ಪ್ರಿಯತಮನಿಗಾಗಿ ಮನೆ ಬಿಟ್ಟು ಓಡಿ ಬಂದ ₹12 ಕೋಟಿ ಆಸ್ತಿ ಒಡತಿ!

ಪ್ರಿಯತಮನಿಗಾಗಿ ಮನೆ ಬಿಟ್ಟು ಓಡಿ ಬಂದ ₹12 ಕೋಟಿ ಆಸ್ತಿ ಒಡತಿ!


ಬೆಳಗಾವಿ: ಪ್ರೀತಿಸಿ ಮದುವೆಯಾದ ಜೋಡಿ ಭದ್ರತೆ ನೀಡುವಂತೆ ಎಸ್​ಪಿ ಮೊರೆ ಹೋಗಿದ್ದಾರೆ.

ಬೆಂಗಳೂರು (Bengaluru) ಮೂಲದ ಯುವತಿ ಪ್ರಿಯಾಂಕಾ ಹಾಗೂ ಬೆಳಗಾವಿ ಮೂಲದ ಯುವಕ ರೋಹಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನವದಂಪತಿಗಳಾಗಿದ್ದಾರೆ. ಖಾನಾಪುರದ ದೇವಸ್ಥಾನವೊಂದರಲ್ಲಿ (Temple) ವೈವಾಹಿತ ಜೀವನಕ್ಕೆ (Marriage Life) ಕಾಲಿಟ್ಟಿದ್ದ ಜೋಡಿ ನೇರ ಎಸ್​ಪಿ ಕಚೇರಿ ಆಗಮಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು ಮೂಲದ ಪ್ರಿಯಾಂಕಾ ಮೂರು ದಿನಗಳ ಹಿಂದೆಯಷ್ಟೇ ಮನೆ ಬಿಟ್ಟು ಪ್ರಿಯಕರನಿಗಾಗಿ ಬೆಳಗಾವಿಗೆ ಆಗಮಿಸಿದ್ದಾಳೆ. ಸದ್ಯ ರೋಹಿತ್, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರಿಯಾಂಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂದಹಾಗೇ, ಪ್ರಿಯಾಂಕಾಗೆ ಬೆಂಗಳೂರಲ್ಲಿ ಸುಮಾರು 12 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರಂತೆ. ಆಕೆಯ ಪೋಷಕರು ಚಿಕ್ಕವಯಸ್ಸಿನಲ್ಲಿರುವಾಗಲೇ ಸಾವನ್ನಪ್ಪಿದ್ದು, ಸೋದರ ಮಾವನ ಆಶ್ರಯದಲ್ಲಿ ಬೆಳೆದಿದ್ದರಂತೆ.

ಇನ್ನು, ಶಿವಮೊಗ್ಗ ‌ಹಾಗೂ ಬೆಂಗಳೂರಲ್ಲಿ ಪ್ರಿಯಂಕಾ ತಂದೆ ಆಸ್ತಿ ಹೊಂದಿದ್ದು, ಪ್ರಿಯಾಂಕಾಗೆ 18 ವರ್ಷ ತುಂಬಿದ ಬಳಿಕ ಈ ಎಲ್ಲಾ ಆಸ್ತಿಗಳು ಪ್ರಿಯಂಕಾ ಹೆಸರಿಗೆ ವರ್ಗಾವಣೆಯಾಗಿದೆಯಂತೆ. ಆದರೆ ಸೋದರ ಮಾವನ ಕಿರಿಕಿರಿಗೆ ಬೇಸತ್ತು ಪ್ರಿಯಾಂಕಾ ಪ್ರಿಯಕರ ಮನೆಗೆ ಬಂದಿದ್ದರಂತೆ. ಆದರೆ ಪ್ರಿಯಾಂಕಾ-ರೋಹಿತ್ ಮದುವೆಯಾಗದಂತೆ ತಡೆಯಲು ಆಕೆಯ ಸಹೋದರ ಮಾವನ ಮಗ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮದುವೆ ಬಳಿಕ ಬೆಳಗಾವಿ ಎಸ್ ಪಿ ಡಾ. ಭೀಮಾಶಂಕರ ಗುಳೇದ್ ಅವರನ್ನು ಭೇಟಿಯಾಗಿ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಖಾನಾಪುರ ಪೊಲೀಸರಿಂದ ಸೂಕ್ತ ಭದ್ರತೆ ನೀಡುವ ಭರವಸೆಯನ್ನು ಎಸ್​ಪಿ ನೀಡಿದ್ದಾರೆ.

ಇನ್ ಸ್ಟಾದಲ್ಲಿ ಪರಿಚಯ, ಲವ್ !
ಇನ್ನು, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಿಯಾಂಕಾ, ಇಂದು ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ನನ್ನ ಬಳಿ ಯಾವುದೇ ದಾಖಲೆ ಇಲ್ಲ. ಬೆಂಗಳೂರಿನಲ್ಲಿ ರಕ್ಷಣೆ ಬೇಕು ಎಂದರೇ ಕಮಿಷನರ್ ಅವರನ್ನು ಭೇಟಿ ಮಾಡಲು ಹೇಳಿದ್ದಾರೆ. ಆದ್ದರಿಂದ ಅವರಿಗೆ ರಕ್ಷಣೆ ನೀಡಲು ಮನವಿ ಮಾಡಿದ್ದೇನೆ. ಮನೆಯಲ್ಲಿ ನನ್ನನ್ನು ಗೃಹ ಬಂಧನದಲ್ಲಿ ಇಟ್ಟಿದ್ದರು. ಅಲ್ಲಿಂದ ನಾನು ಬೆಳಗಾವಿಗೆ ಬಂದೇ, ಖಾನಾಪುರಕ್ಕೆ ಹೋಗಿ ಅಲ್ಲಿಯೂ ಪೊಲೀಸರಿಗೆ ದೂರು ನೀಡಿದ್ದೇವು ಎಂದು ತಿಳಿಸಿದ್ದಾರೆ.

