ಕೊಪ್ಪಳ: ತುಂಗಭದ್ರಾ ಡ್ಯಾಂನ (Tungabhadra dam) 19ನೇ ಕ್ರಸ್ಟ್ ಗೇಟ್ ಕಟ್ಟಾಗಿರುವ ಕುರಿತು ಕೊಪ್ಪಳದ ಬಸಾಪುರ ಖಾಸಗಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ವಿರೋಧ ಪಕ್ಷ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.
ನಿಮಗೆ ಬೋರ್ಡ್ ಇದೆ ಎಂದು ಗೊತ್ತಾ? ಅದರ ಚೇರ್ ಮನ್ ಭಾರತ ಸರ್ಕಾರ ನೇಮಕ ಮಾಡುತ್ತೆ. ಅವರ ಮೇಲೆ ಆರೋಪ ಮಾಡೋಕೆ ಬಿಜೆಪಿಗೆ ಏನಾಗಿದೆ? ಭಾರತ ಸರ್ಕಾರವನ್ನು ಪ್ರಶ್ನೆ ಮಾಡಬೇಕು ಅಲ್ವಾ? ಎಂದು ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದರು.
Join Our Telegram: https://t.me/dcgkannada
ನಾನು ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಸಿಡಬ್ಲುಸಿ ಅವರು ಅಧಿಕಾರಿಗಳನ್ನು ನೇಮಕ ಮಾಡುತ್ತಾರೆ. ನಮ್ಮ ರಾಜ್ಯದ ಅಧಿಕಾರಿಗಳು, ತೆಲಂಗಾಣ, ಆಂಧ್ರದ ಅಧಿಕಾರಿಗಳು ಇರುತ್ತಾರೆ. ನೀವು ಕೇಳುವುದಕ್ಕೆಲ್ಲ ಉತ್ತರ ಕೊಡೊಕೆ ಆಗಲ್ಲ. ಬಿಜೆಪಿ ಅವರು ರಾಜಕೀಯ ಮಾಡ್ತಾರೆ. ಅದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ. ಗೇಟ್ ಕಟ್ ಆಗುವುದಕ್ಕೆ ಸರ್ಕಾರದ ಹೊಣಗೇಡಿತನ ಅಂದ್ರ ಹೇಗೆ? ಎಂದು ಮರುಪ್ರಶ್ನೆ ಮಾಡಿದರು.
ಯಾರು ಬೋರ್ಡ್ ನಿರ್ವಹಿಸುತ್ತಾರೆ ಎಂಬುದು ಮುಖ್ಯ. ಬಿಜೆಪಿ ಅವರು ಅದರ ಬಗ್ಗೆ ತಿಳಿದುಕೊಳ್ಳಲಿ. ಕ್ರಸ್ಟ್ ಗೇಟ್ ಕಟ್ ಆಗಿದೆ. ಅದರಿಂದ ನೀರು ಪೋಲ್ ಆಗಿದೆ. ಇನ್ನು ಸೆಪ್ಟೆಂಬರ್ ವರೆಗೂ ಮಳೆ ಇದೆ. ಮಳೆಯಿಂದ ಮತ್ತೆ ಜಲಾಶಯ ತುಂಬುತ್ತೆ ಎನ್ನುವ ಆಶಾಭಾವನೆ ಇರಲಿ ಎಂದರು.
ಇದನ್ನೂ ಓದಿ: Viral: ಭಾರತಕ್ಕೆ ಅವಮಾನ ತೋರಿದ ಆರೋಪ.. ಮಧ್ಯರಾತ್ರಿ ಕ್ಯಾಬ್ ನಿಂದ ಹೊರದಬ್ಬಿದ ಉಬರ್ ಚಾಲಕ (ವೈರಲ್ ವಿಡಿಯೋ ನೋಡಿ)
ರೈತರ ಹಿತದೃಷ್ಟಿಯಿಂದ ಗೇಟ್ ದುರಸ್ತಿ ಮುಖ್ಯ. ಮಳೆ ಬರುವುದಾಗಿ ಹವಮಾನ ಇಲಾಖೆ ಮನಸ್ಸೂಚನೆ ನೀಡಿದೆ. ಮತ್ತೆ ಮಳೆಯಿಂದ ಜಲಾಶಯ ಭರ್ತಿಯಾಗುತ್ತೆ. ನಾನು ಯಾರು ಮೇಲೂ ಗೂಬೆ ಕೂರಿಸುವುದಿಲ್ಲ ಎಂದ ಸಿಎಂ ಸಿದ್ದರಾಮಯ್ಯ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದರು.