Mass Marriage in Tangagii: Live a harmonious life with mother-in-law and daughter-in-law

ತಂಗಡಗಿಯಲ್ಲಿ ಸಾಮೂಹಿಕ ವಿವಾಹ:ಅತ್ತೆ ಸೊಸೆ ಹೊಂದಾಣಿಕೆ ಜೀವನ ನಡೆಸಿ

ತಂಗಡಗಿಯಲ್ಲಿ ಸಾಮೂಹಿಕ ವಿವಾಹ:ಅತ್ತೆ ಸೊಸೆ ಹೊಂದಾಣಿಕೆ ಜೀವನ ನಡೆಸಿ

ಮುದ್ದೇಬಿಹಾಳ : ಕುಟುಂಬದಲ್ಲಿ ಅತ್ತೆ ಸೊಸೆಯಂದಿರು ಹೊಂದಾಣಿಕೆಯ ಜೀವನ ನಡೆಸಬೇಕು ಎಂದು ಕುಂಟೋಜಿ ಚೆನ್ನವೀರ ಶಿವಾಚಾರ್ಯರು ಹೇಳಿದರು.

ತಾಲ್ಲೂಕು ತಂಗಡಗಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಾತ್ರೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವವರ ಮದುವೆ ಬಡವರ ಮದುವೆಗಳಲ್ಲ, ಅವು ಭಾಗ್ಯವಂತರ ಮದುವೆಗಳು. ಇಲ್ಲಿ ಮದುವೆಯಾಗುವವರು ಪುಣ್ಯವಂತರು ಎಂದರು.

ಬಿಲ್‌ಕೆರೂರು ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ತಂಗಡಗಿಯಲ್ಲಿ ದುರ್ಗಾದೇವಿ ಜಾತ್ರೆಯ ಸಮಯದಲ್ಲಿ ಸಾಮೂಹಿಕ ವಿವಾಹ ಮಾಡಿರುವುದು ಮಾದರಿ ಕಾರ್ಯ. ಜಾತ್ರೆಗಳು ಸಂಸ್ಕೃತಿಯನ್ನು ಪಸರಿಸುವ ವಾಹಕಗಳಾಗಬೇಕು ಎಂದರು.

ಇಳಕಲ್ಲ ಉಪತಹಸೀಲ್ದಾರ್ ಈಶ್ವರ ಗಡ್ಡಿ, ಬಸವನ ಬಾಗೇವಾಡಿ ಸಂಸ್ಥಾನ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಡಾ. ಸೋಮಶೇಖರ ಶಿವಾಚಾರ್ಯರು ಮಾತನಾಡಿದರು. ದುರ್ಗಾದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ಶಾಂತಪ್ಪ ಪೂಜಾರಿ, ಸಂಗಣ್ಣ ಗುಳೇದಗುಡ್ಡ, ಶ್ರೀಶೈಲ ಹುಲ್ಲಳ್ಳಿ, ಚರಲಿಂಗಪ್ಪ ಹಾದಿಮನಿ, ಮಹಾಂತೇಶ ಪೂಜಾರಿ, ಕಾಶಪ್ಪ ಪುಡಜಾಲಿ,ಮಂಜು ಪೂಜಾರಿ, ಸುರೇಶ ಹಾದಿಮನಿ, ಮಹಾಂತಪ್ಪ ಹಾದಿಮನಿ, ಸಿದ್ದರಾಮಪ್ಪ ಡೊಂಗರಗಾಂವಿ, ಬಸವರಾಜ ಹೊಳಿ, ಎಎಸ್‌ಐ ಬಸವರಾಜ ಪವಾರ ಇದ್ದರು.

ಸಮಾರಂಭ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಗಮ್ಮ ತಂಗಡಗಿ ಅವರನ್ನು ದೇವಸ್ಥಾನ ಕಮಿಟಿಯಿಂದ ಸನ್ಮಾನಿಸಲಾಯಿತು. ಒಟ್ಟು 29 ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿ.ಎಸ್. ನಾವಿ ಸ್ವಾಗತಿಸಿದರು. ರಮೇಶ ಲಿಂಗದಳ್ಳಿ ನಿರೂಪಿಸಿದರು. ಸಂಗಣ್ಣ ದೇವರಮನಿ ವಂದಿಸಿದರು.

