CM Siddaramaiah Muda case siddaramaiah prese meet

Muda case: ನಾಳೆ ಸಿಎಂ ಸಿದ್ದರಾಮಯ್ಯ‌ ಹಣೆಬರಹ ನಿರ್ಧಾರ

Muda case: ನಾಳೆ ಸಿಎಂ ಸಿದ್ದರಾಮಯ್ಯ‌ ಹಣೆಬರಹ ನಿರ್ಧಾರ

ಬೆಂಗಳೂರು: ಮುಖ್ಯಮಂತ್ರಿಗಳ ವಿರುದ್ಧದ ಆರೋಪ ಪ್ರಕರಣದಲ್ಲಿ (Muda case) ಸಂಪುಟದ ಸಲಹೆ ಒಪ್ಪಬೇಕಿಲ್ಲ. ಮಂತ್ರಿಗಳನ್ನು ಸಿಎಮ್ಮೆ ಆಯ್ಕೆಮಾಡಿರುವಾಗ ಅಂಥ ಸಂಪುಟದ ನಿರ್ಣಯ, ಸಲಹೆಯನ್ನು ರಾಜ್ಯಪಾಲರು ಒಪ್ಪಬೇಕಾಗಿಲ್ಲ ಎಂದು ರಾಜ್ಯಪಾಲರ ಪರ ಸಾಲಿಸಿಟರ್ ಜನ ರಲ್ ತುಷಾರ್ ಮೆಹ್ರಾ ಪ್ರಬಲವಾಗಿ ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ‌ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada

ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡುವ ಮುನ್ನ ರಾಜ್ಯಪಾಲರು ಸಂಬಂಧಪಟ್ಟ ಪ್ರತಿ ದಾಖಲೆ ಪರಿಶೀಲಿಸಿ, ಟಿಪ್ಪಣಿ ಮಾಡಿಕೊಂಡು ತಮ್ಮ ವಿವೇಚನೆ ಬಳಸಿ ನಿರ್ಧಾರ ಮಾಡಿದ್ದಾರೆ.

ಮುಡಾ (Muda case) ವಿಚಾರದಲ್ಲಿ ಸಿಎಂ ಯಾವುದೇ ನಿರ್ಣಯ ಮಾಡಿಲ್ಲ, ಶಿಫಾರಸು ಮಾಡಿಲ್ಲ ಎಂದಾದರೆ ಅವರಿಗೇಕೆ ಚಿಂತೆ ಎಂದು ಪ್ರಶ್ನಿಸಿದ್ದಾರೆ. ಮುಡಾ ಪ್ರಕರಣ ಸಂಬಂಧ ಪ್ರಾಸಿಕ್ಯೂ ಷನ್ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾ| ಎಂ.ನಾಗಪ್ರಸನ್ನ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಮೆಹ್ರಾ ವಾದ ಮಂಡಿಸಿದ ನಂತರ ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್‌ ಸಿಂಗ್, ಮತ್ತೊಬ್ಬ ದೂರುದಾರ ಪ್ರದೀಪ್ ಪರ ಪ್ರಭುಲಿಂಗ ನಾವದಗಿ ಹಾಗೂ ಟಿ.ಜೆ.ಅಬ್ರಹಾಂ ಪರ ರಂಗನಾಥ ರೆಡ್ಡಿ ಅವರೂ ತಮ್ಮ ವಾದ ಮಂಡಿಸಿದರು. ಎಲ್ಲರವಾದಆಲಿಸಿದನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತು.

ಇದನ್ನೂ ಓದಿ: Love story: ಪ್ರೀತಿಸಲು ಹುಡುಗಿ ಸಿಗಲಿಲ್ಲವೆಂದು ಡೆತ್ ನೋಟ್ ಬರೆದಿಟ್ಟ ಯುವಕ.. ತುಂಗಾ ನದಿಗೆ ಹಾರಿದ್ನಾ..?

