Muddebihal: Demand to provide infrastructure to Urdu school

Muddebihal: ಉರ್ದು ಶಾಲೆಗೆ ಮೂಲಸೌರ‍್ಯ ಒದಗಿಸಲು ಆಗ್ರಹ

Muddebihal: ಉರ್ದು ಶಾಲೆಗೆ ಮೂಲಸೌರ‍್ಯ ಒದಗಿಸಲು ಆಗ್ರಹ

ಮುದ್ದೇಬಿಹಾಳ : ಪಟ್ಟಣದ ಸರಕಾರಿ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದು ಹೆಚ್ಚುವರಿ ಕೊಠಡಿಗಳನ್ನು ತ್ವರಿತವಾಗಿ ನಿರ್ಮಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್, ಬಿಇಒ ಹಾಗೂ Muddebihal ಪುರಸಭೆಗೆ ಎಸ್ಡಿಎಂಸಿ ಪದಾಧಿಕಾರಿಗಳು ಶುಕ್ರವಾರ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದರಫೀಕ ನಾಗರಾಳ ಮಾತನಾಡಿ, ಒಟ್ಟು 380 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಉರ್ದು ಮತ್ತು ಇಂಗ್ಲಿಷ್ ವಿಭಾಗಗಳು ಇದ್ದು ಉರ್ದು ಮಾಧ್ಯಮದ 8 ತರಗತಿಗಳು ಮತ್ತು ಇಂಗ್ಲಿಷ್ ಮಾಧ್ಯಮದ 4 ತರಗತಿಗಳು ನಡೆಯುತ್ತಿವೆ.ಜೊತೆಗೆ ಎಸ್‌ಡಿಎಮ್‌ಸಿ ಸಹಾಯದಿಂದ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ನಡೆಯುತ್ತಿವೆ. ಮಕ್ಕಳಿಗೆ ಪಾಠ ಬೋಧನೆ ಮಾಡಲು ಒಟ್ಟು 13 ಕೊಠಡಿಗಳ ಅವಶ್ಯಕತೆ ಇದೆ. ಆದರೆ ಇರುವ ಕೊಠಡಿಗಳಲ್ಲಿ ನಾಲ್ಕು ಕೊಠಡಿಗಳು ಶಿಥಿಲಗೊಂಡಿವೆ ಎಂದು ತಿಳಿಸಿದರು.

ಎಲ್ಲಾ ತರಗತಿಗಳನ್ನು ನಡೆಸಲು ತೊಂದರೆಯಾಗುತ್ತಿದೆ. ಜೊತೆಗೆ ಬಿಸಿಯೂಟಿ ಕೊಠಡಿಯು ಸಹ ಶಿಥಿಲವಾಗಿದ್ದು, ಮಕ್ಕಳ ಆಹಾರ ತಯಾರಿಕೆ ಮಾಡಲು ತೊಂದರೆಯಾಗುತ್ತಿದೆ. ಈ ವ್ಯವಸ್ಥೆ ಪಾಲಕರು ತಮ್ಮ ಮಕ್ಕಳ ಟಿಸಿ ತೆಗೆದುಕೊಂಡು ಹೋಗಲು ಕಾರಣವಾಗುತ್ತಿದೆ. ಹೊಸದಾಗಿ ಐದು ಕೊಠಡಿಗಳನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.

ಈ ಬೇಡಿಕೆಗೆ ಸ್ಪಂದಿಸದಿದ್ದರೆ ಶಾಲೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಶೀರಸ್ತೇದಾರ ಎಂ.ಎಸ್.ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಎಸ್‌ಡಿಎಂಸಿ ಸದಸ್ಯರಾದ ನಜೀರಅಹ್ಮದ್ ಮಮದಾಪುರ, ಲಾಡ್ಲೆಮಶ್ಯಾಕ ನದಾಫ, ರಿಯಾಜ್ ದೇಸಾಯಿ, ಅಬ್ದುಲ್‌ರಜಾಕ ಇಲಕಲ್, ಇರ್ಫಾನ್ ದೇಸಾಯಿ, ಮಹ್ಮದಹುಸೇನ ಪಠಾಣ, ಸುಲೇಮಾನ ನಾಯ್ಯೋಡಿ, ಉಮರ್‌ಫಾರೂಕ ಕೂಡಗಿ, ದಾವಲ್ ಗೊಳಸಂಗಿ, ಸಮಿಉಲ್ಲಾ ಹುಣಚಗಿ, ಸದ್ದಾಂ ನದಾಫ್, ಝುಬೈರ ಸಾತಿಹಾಳ್, ಝುಬೈರ ಮುದಗಲ್, ಸಯೀದ್ ಹುಣಚಗಿ ಇದ್ದರು.

ಇದನ್ನೂ ಓದಿ: Crime News: ಗ್ರಾಪಂ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಉಪಾಧ್ಯಕ್ಷೆ!

