kannada pride: Go.Ru.Cha

ಕನ್ನಡಿಗರಾದ ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳೋಣ: ಗೊ.ರು.ಚ

ಕನ್ನಡಿಗರಾದ ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳೋಣ: ಗೊ.ರು.ಚ

ರಾಯಚೂರು: ಕನ್ನಡಿಗರಾದ ನಾವು ಕನ್ನಡ ಸಾಹಿತ್ಯ ಒಲವು ಬೆಳೆಸಿಕೊಂಡು ಭಾಷಾ ಪ್ರೇಮವನ್ನು ಮೆರೆಯುವಂತಾಗಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರು ಹೇಳಿದರು.

ಮಾ.6ರ ಗುರುವಾರ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ರಾಯಚೂರು ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಿಗರಾದ ನಾವು ಆತ್ಮ ವಿಮರ್ಶೆ ಮಾಡಿಕೊಂಡು ಕಳೆದು ಹೋಗುತ್ತಿರುವ ನಮ್ಮನ್ನು ನಾವು ಹುಡಕಿಕೊಳ್ಳಲು ಸಮ್ಮೇಳನಗಳು ಸಹಕಾರಿಯಾಗಲಿವೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಸಾಂಸ್ಕೃತಿಕ ಜಾತ್ರೆಗಳಾಗಿದ್ದು, ಪರಸ್ಪರ ಮಾನವ ಸಂಬಂಧ ಬೆಸೆಯುವ ಸಾಹಿತ್ಯ ಜಾತ್ರೆಗಳಾಗಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅತ್ಯಂತ ಹಳೆಯ ಸಂಸ್ಥೆಯಾಗಿದೆ. ಇದರಿಂದ ನಡೆಯುವ ಸಾಹಿತ್ಯ ಸಮ್ಮೇಳನಗಳು ಇದೀಗ ತಾಲೂಕು ಕೇಂದ್ರಗಳಿಗೂ ವಿಸ್ತರಿಸಿರುವುದು ವಿಶೇಷ ಎಂದರು. ನೂರು ಜನರ ಸದಸ್ಯರಿದ್ದ ಪರಿಷತ್ ಇಂದು ಐದು ಲಕ್ಷಕ್ಕೂ ಅಧಿಕ ಸದಸ್ಯತ್ವ ಪಡೆದು ಜಗತ್ತಿನ ವಿವಿಧೆಡೆಯೂ ಸದಸ್ಯರನ್ನು ಹೊಂದಿರುವದು ಹೆಮ್ಮೆಯ ವಿಚಾರ ಎಂದರು.

ನಾವೀಗ ಸಾಹಿತ್ಯ ಪರಿಷತ್‌ನ ಶತಮಾನೋತ್ಸವದ ಸಂಭ್ರಮದಲ್ಲಿದ್ದೇವೆ. ರಾಜಕಾರಣಿಗಳಲ್ಲಿ, ಧರ್ಮಗುರುಗಳಲ್ಲಿ ಸಹ ಸಾಹಿತ್ಯಾಸಕ್ತಿ ಬೆಳೆಸುವ ಕಾರ್ಯವನ್ನು ಇಂತಹ ಸಮ್ಮೇಳನಗಳು ಮಾಡುತ್ತಿರುವುದು ಹೆಗ್ಗಳಿಕೆಯಾಗಿದೆ. ಹೀಗೆ ಎಲ್ಲರನ್ನೂ ಒಳಗೊಂಡು ಸಾಹಿತ್ಯ ಪರಿಷತ್ ಮುನ್ನಡೆಯಬೇಕಿದೆ ಎಂದರು.

ವಚನ ಸಾಹಿತ್ಯವು ಪರ್ಯಾಯ ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಸಾಹಿತ್ಯವು ಜನ ಸಂಕಷ್ಟಕ್ಕೆ, ನೋವಿಗೆ ಪರಿಹಾರ ಹುಡುಕುವಂತಾಗಬೇಕು. ರಾಜ್ಯ ಸರ್ಕಾರವು ಪುಸ್ತಕ ಓದುವ ಅಭಿರುಚಿ, ವೈಚಾರಿಕ ಅಭಿಪ್ರಾಯಗಳಿಗೆ ಒಲವು ತೋರಿಸುತ್ತಿರುವುದು ಸಮಧಾನಕರ ಬೆಳವಣಿಗೆಯಾಗಿದೆ ಎಂದರು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಹೋರಾಟಕ್ಕೆ ತಾವು ಬೆಂಬಲಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು, ಸಂಸದರಾದ ಜಿ.ಕುಮಾರನಾಯಕ, ಮಹಾನಗರ ಪಾಲಿಕೆಯ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೆಂಕಟೇಶ ಬೇವಿನಬೆಂಚಿ, ಸಮ್ಮೇಳನಾಧ್ಯಕ್ಷರಾದ ಅಯ್ಯಪ್ಪಯ್ಯ ಹುಡಾ, ಮಹಾನಗರ ಪಾಲಿಕೆಯ ಸದಸ್ಯರಾದ ಜಯಣ್ಣ, ಐದನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಾಬು ಬಂಡಾರಿಗಲ್, ಹಿರಿಯ ಪತ್ರಕರ್ತರಾದ ಬಸವರಾಜ ಸ್ವಾಮಿ, ಅರವಿಂದ ಕುಲಕರ್ಣಿ, ಚನ್ನಬಸವಣ್ಣ, ಸಾಹಿತಿಗಳಾದ ಬಾಬು ಬಂಢಾರಿಗಲ್, ಭಗತರಾಜ ನಿಜಾಮಕಾರಿ, ನಾಗರಾಜ ಮಸ್ಕಿ, ತಾಯಪ್ಪ ಹೊಸೂರು, ಜಿ.ಸುರೇಶ ಇದ್ದರು.

