ಶಿವಮೊಗ್ಗ : ಪ್ರೀತಿ ಮಾಡಲು ಹುಡುಗರ
ತರೇವಾರಿ ಸಾಹಸ ಮಾಡಿ ಸುದ್ದಿಯಾಗಿದ್ದು ಇದೆ. ಆದರೆ ಇಲ್ಲೊಬ್ಬ ಯುವಕ ಪ್ರೀತಿಸಲು ಹುಡುಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾನೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಹೌದು, ತೀರ್ಥಹಳ್ಳಿಯ ಜಯದೇವ್ (24) ನಾಪತ್ತೆಯಾಗಿರುವ ಯುವಕ ಈ ರೀತಿ ಮಾಡಿದ್ದಾನೆ.
‘ನನಗಿಂತ ಸಣ್ಣವರಿಗೆ ಲವ್ ಮಾಡಲು ಹುಡುಗಿಯರು ಇದ್ದಾರೆ. ಆದರೆ ನನಗೆ ಒಬ್ಬಳು ಕೂಡ ಲವ್ವರ್ ಇಲ್ಲ’ ಎಂದು ಯುವಕ ಬರೆದುಕೊಂಡಿದ್ದಾನೆ. ಜೊತೆಗೆ, ಮನಿ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿ 90,000 ಹಣಗಳ ಕಳೆದುಕೊಂಡಿರುವ ಬಗ್ಗೆ ಕೂಡ ಉಲ್ಲೇಖಿಸಿದ್ದಾನೆ.
ಕಳೆದ ಮೂರು ವರ್ಷಗಳಿಂದ ಉಪ್ಪಿಲ್ಲದ ಊಟದಂತೆ ನನ್ನ ಬದುಕು ಆಗಿದೆ. ನನಗಿಂತ ಚಿಕ್ಕ ಹುಡುಗರೆಲ್ಲ ಅವರ ಲವರ್ ಜೊತೆ ಮಾತನಾಡುತ್ತಿರುತ್ತಾರೆ. ಇದನ್ನೆಲ್ಲ ನೋಡಿ ನನಗೆ ಜೀವನವೇ ಬೇಡವೆಂಬಾತಾಗಿದೆ ಎಂದು ಬರೆದಿದ್ದಾನೆ.
ಕಳೆದ ಕೆಲ ದಿನಗಳ ಹಿಂದೆ ನಾನು ಒನ್ ಸೈಡ್ ಲವ್ ಮಾಡಿದ್ದ ಹುಡುಗಿಗೆ ಪ್ರಪೋಸ್ ಮಾಡಿದಾಗ ಅವಳು ಕೂಡ ನನ್ನನ್ನ ರಿಜೆಕ್ಟ್ ಮಾಡಿದ್ದಾಳೆ. ಈ ಘಟನೆಯಿಂದಾಗಿ ತನಗೆ ಲವ್ ಮಾಡಲು ಹುಡುಗಿ ಸಿಗುತ್ತಿಲ್ಲ ಎಂದು ಜಯದೇವ್ ಬೇಸರ ವ್ಯಕ್ತಪಡಿಸಿದ್ದಾನೆ.
ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ ಎಂದು ವಾಟ್ಸ್‌ಆ್ಯಪ್ ನಲ್ಲಿ ಜಯದೇವ್ ಬರೆದುಕೊಂಡು, ದಯವಿಟ್ಟು ನನ್ನನು ಕ್ಷಮಿಸಿ ಎಂದು ಪೋಷಕರಲ್ಲಿ ಮನವಿ ಮಾಡಿದ್ದಾನೆ. (Love story)
ಇದನ್ನೂ ಓದಿ: Viral video: ಕೇಸರಿ ಶಾಲು ಧರಿಸಿ ಯುವತಿಯೊಂದಿಗೆ ಅಶ್ಲೀಲವಾಗಿ ಯುವಕ ನೃತ್ಯ.. (ವಿಡಿಯೋ ವೈರಲ್)
ಸದ್ಯ, ತೀರ್ಥಳ್ಳಿಯ ತುಂಗಾ ನದಿಯಲ್ಲಿ ಜಯದೇವ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಯುವಕನಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
