ಮುಡಾ ಹಗರಣ.. ಸಿಎಂ ಪರ ಅರ್ಜಿ ವಜಾ..! ಆ.21ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ಮುಡಾ ಹಗರಣ.. ಸಿಎಂ ಪರ ಅರ್ಜಿ ವಜಾ..! ಆ.21ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

Ad
Ad

Ad
Ad

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದ (Muda scam) ಆರೋಪ ಕುರಿತಾದಂತೆ ಪ್ರಕರಣದ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿದೆ.

ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ಹಾಗೂ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ನಡೆಸಲಾಯಿತು.

Join our telegram: https://t.me/dcgkannada

ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಆರೋಪದ ಸಂಬಂಧ ಸ್ನೇಹಮಯಿ ಕೃಷ್ಣ ಅರ್ಜಿಯ ವಿಚಾರಣೆ ನಡೆಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಆಗಸ್ಟ್ 20ರಂದು ವಿಚಾರಣೆಗೆ ಸ್ವೀಕರಿಸುವುದಾಗಿ ತಿಳಿಸಿ, ಆಗಸ್ಟ್.21ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪರವಾಗಿ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಯನ್ನು ಕೋರ್ಟ್ ವಜಾಗೊಳಿದ್ದು, ಸಿಎಂ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಹೌದು, ಸಿಎಂ ಸಿದ್ದರಾಮಯ್ಯ‌ ವಿರುದ್ಧ ಸ್ನೇಹಮಯಿ ಕೃಷ್ಣ ಎನ್ನುವವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಏತ್ಮಮಧ್ಯೆ, ಆಲಂ ಪಾಷಾ ಪ್ರಾಸಿಕ್ಯೂಷನ್ ಅನುಮತಿ ಇಲ್ಲದೆ ಸಿಎಂ ವಿರುದ್ಧ ಪ್ರಕರಣವನ್ನೇ ಸ್ವೀಕರಿಸಬಾರದು ಎಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಸಿಎಂ ಪರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ಆದೇಶವನ್ನು ನೀಡಿದೆ. ಅಲ್ಲದೆ, ವಿಚಾರಣೆಯ ವೇಳೆ ಆಲಂ ಪಾಷಾ ಎನ್ನುವವರು ಪ್ರಾಜಸಿಕ್ಯೂಷನ್ ಗೆ ಅನುಮತಿ ಇಲ್ಲದೆ, ಸಿಎಂ ಕೇಸ್ ಸ್ವೀಕರಿಸದಂತೆ ಅರ್ಜಿಯನ್ನು ಯಾವ ಕಾನೂನಿನ ಅಡಿ ಅರ್ಜಿ ಸಲ್ಲಿಸಿದ್ದೀರಾ ಎಂದು ಮಧ್ಯಂತರ ಅರ್ಜಿದಾರರಿಗೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪ್ರಶ್ನಿಸಿದ್ದಾರೆ. ಈ ವೇಳೆ ಸಾರ್ವಜನಿಕ ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ: Tungabhadra dam: ಕ್ರಸ್ಟ್ ಗೇಟ್ ಕಟ್ಟಾದ ಬಗ್ಗೆ ಬಿಜೆಪಿಯವರು ಭಾರತ ಸರ್ಕಾರವನ್ನ ಪ್ರಶ್ನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ‌ ತೀರುಗೇಟು

ಆಲಂ ಪಾಷಾ ಅವರ ಈ ವಾದಕ್ಕೆ ಜಡ್ಜ್ ಸಂತೋಷ ಗಜಾನನ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ಅರ್ಜಿದಾರ ಆಲಂಪಾಷ ದೂರು ದಾಖಲಿಸಲು ಅನುಮತಿ ಕೇಳುತ್ತಿಲ್ಲ. ಬದಲಿಗೆ ಕಾನೂನಿನ ಪ್ರಕ್ರಿಯೆನ್ನೇ ತಡೆಹಿಡಿಯಲು ಕೇಳುತ್ತಿದ್ದಾರೆ. ಹೀಗಾಗಿ, ಆಲಂಪಾಷ ಅರ್ಜಿ ವಜಾ ಗೊಳಿಸಲು ಅರ್ಹ ಎಂದು ಕೋರ್ಟ್ ಆದೇಶ ಹೊರಡಿಸಿದೆ.