Latest News

ಜ.19 ರಿಂದ ವಿಶ್ವ ದಾಸೋಹ ದಿನ ; ನಾನಾ ಕಾರ್ಯಕ್ರಮ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಮೂರು ದಿನ ನಾಟಕೋತ್ಸವ

ಜ.19 ರಿಂದ ವಿಶ್ವ ದಾಸೋಹ ದಿನ ; ನಾನಾ ಕಾರ್ಯಕ್ರಮ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಮೂರು ದಿನ ನಾಟಕೋತ್ಸವ

ಮುದ್ದೇಬಿಹಾಳ : ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಜನ್ಮದಿನೋತ್ಸವ ಹಾಗೂ ಮಡಿಕೇಶ್ವರದ

ಬಿದ್ದಾಗ ಕೈ ಹಿಡಿದು ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ-ಅಕ್ಷಯಾ ಗೋಖಲೆ

ಬಿದ್ದಾಗ ಕೈ ಹಿಡಿದು ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ-ಅಕ್ಷಯಾ ಗೋಖಲೆ

ತಾಳಿಕೋಟಿ : ತಂದೆ ತಾಯಿ ಹುಟ್ಟಿನಿಂದ ನೀಡುವ ಸಂಸ್ಕಾರವು ಮಗುವಿನ ಭವಿಷ್ಯ ನಿರ್ಧರಿಸುತ್ತದೆ. ಈ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ತಾಂಡಾದ ಡಾ.ಮೋತಿಲಾಲ ರೂ.ಚವ್ಹಾಣ ಅವರನ್ನು ಕರ್ನಾಟಕ

ಮುದ್ದೇಬಿಹಾಳ : ಜ.14 ರಂದು ಸಾಧಕರಿಗೆ ಸನ್ಮಾನ

ಮುದ್ದೇಬಿಹಾಳ : ಜ.14 ರಂದು ಸಾಧಕರಿಗೆ ಸನ್ಮಾನ

ಮುದ್ದೇಬಿಹಾಳ : ಕೊಣ್ಣೂರಿನ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಜ.14 ರಂದು ಸಂಜೆ 5 ಗಂಟೆಗೆ ಇಲ್ಲಿನ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಸಾಧಕರಿಗೆ ಸನ್ಮಾನ ಹಾಗೂ ನೂತನ ದಿನದರ್ಶಿಕೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳು ಮಹಾ ಮಂಡಳ ನಿ..ಬೆಂಗಳೂರು ಇದರ ನಿರ್ದೇಶಕರಾಗಿ ಆಯ್ಕೆಯಾದ ಆನಂದಗೌಡ ಎಸ್. ಬಿರಾದಾರ ಹಾಗೂ ಹಸಿರು ತೋರಣ ಗೆಳೆಯರ ಬಳಗಕ್ಕೆ ನೂತನ ಮುದ್ದೇಬಿಹಾಳ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಂಚಮಸಾಲಿ ಸಮಾಜದ

ಗಮನ ಸೆಳೆದ ಉತ್ತರ ಕರ್ನಾಟಕದ ಊಟ:                     M.R.E.M ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ

ಗಮನ ಸೆಳೆದ ಉತ್ತರ ಕರ್ನಾಟಕದ ಊಟ: M.R.E.M ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ

ಮುದ್ದೇಬಿಹಾಳ : ಉತ್ತರ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯ ಮುನ್ನಾ ದಿನ ಪಟ್ಟಣದ ಮಾರುತಿ ನಗರದ ಗಣಪತಿ ಗುಡಿ ಹತ್ತಿರ ಇರುವ ಎಂ.ಆರ್.ಇ.ಎo ಇಂಟರ್‌ನ್ಯಾಶನಲ್ ಸ್ಕೂಲ್ ಹಾಗೂ ಭಾಗ್ಯವಂತಿ ಎಚ್.ಪಿ.ಎಸ್ ಶಾಲೆಯಲ್ಲಿ ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು. ಸಂಕ್ರಾಂತಿಯ ಸಂಭ್ರಮದ ಅಂಗವಾಗಿ ಉತ್ತರ ಕರ್ನಾಟಕದ ಬಗೆ ಬಗೆಯ ತಿನಿಸುಗಳು,ಆಹಾರ ಪದ್ಧತಿಯನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯವನ್ನು ಶಿಕ್ಷಕರು ಮಾಡಿದರು.ಶಾಲೆಯ ಮುಖ್ಯಗುರುಮಾತೆ ಅಮೃತಾ ಹಿರೇಮಠ ಮಾತನಾಡಿ, ನಮ್ಮ ಭಾಗದಲ್ಲಿ ಆಚರಣೆಯಲ್ಲಿರುವ ಸಂಕ್ರಾಂತಿಯ