Latest News

ನಾನು ಸಿದ್ಧರಾಮಯ್ಯ ಏಜೆಂಟ್ ಅಲ್ಲ-ಯತ್ನಾಳ ಖಡಕ್ ಮಾತು

ನಾನು ಸಿದ್ಧರಾಮಯ್ಯ ಏಜೆಂಟ್ ಅಲ್ಲ-ಯತ್ನಾಳ ಖಡಕ್ ಮಾತು

ವಿಜಯಪುರ : ನಾನು ಯೋಗ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಹಾಗೆಂದು ನಾನು ಸಿದ್ಧರಾಮಯ್ಯ ಏಜೆಂಟ್ ಅಲ್ಲ,ಹಿಂದೆ ಸಿದ್ಧರಾಮಯ್ಯ

ವಿಜಯಪುರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ನಾಮಕರಣ ಮಾಡಿದ ಸಿಎಂ ಸಿದ್ದರಾಮಯ್ಯ

ವಿಜಯಪುರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ನಾಮಕರಣ ಮಾಡಿದ ಸಿಎಂ ಸಿದ್ದರಾಮಯ್ಯ

82 ಕೋಟಿ ರೂ.ವೆಚ್ಚದ ಕಾಮಗಾರಿ ಉದ್ಘಾಟನೆ,731 ಕೋಟಿ ಕೆಲಸಗಳಿಗೆ ಶಂಕುಸ್ಥಾಪನೆ ವಿಜಯಪುರ : ಜಿಲ್ಲೆಯ

ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ವೈದ್ಯರ ಸೂಚನೆ : ಉಲ್ಬಣಗೊಂಡ ನೆಗಡಿ,ಕೆಮ್ಮು,ಜ್ವರ : ದಿನಕ್ಕೆ 600 ಜನರ ತಪಾಸಣೆ

ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ವೈದ್ಯರ ಸೂಚನೆ : ಉಲ್ಬಣಗೊಂಡ ನೆಗಡಿ,ಕೆಮ್ಮು,ಜ್ವರ : ದಿನಕ್ಕೆ 600 ಜನರ ತಪಾಸಣೆ

ಮುದ್ದೇಬಿಹಾಳ : ಹೆಚ್ಚುತ್ತಿರುವ ಶೀತಗಾಳಿ,ಜ್ವರದಿಂದ ಮಕ್ಕಳು,ವೃದ್ಧರು,ಮಹಿಳೆಯರಲ್ಲಿ ನೆಗಡಿ,ಕೆಮ್ಮು,ಜ್ವರ ಉಲ್ಬಣಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಲು

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಮುಖ್ಯಮಂತ್ರಿ,  ಉಪ ಮುಖ್ಯಮಂತ್ರಿಗಳಿಂದ ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ವಿಜಯಪುರ : ಬಸ್ ನಿಲ್ದಾಣದ

ಸಾರ್ವಜನಿಕರು,ವ್ಯಾಪಾರಿಗಳಿಗೆ ನಿತ್ಯ ಕಿರಿಕಿರಿ; ಮಂಗಗಳ ಹಾವಳಿಗೆ ಜನ ಹೈರಾಣು..!

ನಾಲತವಾಡ : ಪಟ್ಟಣದ ಹೃದಯಭಾಗವಾಗಿರುವ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಆಲದ ಮರದಲ್ಲಿ ಬಿಡಾರ ಹೂಡಿರುವ ಮಂಗಗಳಿOದ ನಿತ್ಯವೂ ಸಾರ್ವಜನಿಕರು,ವ್ಯಾಪಾರಿಗಳು ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಸೋಮವಾರ ಪಟ್ಟಣದಲ್ಲಿ ಸಂತೆ ನಡೆಯುತ್ತಿದ್ದು ಆಲದ ಮರದ ಸುತ್ತಮುತ್ತಲೂ ವೃದ್ಧರು,ಮಹಿಳೆಯರು ವ್ಯಾಪಾರಕ್ಕೆಂದು ಕಾಯಿಪಲ್ಯೆ,ಮಸಾಲೆ ಪದಾರ್ಥಗಳನ್ನು ಮಾರಾಟಕ್ಕೆ ಬರುವವರ ಮೇಲೆ ಈ ಮಂಗಗಳು ದಾಳಿ ಮಾಡುತ್ತಿವೆ. ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಐದಾರು ಜನರ ಮೇಲೆ ದಾಳಿ ಮಾಡಿ ಕಚ್ಚಿಗಾಯಗೊಳಿಸಿದ ಘಟನೆಗಳು ನಡೆದಿವೆ.ಸ್ವೀಟ್ ಮಾರ್ಟ್ ಅಂಗಡಿಯವರOತೂ

ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ.

ತಾಳಿಕೋಟಿ: ಸಮಾಜ ಸೇವೆಯ ಹೆಸರಿನಲ್ಲಿ ಕೇವಲ ತಮ್ಮ ಸ್ವಾರ್ಥವನ್ನೇ ಈಡೇರಿಸಿಕೊಳ್ಳುವ ಇಂದಿನ ದಿನಮಾನದಲ್ಲಿ ತಾನು ಜನಿಸಿದ ಗ್ರಾಮ ಅಭಿವೃದ್ಧಿಯಾಗಬೇಕು ಎಂಬ ಕಳಕಳಿಯಿಂದ ರೂ.25 ಲಕ್ಷ ಸ್ವಂತ ಹಣದಲ್ಲಿ ಸಿಸಿ ರಸ್ತೆ ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಪ್ರಭು ಭೈರಿಯವರು ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಮುಖಂಡ ಅಶೋಕ ಭೋವಿ ಹೇಳಿದರು. ತಾಲೂಕಿನ ಕಲಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂತೆ ಮಾರಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ಆವರಣದಲ್ಲಿ