ಈ ವೇಳೆ ಆಲಂ ಪಾಷ ವಾದಕ್ಕೆ ಸ್ನೇಹಮಯಿ ಕೃಷ್ಣ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಸಂಬಂಧವಿಲ್ಲದ ವ್ಯಕ್ತಿಯ ವಾದ ಆಲಿಸಬಾರದು. ಕೋರ್ಟ್ ಸಮಯ ವ್ಯರ್ಥ ಮಾಡಿರುವುದಕ್ಕೆ ದಂಡ ವಿಧಿಸಬೇಕು ಎಂದು ದೂರುದಾರರ ಸ್ನೇಹಮಹಿನ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದರು.

ವಿಚಾರಣೆ ಸಂದರ್ಭದಲ್ಲಿದಲ್ಲಿ ಪಿಸಿಆರ್ ಅಂದರೆ ಪಬ್ಲಿಕ್ ಕಂಟ್ರೋಲ್ ರೂಂ ಎಂದು ಆಲಂಪಾಷ ಹೇಳಿದಾಗ, ಪಿ ಸಿ ಆರ್ ಎಂದರೇನು ಎಂದು ತಿಳಿಯದೆ ಅರ್ಜಿ ಸಲ್ಲಿಸಿದ್ದೀರಾ? ಕೋರ್ಟ್ನಲ್ಲಿ ತಮಾಷೆ ಮಾಡುತ್ತಿದ್ದೀರಾ ಎಂದು ಜಡ್ಜ್ ತರಾಟೆಗೆ ತೆಗೆದುಕೊಂಡಿದರು. ಅಲ್ಲದೆ, ನೀವು ಸಂತ್ರಸ್ತರಾ? ಅಥವಾ ದೂರುದಾರರಾ? ಸ್ಪಷ್ಟಪಡಿಸಿ ಎಂದು ಜಡ್ಜ್ ಗರಂ ಆಗಿ ಸೂಚಿಸಿದರು.

Latest News

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ

ಕನ್ನಡಿಗರಾದ ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳೋಣ: ಗೊ.ರು.ಚ

ಕನ್ನಡಿಗರಾದ ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳೋಣ: ಗೊ.ರು.ಚ

ರಾಯಚೂರು: ಕನ್ನಡಿಗರಾದ ನಾವು ಕನ್ನಡ ಸಾಹಿತ್ಯ ಒಲವು ಬೆಳೆಸಿಕೊಂಡು ಭಾಷಾ ಪ್ರೇಮವನ್ನು ಮೆರೆಯುವಂತಾಗಬೇಕು ಎಂದು

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಭಾರತೀಯ ಕಿಸಾನ ಸಂಘದ ಬೆಂಬಲ

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಭಾರತೀಯ ಕಿಸಾನ ಸಂಘದ ಬೆಂಬಲ

ಬೀಳಗಿ: ಗ್ರಾಮ ಆಡಳಿತಾಧಿಕಾರಿಗಳು ಮೂರು ದಿನಗಳಿಂದ ರಾಜ್ಯಾದಂತ ತಮ್ಮ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಮಂಡಿಸುತ್ತಿದ್ದಾರೆ. ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಸೀತಾರಾಮನ್. ಕಿಸಾನ್ ಕ್ರೆಡಿಟ್ ಕಾರ್ಯ ಸಾಲದ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಳ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್? ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಭಾರತ ಸರ್ಕಾರವು ರೈತರಿಗೆ ಕೃಷಿ ಮತ್ತು

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ ತಿಂಗಳು ₹2000 ಹಣವನ್ನು ಪಡೆಯುತ್ತಿರುವ ಮಹಿಳೆಯರಿಗೆ ಈಗ ಒಂದು ಸಿಹಿ ಸುದ್ದಿ ಇದೆ. Join Our Telegram: https://t.me/dcgkannada ಗೃಹಲಕ್ಷ್ಮಿ ಯೋಜನೆ ಏನು? (Gruhalakshmi Yojane) ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸದೃಢತೆಗೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಕೈನ ಐದು ಗ್ಯಾರಂಟಿಗಳ ಪೈಕಿ ಒಂದಾಗಿದೆ. ಪ್ರತಿ ಅರ್ಹ ಮಹಿಳೆಗೆ ₹2000: