Life threat from municipal staff's family: Allegation

ಪುರಸಭೆ ಸಿಬ್ಬಂದಿ ಕುಟುಂಬದಿಂದಲೇ ಜೀವ ಬೆದರಿಕೆ: ಆರೋಪ

ಪುರಸಭೆ ಸಿಬ್ಬಂದಿ ಕುಟುಂಬದಿಂದಲೇ ಜೀವ ಬೆದರಿಕೆ: ಆರೋಪ

ಮುದ್ದೇಬಿಹಾಳ : ಪುರಸಭೆಯಲ್ಲಿ ಅನಧಿಕೃತವಾಗಿ ನೇಮಕಗೊಂಡಿರುವ ಸಿಬ್ಬಂದಿಯೊಬ್ಬ ತನ್ನ ಕುಟುಂಬದವರು ಹಾಗೂ ತನ್ನ ಹಿಂಬಾಲಕರೊಂದಿಗೆ ನನಗೆ ಜೀವ ಬೆದರಿಕೆ ಒಡ್ಡಿದ್ದು ನನಗೆ ಹಾಗೂ ನನ್ನ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಪುರಸಭೆ ಸದಸ್ಯ ಶಿವು ಶಿವಪೂರ(ಹರಿಜನ) ಪೊಲೀಸರಿಗೆ ಮನವಿ ಮಾಡಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಕರೆದಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಕುಂದುಕೊರತೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಶಿವಪೂರ, ಕೋರ್ಟಿನ ಆದೇಶ ತಿರುಚಿ ಮೂಲಿಮನಿ ಎಂಬುವರು ನೌಕರಿ ಮಾಡುತ್ತಿದ್ದು ಅವರ ಮೇಲೆ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಪತ್ರ ಕೊಟ್ಟಿದ್ದಕ್ಕೆ ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ದೂರಿದರು.
ದಲಿತ ಮುಖಂಡರಾದ ಹರೀಶ ನಾಟೀಕಾರ, ಪರಶುರಾಮ ನಾಲತವಾಡ, ಬಸವರಾಜ ಪೂಜಾರಿ, ದೇವರಾಜ ಹಂಗರಗಿ ಮತ್ತಿತರರು ಮಾತನಾಡಿ, ಕೋರ್ಟಿನ ಆದೇಶವನ್ನು ತಿರುಚಿ ಅನಧಿಕೃತವಾಗಿ ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ಮೂಲಿಮನಿ ಎಂಬ ನೌಕರನಿಂದ ಸದಸ್ಯ ಶಿವಪೂರಗೆ ಎರಡ್ಮೂರು ಬಾರಿ ಹಲ್ಲೆ ಪ್ರಯತ್ನ ನಡೆದಿದ್ದು ಜೀವ ಬೆದರಿಕೆ ಕೂಡಾ ಹಾಕಿದ್ದಾರೆ. ಈ ವಿಷಯವಾಗಿ ಜಿಲ್ಲಾಧಿಕಾರಿ, ಎಸ್ಪಿ ಅವರಿಗೂ ಪತ್ರ ಕೊಟ್ಟಿದ್ದು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಇದಕ್ಕೆ ಸ್ಪಂದಿಸಿದ ಪಿಎಸ್‌ಐ ಸಂಜಯ ತಿಪರೆಡ್ಡಿ, ಈ ವಿಷಯವಾಗಿ ಮೇಲಧಿಕಾರಿಗಳಿಂದ ಪತ್ರ ಬಂದಿದ್ದು ಎದುರುದಾರರಿಂದಲೂ ಪತ್ರ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ದಲಿತ ಮುಖಂಡರು, ಪರಿಶಿಷ್ಟ ಜಾತಿ ಜನಾಂಗದವರ ಮೇಲೆ ಶೋಷಣೆ ನಡೆಯುತ್ತಿರುವಾಗ ಎದುರುದಾರರಿಂದ ದೂರು ದಾಖಲಿಸಿಕೊಂಡು ಸಮುದಾಯದ ರಕ್ಷಣೆಯನ್ನು ಕಡೆಗಣಿಸಲಾಗುತ್ತದೆ ಎಂದು ಆರೋಪಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಪಿಐ ಮಹ್ಮದ ಫಸೀವುದ್ದೀನ್ ಸಭೆಗೆ ಭರವಸೆ ನೀಡಿದರು.

ಇನ್ನುಳಿದಂತೆ ನೇತಾಜಿ ನಗರಕ್ಕೆ ಹೋಗುವ ರಸ್ತೆಯ ಮುಂದೆ ಓರ್ವ ಮಹಿಳೆಯಿಂದ ಮಾಂಸ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು ಯಾವ ಅಧಿಕಾರಿಗೂ ಆಕೆ ಹೆದರುವುದಿಲ್ಲ. ಅವಳಿಂದಲೇ ಇನ್ನುಳಿದವರು ಪುರಸಭೆಯ ಅನುಮತಿ ಇಲ್ಲದೇ ಎಲ್ಲೆಂದರಲ್ಲಿ ಮಾಂಸ ಮಾರಾಟದಲ್ಲಿ ತೊಡಗಿದ್ದಾರೆ. ಅನಧಿಕೃತವಾಗಿ ಮಾಂಸ ಮಾರಾಟ ಮಾಡುವವರನ್ನು ತೆರವುಗೊಳಿಸುವ ಕೆಲಸ ಪುರಸಭೆಯಿಂದ ಮಾಡಬೇಕು. ಕಸಾಯಿಖಾನೆಯನ್ನು ಸ್ಥಳಾಂತರಿಸಬೇಕು ಎಂದು ಮುಖಂಡ ಪರಶುರಾಮ ನಾಲತವಾಡ, ಭೀಮಣ್ಣ ದಾಸರ, ಶಿವಪುತ್ರ ಅಜಮನಿ ಒತ್ತಾಯಿಸಿದರು.

