ಬೆಂಗಳೂರು: ಓಡಾಡುವ ರಸ್ತೆಯಲ್ಲಿ ಗುಟ್ಕಾ ಉಗಿಯುವುದು ಮತ್ತು ಕಸ ಎಸೆಯುವ ಕ್ಷುಲ್ಲಕ ವಿಷಯಕ್ಕೆ ವೃದ್ಧನನ್ನೇ ಯುವಕನೊಬ್ಬ ಕೊಂದ (Murder case) ಘಟನೆ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
70 ವರ್ಷದ ಸಿದ್ದಪ್ಪ ಹತ್ಯೆಯಾದ (Murder case) ವೃದ್ಧ ಎಂದು ಗುರುತಿಸಲಾಗಿದೆ.
Join Our Telegram: https://t.me/dcgkannada
ಶುಕ್ರವಾರ ಬೆಳಗ್ಗೆ ಆರೋಪಿ ತುಮಕೂರು ಜಿಲ್ಲೆಯ ಶಿರಾದ ಪುನೀತ್ (24), ಕಸ ತುಂಬಿದ ಕವರ್ ಎಸೆದು, ರಸ್ತೆಯಲ್ಲೇ ಗುಟ್ಕಾ ಉಗಿದು ಹೋಗುತ್ತಿದ್ದ. ಈ ವೇಳೆ ಹಿಂದೆ ಬರುತ್ತಿದ್ದ ಸಿದ್ದಪ್ಪ ಯುವಕನಿಗೆ ಬೈದಿದ್ದಾನೆ. ಇಷ್ಟಕ್ಕೆ ಕುಪಿತಗೊಂಡ ಯುವಕ, ಸಮೀಪದ ಮನೆಯಿಂದ ಮಚ್ಚು ತಂದು ವೃದ್ದನ ಕುತ್ತಿಗೆಯನ್ನು ಕಡಿದು ಬರ್ಬರವಾಗಿ ಹತ್ಯೆಗೈದಿದ್ದಾನೆ.(Murder case)
ಬಳಿಕ ಮನೆಗೆ ತೆರಳಿ ತಾಯಿಯ ಜತೆ ಚಿಕ್ಕಬಿದರಕಲ್ಲಿನಲ್ಲಿರುವ ಅಣ್ಣನ ಮನೆಯಲ್ಲಿ ತಲೆಮರೆಸಿಕೊಳ್ಳುವ ವೇಳೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Heart attack; ಹೃದಯಾಘಾತ: ಉಷಾರಾಣಿ ಆನೆ ನಿಧನ
ಇನ್ನು ಮೃತ ವೃದ್ದ ಸಿದ್ದಪ್ಪ ಕಳೆದ 10 ವರ್ಷಗಳ ಹಿಂದೆ ಪ್ರತಿಷ್ಠಿತ ಹಿಮಾಲಯ ಡ್ರಗ್ಸ್ ಕಂಪನಿಯಿಂದ ನಿವೃತ್ತಿ ಹೊಂದಿದ್ದರು. ಬಳಿಕ ತಮ್ಮ ಬಳಿಯಿದ್ದ ಸುಮಾರು 10ರಿಂದ 15 ಮನೆಯನ್ನು ಬಾಡಿಗೆ ಕೊಟ್ಟು, ನಿವೃತ್ತಿ ಜೀವನ ಸಾಗಿಸುತ್ತಿದ್ದರು.
ಸ್ವಚ್ಛತೆ ವಿಷಯದಲ್ಲಿ ಬಾಡಿಗೆ ಮನೆಯವರ ಜತೆ ಸಣ್ಣಪುಟ್ಟ ಗಲಾಟೆ ಬಿಟ್ಟರೆ ಬೇರೆ ಯಾವುದೇ ತಕರಾರು ಇರಲಿಲ್ಲ. ಈ ಕುರಿತು ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.