Latest News

ಇ.ಆರ್.ಟಿ ಅನುಷ್ಠಾನ; ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ

ಇ.ಆರ್.ಟಿ ಅನುಷ್ಠಾನ; ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ

ಧಾರವಾಡ, ಜೂನ್‌16: ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ: ಸಚಿವ ಸಂತೋಷ್‌ ಲಾಡ್

ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ: ಸಚಿವ ಸಂತೋಷ್‌ ಲಾಡ್

ಧಾರವಾಡ, ಜೂನ್‌ 16: ಮಳೆಗಾಲದ ಸಂಕಷ್ಟ ಸಂದರ್ಭದಲ್ಲಿಯೂ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಾರ್ವಜನಿಕ ಸ್ನೇಹಿಯಾಗಿ

ನೀಟ್ ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನ ಆಕಾಶಗೆ 604 ಅಂಕ

ನೀಟ್ ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನ ಆಕಾಶಗೆ 604 ಅಂಕ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ನೀಟ್

ರಸ್ತೆ ಕಾಮಗಾರಿ ಅಪೂರ್ಣ : ಟೋಲ್ ಸಂಗ್ರಹಕ್ಕೆ ವಿರೋಧ

ರಸ್ತೆ ಕಾಮಗಾರಿ ಅಪೂರ್ಣ : ಟೋಲ್ ಸಂಗ್ರಹಕ್ಕೆ ವಿರೋಧ

ಮುದ್ದೇಬಿಹಾಳ : ಹುನಗುಂದ ತಾಲ್ಲೂಕಿನಿಂದ ತಂಗಡಗಿ ಮುಖಾಂತರ ತಾಳಿಕೋಟಿಯವರೆಗೆ ನಿರ್ಮಿಸಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು

ಬಸವಸಾಗರ ಜಲಾಶಯದಿಂದ 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಬಸವಸಾಗರ ಜಲಾಶಯದಿಂದ 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ನಾರಾಯಣಪುರ: ಬಸವಸಾಗರವು ಶೇ.83 ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದ ಕ್ರಸ್ಟ್ ಗೇಟ್‌ಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಕ್ರಸ್ಟ್ ಗೇಟ್ ಮೂಲಕ 5 ಸಾವಿರ ಕ್ಯೂಸೆಕ್ ಹಾಗೂ ಎಂಪಿಸಿಎಲ್ ಖಾಸಗಿ ಜಲವಿದ್ಯುತ್ ಸ್ಥಾವರದಿಂದ 3 ಸಾವಿರ ಕ್ಯೂಸೆಕ್ ಸೇರಿ 8 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಬಸವಸಾಗರಕ್ಕೆ ಆಲಮಟ್ಟಿ ಶಾಸ್ತ್ರೀ ಜಲಾಶಯದಿಂದ ಒಳಹರಿವು ಸದ್ಯ 20 ಸಾವಿರ ಕ್ಯೂಸೆಕ್‌ನಷ್ಟಿದೆ

ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹೊಸ ಬಸ್ ಸಂಚಾರಕ್ಕೆ ಮನವಿ

ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹೊಸ ಬಸ್ ಸಂಚಾರಕ್ಕೆ ಮನವಿ

ನಾರಾಯಣಪುರ: ನಾರಾಯಣಪುರ ಮಾರ್ಗವಾಗಿ ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹಾಗೂ ಕೊಡೇಕಲ್ ಮಾರ್ಗವಾಗಿ ತಾಳಿಕೋಟಿಗೆ ಹೊಸ ಬಸ್ ಸಂಚಾರ ಶನಿವಾರ ಯಾದಗಿರಿ ಸಾರಿಗೆ ಡಿಸಿ (ಡಿವಿಜನಲ್ ಕಂಟ್ರೋಲರ್) ಅವರಿಗೆ ಬರೆದ ಮನವಿಯನ್ನು ಸಾರಿಗೆ ನಿಯಂತ್ರಕ ಐ.ಎ ಕರಣಿ ಅವರಿಗೆ ಗ್ರಾಮಸ್ಥರ ಸಲ್ಲಿಸಿದರು. ಈ ವೇಳೆ ಮುಖಂಡ ಸಂಗಮೇಶ ತಾಳಿಕೋಟಿ ಮಾತನಾಡಿ ಜಿಲ್ಲೆಯ ಗಡಿಗ್ರಾಮವಾಗಿರುವನಾರಾಯಣಪುರ ಸೇರಿ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಗ್ರಾಮಸ್ಥರಿಗೆ ರಾತ್ರಿ ವೇಳೆ ನಾರಾಯಣಪುರ ಮಾರ್ಗವಾಗಿ ಬಸ್ಸುಗಳ ಸಂಚಾರ ಇಲ್ಲದೆ