ಪ್ರಿಯಾಂಕಾ ಹಾಗೂ ರೋಹಿತ್ ಗೆ ಇನ್ ಸ್ಟಾದಲ್ಲಿ ಪರಿಚಯ ಆಗಿದ್ದು, ಮದುವೆ ನಿಮಿತ್ತ ಬೆಳಗಾವಿಗೆ ಬಂದ ವೇಳೆ ಆಕೆ ಆತನನ್ನು ಮೊದಲ ಬಾರಿಗೆ ಭೇಟಿ ಆಗಿದ್ದಳಂತೆ. ರೋಹಿತ್ ಮನೆಯವರ ಅಕ್ಕರೆ ಹಾಗೂ ಯುವಕನ ಪ್ರೀತಿಗೆ ಮೆಚ್ಚಿ ಆತನನ್ನೇ ಮದುವೆಯಾಗಬೇಕು ಅಂತ ನಿರ್ಧಾರ ಮಾಡಿದ್ದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

ಬೆಳಗಾವಿ ಎಸ್​ಪಿ ಹೇಳಿದ್ದೇನು?
ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಭೀಮಾಶಂಕರ ಗುಳೇದ್ ಅವರು, ಕಚೇರಿಗೆ ಯುವಕ-ಯುವತಿ ಆಗಮಿಸಿದ್ದರು. ಪ್ರೀತಿಸಿ ಮದುವೆಯಾಗಿದ್ದೇವೆ, ನಮಗೆ ಕಾನೂನು ರಕ್ಷಣೆ ಬೇಕು ಎಂದು ಮನವಿ ಮಾಡಿದ್ದರು. ಇದರಂತೆ ಖಾನಾಪುರ ಪೊಲೀಸರಿಗೆ ಸೂಕ್ತ ರಕ್ಷಣೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ತಿಂಗಳ ಹಿಂದೆಯೇ ಖಾನಾಪುರ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದರು. ಆಕೆಯ ದಾಖಲೆಗಳು ಹಾಗೂ ಆಸ್ತಿ ವಿಚಾರದ ಬಗ್ಗೆ ದೂರು ನೀಡಿದ್ದರು. ಆ ವೇಳೆ ಸಂಬಂಧಿಗಳನ್ನು ಕರೆದು ಕೇಳಿದಾಗ ಅವರು ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ ಎಂದು ತಿಳಿಸಿದ್ದರಂತೆ. ಆದ್ದರಿಂದ ಯುವತಿಗೆ ಸಂಬಂಧಪಟ್ಟ ಶಾಲಾ-ಕಾಲೇಜುಗಳಿಂದ ಮತ್ತೊಮ್ಮೆ ದಾಖಲೆ ಪಡೆದುಕೊಳ್ಳಲು ಸೂಚನೆ ನೀಡಿದ್ದೇವೆ. ಆಸ್ತಿ ವಿಚಾರ ಸಿವಿಲ್ ಕೇಸ್ ಆಗಿದ್ದು, ಕೋರ್ಟ್​ ಗೆ ಅರ್ಜಿ ಸಲ್ಲಿಕೆ ಮಾಡಲು ಸೂಚನೆ ನೀಡಿದ್ದೇವೆ ಎಂದು ವಿವರಿಸಿದರು.

Latest News

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಇಳಕಲ್ಲ: ತಾಲೂಕಿನ ಗಡಿಸುಂಕಾಪುರ ಗ್ರಾಮದ ಹತ್ತಿರ ಇಳಕಲ್ ದತ್ತ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿಯ ಜಾಗೆಯ ಕುರಿತು ಕಲಬುರ್ಗಿ ಉಚ್ಛ ನ್ಯಾಯಾಲಯ ಸರ್ವೆ ನಂ.98ಕ್ಕೆ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಧಾರವಾಡ ಜುಲೈ.1: ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕು ಅಂದಾಗ ಶಾಲೆಗಳು ಉತ್ತಮ ಫಲಿತಾಂಶ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಧಾರವಾಡ, ಜುಲೈ 1: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ,

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ ಪಟ್ಟಣದ ಶ್ರೀ ಅಭಿನವ ತಿರುಪತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 11 ನೇ ರಾಜ್ಯ ಪೆಂಕಾಕ್ ಸಿಲಾಸ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಾದ ಶಕುಂತಲಾ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ )25 ರಿಂದ 30 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ವಿಕ್ರಾಂತ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ ) 20 ರಿಂದ 25 ಕೆಜಿ ವಿಭಾಗದಲ್ಲಿ ಕಂಚಿನ ಪದಕ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ ಬೇಕು. ಪ್ರತಿಯೊಬ್ಬ ನಾಗರಿಕರಲ್ಲಿಯೂ ಇದು ನಮ್ಮ ನಗರ, ನಮ್ಮ ಓಣಿ, ನನ್ನ ಮನೆ ಎಂಬ ಹೆಮ್ಮೆ ಮೂಡಿದಾಗ ಮಾತ್ರ ಸ್ವಚ್ಛ ನಗರ ಹೊಂದಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಹೆಮ್ಮ ಮೂಡುವಂತೆ ನಾವು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