ಸಿಂಗಲ್ ಟೆಂಡರ್‌ಗೆ ಅವಕಾಶ ಕೊಡುವುದಿಲ್ಲ: ಸುಳ್ಳು ಹೇಳುವುದೇ ಶಾಸಕ ನಾಡಗೌಡರ ಕಾಯಕ-ನಡಹಳ್ಳಿ

ಸಿಂಗಲ್ ಟೆಂಡರ್‌ಗೆ ಅವಕಾಶ ಕೊಡುವುದಿಲ್ಲ: ಸುಳ್ಳು ಹೇಳುವುದೇ ಶಾಸಕ ನಾಡಗೌಡರ ಕಾಯಕ-ನಡಹಳ್ಳಿ

ಮುದ್ದೇಬಿಹಾಳ : ಇವತ್ತಿನ ಶಾಸಕ ಅಪ್ಪಾಜಿ ನಾಡಗೌಡರಿಗೆ ಸರಕಾರದಿಂದ ಹಣ ತರುವ ಯೋಗ್ಯತೆ ಇಲ್ಲ. ಬೆಳಗ್ಗೆ ಎದ್ದರೆ ಸುಳ್ಳು ಹೇಳುವುದು, ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಸುಳ್ಳು ಹೇಳುವ, ನಾಟಕ ಮಾಡುವುದನ್ನು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಆರೋಪಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸಕರ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.

ನಾಲತವಾಡದಲ್ಲಿ ಹಕ್ಕುಪತ್ರ ವಿತರಿಸಿರುವಲ್ಲಿ, ಭೂಮಿ ಪೂಜೆ ಮಾಡಿರುವ ಸ್ಥಳಗಳಲ್ಲಿ ಜನರನ್ನು ಸುಳ್ಳು ಹೇಳಿ ಯಾಮಾರಿಸಿದ್ದಾರೆ.ಇವರು ರಾಜಕೀಯ ಜೀವನದಲ್ಲಿ ಏನೇನು ಮಾಡಿದ್ದಾರೋ ದಾಖಲೆಗಳ ಸಮೇತ ತೆರೆದಿಡುತ್ತೇನೆ.ವಾರದಲ್ಲಿ ಎರಡು ಪತ್ರಿಕಾಗೋಷ್ಠಿ ನಡೆಸಿ ಒಂದೊAದು ಹೊಸ ವಿಚಾರಗಳನ್ನು ದಾಖಲಾತಿಗಳ ಸಮೇತ ಬಿಚ್ಚಿಡುವ ಕೆಲಸ ಮಾಡುತ್ತೇನೆ ಎಂದು ಗುಡುಗಿದರು.

ಪದೇ ಪದೇ ಸುಳ್ಳಿಗೆ ಜನರು ಮಾರು ಹೋಗುವುದಿಲ್ಲ. ಸಿಂಗಲ್ ಟೆಂಡರ್ ನಿಮ್ಮ ಶಿಷ್ಯನಿಗೆ ಅದು ಹೇಗೆ ಕೊಡುತ್ತೀರಿ ಎಂದು ನೋಡುತ್ತೇನೆ ಎಂದು ಚಿಮ್ಮಲಗಿ ಏತ ನೀರಾವರಿ ಯೋಜನೆ ಅಮರೇಶ್ವರ ದೇವಸ್ಥಾನದ ಬಳಿ ಈಚೇಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದ ಅನುದಾನದ ಕುರಿತು ಶಾಸಕರಿಗೆ ಸವಾಲು ಹಾಕಿದರು. ನಿಮ್ಮ ಸ್ವಾರ್ಥಕ್ಕೆ ಅಧಿಕಾರಿಗಳನ್ನು ಬಲಿಪಶು ಮಾಡಬೇಡಿ ಎಂದು ಹರಿಹಾಯ್ದರು.


ಬಡವರಿಗೆ ತೊಂದರೆ ಮಾಡಬೇಡಿ
ಮುದ್ದೇಬಿಹಾಳದ ಕ್ಷೇತ್ರದ ಈಗಿನ ಶಾಸಕರಿಗೆ ದಲಿತರು, ಬಡವರು ಕಂಡರೆ ಹೊಟ್ಟೆ ಕಿಚ್ಚು. ಓಟು ಹಾಕುವುದಕ್ಕಷ್ಟೇ ದಲಿತರು,ಬಡವರು ಬೇಕು.ಇವರು ಚುನಾವಣೆ ಸಮಯದಲ್ಲಿ ಯಾಮಾರಿಸಿ ಓಟು ಹಾಕಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹಾಲಿ ಶಾಸಕ ಅಪ್ಪಾಜಿ ನಾಡಗೌಡರ ವಿರುದ್ಧ ಹರಿಹಾಯ್ದರು.