ಮುಖಂಡ ತಿಪ್ಪಣ್ಣ ದೊಡಮನಿ ಮಾತನಾಡಿ, ಈಚೇಗೆ ಕೆಲವು ಪ್ರಕರಣಗಳಲ್ಲಿ ದಲಿತ ಜನಾಂಗದವರ ಮೇಲೆ ಶೋಷಣೆ ನಡೆದಾಗ ಪೊಲೀಸರ ಸ್ಪಂದನೆ ತೃಪ್ತಿಕರವಾಗಿಲ್ಲ. ದಲಿತರೊಂದಿಗೆ ಪೊಲೀಸ್ ಇಲಾಖೆ ಅಂತರ ಕಾಯ್ದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೆಲವು ಹಳ್ಳಿಗಳ ಚಹಾದ ಅಂಗಡಿಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಿದೆ. ಅಸ್ಪೃಶ್ಯತೆ ಆಚರಣೆಯ ನಿಷೇಧದ ಕುರಿತು ನಾಮಫಲಕಗಳನ್ನು ಅಳವಡಿಸುವ ಕೆಲಸ ಮಾಡಬೇಕು. ಮದ್ಯಮಾರಾಟ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು. ದಲಿತ ಹುಡುಗ ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಆ ಸಮುದಾಯದವರಿಂದ ಹುಡುಗನಿಗೆ ಬೆದರಿಕೆ ಹಾಕುವ ಕಾರ್ಯ ನಡೆದಿದ್ದು ನ್ಯಾಯಯುತವಾಗಿ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕು. ನಾಲತವಾಡ ರಸ್ತೆಯಲ್ಲಿರುವ ದಲಿತ ಜನಾಂಗದವರ ಸ್ಮಶಾನ ಭೂಮಿ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ಬೀಟ್ ವ್ಯವಸ್ಥೆಗೆ ಬರುವ ಪೊಲೀಸರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದವರ ಕಾಲೋನಿಗಳಲ್ಲಿ ಬರುವುದಿಲ್ಲ. ಇದನ್ನು ಸರಿಪಡಿಸಬೇಕು. ಕೃಷ್ಣಾ ನದಿಯಲ್ಲಿನ ಮಣ್ಣು ಸಾಗಿಸಲು ಅನುಮತಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳು, ಸಮಸ್ಯೆಗಳ ಕುರಿತು ಗಮನ ಸೆಳೆದರು. ಸಿಪಿಐ ಮಹ್ಮದ ಫಸೀವುದ್ದೀನ ಮಾತನಾಡಿ, ದಲಿತ ಜನಾಂಗದವರ ಬೇಡಿಕೆಗಳು, ಸಮಸ್ಯೆಗಳನ್ನು ಆಲಿಸಿದ್ದು ಗಂಭೀರವಾಗಿರುವ ಕೆಲವು ಪ್ರಕರಣಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಸರಿಪಡಿಸುವ ಕೆಲಸ ಮಾಡಲಾಗುವುದು. ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಮುಖಂಡರಾದ ಪ್ರಶಾಂತ ಕಾಳೆ, ಡಿ. ಬಿ. ಮುದೂರ, ದೌರ್ಜನ್ಯ ತಡೆ ಸಮಿತಿ ಸದಸ್ಯ ಮಲ್ಲು ತಳವಾರ, ವಾಯ್. ಎಚ್. ವಿಜಯಕರ್, ಮಲ್ಲಿಕಾರ್ಜುನ ತಂಗಡಗಿ, ಪ್ರಕಾಶ ಚಲವಾದಿ, ಬಲಭೀಮ ನಾಯ್ಕಮಕ್ಕಳ, ರಾಮಣ್ಣ ರಾಜನಾಳ, ಸಿ. ಜಿ. ವಿಜಯಕರ್, ಅನಿಲ ನಾಯಕ, ನಾಗೇಶ ಭಜಂತ್ರಿ, ಭಗವಂತ ಕಬಾಡೆ ಸೇರಿದಂತೆ ಹಲವು ಮುಖಂಡರು ಇದ್ದರು.

