ಮುದ್ದೇಬಿಹಾಳ: ಪುರಸಭೆ ಚುನಾವಣೆಯಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಬಡವರ ಜೀವನವನ್ನು ಮತ್ತಷ್ಟು ಸುಧಾರಿಸಲು ಬೆಂಬಲ ನೀಡುವೆ. ಪುರಸಭೆಯ ಸಭೆಗಳಲ್ಲಿ ಭಾಗಿಯಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುವುದು. ಈ ಜಯ ಕಾಂಗ್ರೆಸ್ ಪಕ್ಷಕ್ಕೆ,ಎಲ್ಲ ಸದಸ್ಯರಿಗೆ ಸಂದಿರುವ ಜಯ ಆಗಿದೆ ಎಂದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ: https://t.me/dcgkannada
ಮಾಜಿ ಶಾಸಕ ಎ.ಎಸ್.ಪಾಟೀಲ್ ಅವರ ಆರೋಪಕ್ಕೆ ಪರೋಕ್ಷವಾಗಿ ಉತ್ತರ ನೀಡಿದ ಶಾಸಕ ನಾಡಗೌಡರು,ನಾವು ವದಂತಿಗಳನ್ನು ಹಬ್ಬಿಸುವುದಿಲ್ಲ.ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮಾಡಿ ತೋರಿಸುವುದು, ಬರೀ ಮಾತನಾಡುವುದಲ್ಲ. ನಾನು ಯಾರ ಚಾರಿತ್ರ್ಯವನ್ನು ತೇಜೋವಧೆ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಹಾಗೆ ಮಾಡುವವರು ಇನ್ನು ಮೇಲಾದರೂ ಅದನ್ನು ಮಾಡುವುದನ್ನು ನಿಲ್ಲಿಸಬೇಕು. ನನ್ನ ಪ್ರಾಮಾಣಿಕತೆ ಎಂದಿಗೂ ಮುಂದುವರೆಯುತ್ತದೆ. ಎಂದಿಗೂ ಅಕ್ರಮಗಳಿಗೆ ಒಪ್ಪಿಗೆ ಕೊಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Muddebihal: ಕಾಂಗ್ರೆಸ್ಸಿಗರಿಗೇ ಪುರಸಭೆ ಪಟ್ಟ.. ಮಹೆಬೂಬ ಗೊಳಸಂಗಿ ಅಧ್ಯಕ್ಷ, ಪ್ರೀತಿ ದೇಗಿನಾಳ ಉಪಾಧ್ಯಕ್ಷೆ
ಒನ್ ನೇಶನ್, ಒನ್ ಎಲೆಕ್ಷನ್ ಎಂಬ ಆದೇಶ ತರುವ ಕುರಿತು ಕೇಂದ್ರ ಸರ್ಕಾರ ಚಿಂತಿಸುತ್ತಿದ್ದು ಹಾಗೊಂದು ವೇಳೆ ಕಾಯ್ದೆ ಜಾರಿ ಬಂದಲ್ಲಿ ಇನ್ನೂ ನಾಲ್ಕುವರೆ ವರ್ಷ ಶಾಸಕನಾಗಿ ಅಧಿಕಾರದಲ್ಲಿ ಮುಂದುವರೆಯುವೆ. ಸಮಬಾಳು, ಸಮಪಾಲು ತತ್ವವನ್ನು ಪಾಲನೆ ಮಾಡಲಾಗುತ್ತದೆ. ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ನಮ್ಮ ಪಕ್ಷದ,ವರಿಷ್ಠರ ಮಟ್ಟದಲ್ಲಿ ಆಗಿದೆ. ಅದನ್ನು ಬಹಿರಂಗಗೊಳಿಸುವುದಿಲ್ಲ ಎಂದು ಶಾಸಕರು ತಿಳಿಸಿದರು.
Muddebihal: ಕಾಂಗ್ರೆಸ್ಸಿಗರಿಗೇ ಪುರಸಭೆ ಪಟ್ಟ:
— dcgkannada (@dcgkannada) September 11, 2024
ಮಹೆಬೂಬ ಗೊಳಸಂಗಿ ಅಧ್ಯಕ್ಷ, ಪ್ರೀತಿ ದೇಗಿನಾಳ ಉಪಾಧ್ಯಕ್ಷೆ pic.twitter.com/sE6PLpSTTz