ಬಡವರು ಸಾಲ ಮಾಡಿ ಅಂಗಡಿ ಹಾಕಿಕೊಂಡಿದ್ದಾರೆ. ಅಂತವರ ಅಂಗಡಿಗಳನ್ನು ಶಾಸಕರು ಮುರಿದು ಹಾಕಿಸಿದ್ದಾರೆ.ಬಡವರಾದ ಅವರಿಗೆ ಬೇರೆ ಉದ್ಯೋಗ ಇಲ್ಲ.ಅವರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ.ಈ ಬಗ್ಗೆ ನಾನು ಪೊಲೀಸ್ ವರಿಷ್ಠಾಧಿಕಾರಿಗೆ, ತಾಲ್ಲೂಕಿನ ಅಧಿಕಾರಿಗಳಿಗೆ ಮಾತನಾಡಿ ನ್ಯಾಯಯುತವಾಗಿ ಬದುಕಲು ಬಿಡಿ ಎಂದು ಹೇಳಿದ್ದೇನೆ. ಅಪ್ಪಾಜಿಗೆ ಬಡವರ ಶಾಪ ತಟ್ಟುತ್ತದೆ.ಬಡವರ ಶಾಪ ದೇವರ ಶಾಪಕ್ಕಿಂತ ಕೆಟ್ಟದ್ದು ಎಂದು ಹೇಳಿದರಲ್ಲದೇ ಮುಂದಿನ ಚುನಾವಣೆಯಲ್ಲಿ ನಾನು ಆಯ್ಕೆಯಾದರೆ ಮುದ್ದೇಬಿಹಾಳ ಮತಕ್ಷೇತ್ರದ ಪ್ರಮುಖ ಪಟ್ಟಣಗಳಲ್ಲಿ ಎಸ್.ಸಿ.,ಎಸ್ಟಿ ,ಹಿಂದುಳಿದವರು, ಬಡವರು ಫುಟಪಾತ್‌ನಲ್ಲಿ ಅಂಗಡಿಗಳನ್ನು ಮಾಡಿಕೊಡುತ್ತೇನೆ.ಅಗತ್ಯವಿದ್ದರೆ ಸರ್ಕಾರದ ಅನುದಾನ ಪಡೆದುಕೊಂಡು ಅವರ ನೆರವಿಗೆ ನಿಲ್ಲುವು ಕೆಲಸ ಮಾಡುತ್ತೇನೆ ಎಂದು ನಡಹಳ್ಳಿ ಹೇಳಿದರು.ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಅಶೋಕ ರಾಠೋಡ, ಪುರಸಭೆ ಸದಸ್ಯ ಬಸಪ್ಪ ತಟ್ಟಿ,ಸಹನಾ ಬಡಿಗೇರ ಇದ್ದರು.

Latest News

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಇಳಕಲ್ಲ: ತಾಲೂಕಿನ ಗಡಿಸುಂಕಾಪುರ ಗ್ರಾಮದ ಹತ್ತಿರ ಇಳಕಲ್ ದತ್ತ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿಯ ಜಾಗೆಯ ಕುರಿತು ಕಲಬುರ್ಗಿ ಉಚ್ಛ ನ್ಯಾಯಾಲಯ ಸರ್ವೆ ನಂ.98ಕ್ಕೆ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಧಾರವಾಡ ಜುಲೈ.1: ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕು ಅಂದಾಗ ಶಾಲೆಗಳು ಉತ್ತಮ ಫಲಿತಾಂಶ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಧಾರವಾಡ, ಜುಲೈ 1: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ,

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ ಪಟ್ಟಣದ ಶ್ರೀ ಅಭಿನವ ತಿರುಪತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 11 ನೇ ರಾಜ್ಯ ಪೆಂಕಾಕ್ ಸಿಲಾಸ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಾದ ಶಕುಂತಲಾ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ )25 ರಿಂದ 30 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ವಿಕ್ರಾಂತ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ ) 20 ರಿಂದ 25 ಕೆಜಿ ವಿಭಾಗದಲ್ಲಿ ಕಂಚಿನ ಪದಕ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ ಬೇಕು. ಪ್ರತಿಯೊಬ್ಬ ನಾಗರಿಕರಲ್ಲಿಯೂ ಇದು ನಮ್ಮ ನಗರ, ನಮ್ಮ ಓಣಿ, ನನ್ನ ಮನೆ ಎಂಬ ಹೆಮ್ಮೆ ಮೂಡಿದಾಗ ಮಾತ್ರ ಸ್ವಚ್ಛ ನಗರ ಹೊಂದಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಹೆಮ್ಮ ಮೂಡುವಂತೆ ನಾವು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