ಪಿಲೇಕೆಮ್ಮ ನಗರದಲ್ಲಿ ಬೇರೊಂದು ನಗರಗಳ ಪುಡಾರಿಗಳು ಬಂದು ಅನಧಿಕೃತ ಚಟುವಟಿಕೆಗಳನ್ನು ಮಾಡುತ್ತಾರೆ. ಆದರೆ ಪಿಕೆ ನಗರದ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳನ್ನು ಮಾಡುವವರ ಮೇಲೆ ಇಲಾಖೆ ನಿಗಾ ಇರಿಸಬೇಕು. ಹೆಗಲು ಪಿಕೆ ನಗರದವರದ್ದಾಗಿದ್ದು ಬಂದೂಕು ಬೇರೆ ನಗರದವರದ್ದಾಗಿರುತ್ತದೆ. ಆದರೆ ಹೆಸರು ಕೆಡುತ್ತಿರುವುದು ಪಿಲೇಕೆಮ್ಮ ನಗರದವರದ್ದಾಗಿದೆ. ಈ ಬಗ್ಗೆ ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳಬೇಕು.

Latest News

ಐಪಿಎಲ್‌ ಪಂದ್ಯ ನಿಷೇಧಕ್ಕೆ ಸಚಿವ ಸಂತೋಷ್‌ ಲಾಡ್‌ ಆಗ್ರಹ

ಐಪಿಎಲ್‌ ಪಂದ್ಯ ನಿಷೇಧಕ್ಕೆ ಸಚಿವ ಸಂತೋಷ್‌ ಲಾಡ್‌ ಆಗ್ರಹ

ಬೆಂಗಳೂರು: ಭಾರತ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಪಾಕಿಸ್ತಾನವು ಭಾರತದ ನಾಗರಿಕರನ್ನು ಗುರಿಯಾಗಿರಿಸಿ

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಕೋಲ್ಕತ್ತ: ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ವಿರುದ್ಧ ಸೋಲುವ ಮೂಲಕ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ: ಕೆಎಸ್ಆರ್.ಟಿಸಿ ಬಸ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ಆರೇಶಂಕರ ಕ್ರಾಸ್

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮುದ್ದೇಬಿಹಾಳ : ಪಟ್ಟಣದ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಮುದ್ದೇಬಿಹಾಳ, ಕೋಳೂರು, ಅಡವಿ

ನಿಶ್ಚಿತಾರ್ಥದ ಮನೆಯಿಂದ ಮಸಣದೆಡಗೆ: ಅಪಘಾತದಲ್ಲಿ ಕಮರಿದ ಮದುವೆಯ ಕನಸು

ನಿಶ್ಚಿತಾರ್ಥದ ಮನೆಯಿಂದ ಮಸಣದೆಡಗೆ: ಅಪಘಾತದಲ್ಲಿ ಕಮರಿದ ಮದುವೆಯ ಕನಸು

ನಿಶ್ಚಿತಾರ್ಥದ ಖುಷಿಯಲ್ಲಿ ಪಯಣ ಬೆಳೆಸಿದ ಕುಟುಂಬಕ್ಕೆ ಇಂದು ಬೆಳಗ್ಗಿನ ಜಾವ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನಿಶ್ಚಿತಾರ್ಥ ಮುಗಿಸಿಕೊಂಡು ಬಾಗಲಕೋಟ ಜಿಲ್ಲೆಯ ಕುಳಗೇರಿ ಕ್ರಾಸ್ ಗೆ ತೆರಳುತ್ತಿರುಬ ಕುಟುಂಬ ಅಪಘಾತಕ್ಕೆ ಬಲಿಯಾಗಿದೆ. ಶ್ವೇತಾ ಎಬ ಯುವತಿ ಎರಡು ದಿನಗಳ‌ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಹೊಸ ಬಾಳ‌ ಸಂಗಾತಿ ಹಾಗೂ ಹೊಸ ಜೀವನದ ಕನಸಿನೊಂದಿಗೆ ಕಾರನ್ನೇರಿ ಪಯಣ ಬೆಳೆಸಿದ್ದಳು. ವಿಧಿಯ ಮುಂದೆ, ಅಪಘಾತದಲ್ಲಿ ಕನಸು ನುಚ್ಚು ನೂರಾಗಿದೆ. ಎರಡು ದಿನಗಳ ಹಿಂದೆ ಸಾಗರ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಲಿಂಗಸಗೂರು: ತಾಲ್ಲೂಕಿನ ಚಿತ್ತಾಪೂರ ಗ್ರಾಮದಲ್ಲಿ ಬೋರವೇಲ್ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಗ್ರಾಮದ ಜನರಿಗೆ ಯೋಗ್ಯವಾದ ಕೃಷ್ಣ ನದಿಯ ನೀರನ್ನು ಒದಗಿಸಬೇಕು ಎಂದು ಸಹಾಯಕ ಆಯುಕ್ತರಿಗೆಅಂಬೇಡ್ಕರ ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕಳೆದ ವರ್ಷ ಬೇಸಿಗೆಯಲ್ಲಿ ಚಿತ್ತಾಪೂರ ಗ್ರಾಮದ ಸಂಪೂರ್ಣ ಜನರಿಗೆ ವಾಂತಿ ಬೇಧಿಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದರು. ಇಡೀ ರಾಜ್ಯಾದ್ಯಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಬೇಟಿ ನೀಡಿ, ಹತೋಟಿಗೆ ತರುವ