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಖಾಸಗಿ ದೂರಿಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡಬೇಕು ಮತ್ತು ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂಬ ಈ ಹಿಂದಿನ ಆದೇಶವನ್ನು ಸೆ.2ರವರೆಗೆ ವಿಸ್ತರಿಸಿತು.

Latest News

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

​ ಮುಧೋಳ : ದೇಶಾಭಿಮಾನ ಪ್ರತಿಯೊಬ್ಬರಲ್ಲಿ ಸ್ವಪ್ರೇರಣೆಯಿಂದ ಮೂಡಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು

ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತಿ : ಅಶೋಕ ಮಣಿ

ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತಿ : ಅಶೋಕ ಮಣಿ

ಮುದ್ದೇಬಿಹಾಳ : ಮಕ್ಕಳ ಮನಸ್ಸಿನಲ್ಲಿ ಬಾಲ್ಯದಿಂದಲೇ ದೇಶಪ್ರೇಮದ ಬೀಜ ಬಿತ್ತಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಮುದ್ದೇಬಿಹಾಳ : ರೈತರ ಬೆಳೆದ ಬೆಳೆ ವಿವರಗಳನ್ನು ದಾಖಲಿಸುವಲ್ಲಿ ಬೆಳೆಯ ಸಮೀಕ್ಷೆದಾರರ ಪಾತ್ರವು ಅತಿ ಮುಖ್ಯವಾಗಿದ್ದು ಅವರ ಬೇಡಿಕೆಯಂತೆ ಐಡಿ ಕಾರ್ಡ್ ಹಾಗೂ ಕಿಟ್ ವಿತರಿಸಲಾಗಿದೆ ಎಂದು ತಹಸೀಲ್ದಾರ್ ಕೀರ್ತಿ ಚಾಲಕ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಹಾಗೂ ಸರ್ಕಾರದ ಪ್ರತಿನಿಧಿಯಾಗಿ ಈ ಬೆಳೆ ಸಮೀಕ್ಷೆದಾರರು ಕಾರ್ಯನಿರ್ವಹಿಸಲಿದ್ದಾರೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಎಸ್. ಡಿ. ಭಾವಿಕಟ್ಟಿ, ಕೃಷಿ ಅಧಿಕಾರಿಗಳಾದ ಗೋವಿಂದರೆಡ್ಡಿ

ಬಲಗೈ ಸಮುದಾಯದಿಂದ ಪ್ರತಿಭಟನೆ ನ್ಯಾ. ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಆಗ್ರಹ

ಬಲಗೈ ಸಮುದಾಯದಿಂದ ಪ್ರತಿಭಟನೆ ನ್ಯಾ. ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಆಗ್ರಹ

ಮುದ್ದೇಬಿಹಾಳ : ಕುಲಶಾಸ್ತ್ರಿಯ ಅಧ್ಯಯನದ ಕೊರತೆ, ಬಲಗೈ ಸಮುದಾಯದ ವಿರುದ್ಧ ದ್ವೇಷಪೂರಿತ ನಿರ್ಧಾರವಾಗಿರುವ ಒಳಮೀಸಲಾತಿ ಕೊಡುವ ಹಿನ್ನೆಲೆಯಲ್ಲಿ ನ್ಯಾ. ನಾಗಮೋಹನದಾಸ್ ನೀಡಿರುವ ವರದಿಯನ್ನು ಸರ್ಕಾರ ಅಂಗೀಕರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ತಾಲ್ಲೂಕು ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅಂಬೇಡ್ಕರ್ ಸರ್ಕಲ್‌ದಿಂದ ಆರಂಭಗೊಂಡ ಪ್ರತಿಭಟನೆ ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ತಹಸೀಲ್ದಾರ್ ಕಚೇರಿಗೆ ಆಗಮಿಸಿತು. ಮುಖಂಡ ಹರೀಶ ನಾಟೀಕಾರ, ಚೆನ್ನಪ್ಪ ವಿಜಯಕರ್