ಮುದ್ದೇಬಿಹಾಳ : ವಿದ್ಯಾರ್ಥಿಗಳು ಆಟಗಳನ್ನು ಹವ್ಯಾಸವಾಗಿ ಸ್ವೀಕರಿಸಿ ಆಡಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜಿನಲ್ಲಿ ಈಚೇಗೆ ಸನ್ 2024-25 ಸಾಲಿನ ಮುದ್ದೇಬಿಹಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಗಳ ಗುಂಪು ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಪಿಎಂಸಿ ಸದಸ್ಯರಾದ ವಾಯ್. ಎಚ್. ವಿಜಯಕರ್,ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜಿನ ಅಧ್ಯಕ್ಷ ಎಸ್.ಎಂ.ನೆರಬೆಂಚಿ ಮಾತನಾಡಿ, ಕ್ರೀಡಾಪಟುಗಳು ಸ್ಪರ್ಧಾಮನೋಭಾವದಿಂದ ಆಟಗಳನ್ನು ಆಡಬೇಕೆಂದರು.
ಕ್ರೀಡಾ ಧ್ವಜವನ್ನು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಬಿ.ಕೆ.ಬಿರಾದಾರ ಸ್ವೀಕರಿಸಿದರು. ದೈಹಿಕ ಉಪನ್ಯಾಸಕ ಯು.ಸಿ. ಕೋನರೆಡ್ಡಿ ಕ್ರೀಡಾಧ್ವಜಾರೋಹಣ ನಡೆಸಿಕೊಟ್ಟರು. ದೈಹಿಕ ಉಪನ್ಯಾಸಕರಾದ ಬಿ. ಟಿ ಭಜಂತ್ರಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ಪಿಯು ಕಾಲೇಜ ಪ್ರಾಂಶುಪಾಲ ಎಸ್.ಎಸ್.ಅಂಗಡಿ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ, ಎಸ್.ಡಿ.ಆರ್ ಸಂಸ್ಥೆಯ ಅಧ್ಯಕ್ಷ ವೆಂಕನಗೌಡ ಪಾಟೀಲ, ಸೇವಾಲಾಲ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಎನ್. ನಾಯಕ,ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ನಾಯಕ, ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಆರ್.ಬಿ.ರೂಡಗಿ ಇದ್ದರು.
ಎಂಜಿಎಂಕೆ ಪ್ರಾಂಶುಪಾಲ ಎಸ್.ಕೆ. ಹರನಾಳರವರು ಸ್ವಾಗತ ಭಾಷಣ ಮಾಡಿದರು. ಉಪನ್ಯಾಸಕ ಬಿ.ಆರ್ ಬೆಳ್ಳಿಕಟ್ಟಿ ನಿರೂಪಿಸಿದರು.
ಕ್ರೀಡಾಕೂಟಗಳ ಫಲಿತಾಂಶ ಇಂತಿದೆ:
ಬಾಲಕರ ವಿಭಾಗದಲ್ಲಿ ಖೋ ಖೋ: ಪ್ರಥಮ-ಎಂಜಿವಿಸಿ ಪಿಯು ಕಾಲೇಜ, ಮುದ್ದೇಬಿಹಾಳ, ದ್ವಿತೀಯ-ಎಸ್.ಎಸ್. ಪಿಯು ಕಾಲೇಜ ಮುದ್ದೇಬಿಹಾಳ, ಕಬಡ್ಡಿ: ಪ್ರಥಮ-ಎಸ್.ಎಸ್.ಪಿಯು ಕಾಲೇಜ ಮುದ್ದೇಬಿಹಾಳ, ದ್ವಿತೀಯ- ಸರ್ಕಾರಿ ಪಿಯು ಕಾಲೇಜ ರಕ್ಕಸಗಿ, ವ್ಹಾಲಿಬಾಲ್: ಪ್ರಥಮ-ಎಸ್.ಎಸ್. ಪಿಯು ಕಾಲೇಜ ಮುದ್ದೇಬಿಹಾಳ, ದ್ವಿತೀಯ-ಎಕ್ಷಫರ್ಟ್ ಪಿಯು ಕಾಲೇಜ, ನಾಗರಬೆಟ್ಟ, ಬಾಲಕಿಯರ ವಿಭಾಗದಲ್ಲಿ ಖೋ ಖೋ ಪ್ರಥಮ: ಎಂಜಿವಿಸಿ ಪಿಯು ಕಾಲೇಜ, ಮುದ್ದೇಬಿಹಾಳ, ದ್ವಿತೀಯ: ಶ್ರೀ ವಿರೇಶ್ವರ ಪಿಯು ಕಾಲೇಜ, ನಾಲತವಾಡ, ಕಬಡ್ಡಿ: ಪ್ರಥಮ- ಎಸ್.ಎಸ್. ಪಿಯು ಕಾಲೇಜ ಮುದ್ದೇಬಿಹಾಳ, ದ್ವಿತೀಯ: ಸರ್ಕಾರಿ ಪಿಯು ಕಾಲೇಜ, ಮುದ್ದೇಬಿಹಾಳ, ವ್ಹಾಲಿಬಾಲ್: ಪ್ರಥಮ- ಎಸ್.ಎಸ್. ಪಿಯು ಕಾಲೇಜ ಮುದ್ದೇಬಿಹಾಳ, ದ್ವಿತೀಯ- ಸರ್ಕಾರಿ ಪಿಯು ಕಾಲೇಜ, ಬಸರಕೊಡ.