ಮುದ್ದೇಬಿಹಾಳ : ದೇಶದ ಸ್ವಾತಂತ್ರಕ್ಕಾಗಿ ಹಲವು ಮಹನೀಯರು ತಮ್ಮ ಪ್ರಾಣಾರ್ಪಣೆಗೈದಿದ್ದು ಅವರನ್ನು ಸ್ಮರಿಸುವ ಕಾರ್ಯ ಆಗಬೇಕು ಎಂದು ಇಣಚಗಲ್ಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಹಣಮಂತ ಭೈರವಾಡಗಿ ಹೇಳಿದರು.
Join Our Telegram: https://t.me/dcgkannada
ತಾಲ್ಲೂಕಿನ ಇಣಚಗಲ್ಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ನಿಮಿತ್ಯ ರಾಷ್ಟ್ರದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ. ಅಸಂಖ್ಯಾತ ಜನರು ತಮ್ಮ ಜೀವ ಕೊಟ್ಟು ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟಿದ್ದಾರೆ.ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಇದನ್ನೂ ಓದಿ: ಇದಕ್ಕೆ ಬರೀ PDO ಮಾತ್ರವಲ್ಲ.. ಗ್ರಾಪಂ ಅಧ್ಯಕ್ಷರೂ ಹೊಣೆ!
ಎಸ್ಡಿಎಂಸಿ ಉಪಾಧ್ಯಕ್ಷ ವೀರೇಶ ಖೈನೂರ, ಗ್ರಾಮ ಪಂಚಾಯಿತಿ ಸದಸ್ಯ ರಾಮನಗೌಡ ಪಾಟೀಲ್, ಪಿಕೆಪಿಎಸ್ ಮಾಜಿ ಸದಸ್ಯ ನಾಗಪ್ಪ ಭೈರವಾಡಗಿ, ಶಾಲೆಯ ಮುಖ್ಯಗುರು ಸಿ.ಎಚ್.ಗುಳಬಾಳ, ಎಸ್.ಎನ್.ಮಡಿಕೇಶ್ವರ, ಗ್ರಾಮಸ್ಥರಾದ ಹಣಮಂತ ಕನ್ನೊಳ್ಳಿ, ಸಾಹೇಬಗೌಡ ತಾಳಿಕೋಟಿ, ಜಾಕೀರಹುಸೇನ್ ಇನಾಮದಾರ, ಗದ್ದೆಪ್ಪ ಮಾದರ, ವಿಠ್ಠಲ ಬನ್ನೆಟ್ಟಿ, ನಿಂಗನಗೌಡ ಪಾಟೀಲ್, ಸಂಗಪ್ಪ ಬಾಕಲಿ, ಕಲ್ಲಪ್ಪ ಹೊನ್ನಳ್ಳಿ, ಮುತ್ತು ಕವಡಿಮಟ್ಟಿ, ಕೃಷ್ಣಾ ಸೋಮನಾಳ, ಸಂಗಮೇಶ ತಾಳಿಕೋಟಿ, ಸಂತೋಷ ತಾಳಿಕೋಟಿ, ಅಂಗನವಾಡಿ ಕಾರ್ಯಕರ್ತೆ ಕಮಲಾ ಭೈರವಾಡಗಿ, ನೀಲಮ್ಮ ತಳ್ಳೊಳ್ಳಿ ,ಮಹಾದೇವಿ ಅಂಗಡಿ ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.