ಮುದ್ದೇಬಿಹಾಳ : ತಾಲ್ಲೂಕು ಮಟ್ಟದ ಸನ್ 2024-25 ಸಾಲಿನ ಮುದ್ದೇಬಿಹಾಳ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಸೆ.20 ರಂದು ಬೆಳಗ್ಗೆ 8.30ಕ್ಕೆ ತಾಳಿಕೋಟಿ ಸಮೀಪದ ಮೈಲೇಶ್ವರ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ದಿವ್ಯ ಸಾನಿಧ್ಯ ವಹಿಸುವರು. ಸಚಿವ ಎಂ.ಬಿ.ಪಾಟೀಲ್ ಉದ್ಘಾಟಿಸುವರು. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಧ್ಯಕ್ಷತೆ ವಹಿಸುವರು.ಕ್ರೀಡಾಜ್ಯೋತಿಯನ್ನು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್ ಸ್ವೀಕರಿಸುವರು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಪ್ಯಾಲಿಸ್ಟೈನ್ ಧ್ವಜ ಹಾರಾಟ, ಪ್ರಕರಣ ದಾಖಲು: ಎಸ್ಪಿ ಅಮರನಾಥ ರೆಡ್ಡಿ (ವಿಡಿಯೋ ನೋಡಿ)
ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು, ಮುದ್ದೇಬಿಹಾಳ, ತಾಳಿಕೋಟಿ ತಾಲ್ಲೂಕು ತಹಶೀಲ್ದಾರರು, ಶಿಕ್ಷಕರ ಸಂಘಟನೆಯ ವಿವಿಧ ಪದಾಧಿಕಾರಿಗಳು ಆಗಮಿಸುವರು ಎಂದು ಬಿಇಒ ಬಿ.ಎಸ್.ಸಾವಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.