ಮೈಲೇಶ್ವರದ ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿನಿಗೆ ಪ್ರಶಸ್ತಿ; ಶಿಕ್ಷಣವನ್ನು ಯಾವತ್ತೂ ಹಣದಿಂದ ಅಳೆಯಬೇಡಿ-ಬಸಯ್ಯ ಮಠ

ಮೈಲೇಶ್ವರದ ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿನಿಗೆ ಪ್ರಶಸ್ತಿ; ಶಿಕ್ಷಣವನ್ನು ಯಾವತ್ತೂ ಹಣದಿಂದ ಅಳೆಯಬೇಡಿ-ಬಸಯ್ಯ ಮಠ

ಮುದ್ದೇಬಿಹಾಳ : ಹೆತ್ತ ತಂದೆ ತಾಯಿಗೆ, ಬೆಳೆಸಿದ ಗುರುವಿಗೆ ಹೆಸರು ತರುವುದು ಅವರ ಉಸಿರು ತಗೆಯುವುದು ವಿದ್ಯಾರ್ಥಿಗಳಾದ ನಿಮ್ಮ ಕೈಯ್ಯಲ್ಲಿದೆ.ವಿದ್ಯೆ ಶಿಖರವೇರಿ ಗರ್ವದ ಮೇಲೆ ಕೂರಬಾರದು.ಹಣದಿಂದ ಯಾವುತ್ತೂ ಶಿಕ್ಷಣವನ್ನು ಅಳೆಯಬಾರದು ಎಂದು ಕಕ್ಕೇರಾ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಬಸಯ್ಯ ಮಠ ಹೇಳಿದರು.

ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೀದರನ ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಮೂರು ಸಾವಿರ ವಿದ್ಯಾರ್ಥಿಗಳಲ್ಲಿ 1500 ಜನ ಲಾಂಗ್‌ಟರ್ಮ್ ಇರುವ ವಿದ್ಯಾರ್ಥಿಗಳಲ್ಲಿ 50-100 ಜನ ಸಾಧನೆ ಮಾಡಿದ್ದನ್ನೆ ನಮ್ಮ ಭಾಗದ ಜನ ಆ ಸಂಸ್ಥೆಯ ಬಗ್ಗೆ ಹೆಚ್ಚು ಮಾತನಾಡುತ್ತಾರೆ.ಆದರೆ ಪ್ರತಿಭಾನ್ವಿತ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡದಿದ್ದರೆ ಮುಂದೆ ಅನುಭವಿಸುವುದು ನಾವೆ.ವಾಣಿಜ್ಯ ಕೇಂದ್ರಗಳಾಗಿರುವ ಶಾಲೆಗಳು ಬಹಳಷ್ಟು ಡೊನೇಶನ್ ಹಾವಳಿಯಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಗಗನ ಕುಸುಮವಾಗಿದೆ.ಆದರೆ ದುಡ್ಡು ಶಿಕ್ಷಣಕ್ಕೆ ಯಾವುತ್ತು ಸಮನವಾಗಿರುವುದಿಲ್ಲ.ನಾಗರಬೆಟ್ಟದ ಬಿ.ಜಿ.ಮಠ ಅವರು ಹೃದಯವಂತರು.ಇದು ವಿದ್ಯಾ ಸಂಸ್ಥೆ ಮಕ್ಕಳನ್ನು ಪಾಲಕರ ಸಮಾನವಾಗಿ ಕಾಣುವ ಜೊತೆಗೆ ಅರಿವು,ಸಂಸ್ಕೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ ಮಾತನಾಡಿ, ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರೀಕ್ಷೆಗಾಗಿ ಈ ಪರೀಕ್ಷೆಗಳನ್ನು ಆಯೋಜಿಸಿದ್ದೇವೆ.ನೀವು ಕೊಟ್ಟ ದುಡ್ಡಲ್ಲಿ ನಾವು ಸಂಸ್ಥೆಯನ್ನು ನಡೆಸಬೇಕು.ಲಾಂಗ್‌ಟರ್ಮ್ನಲ್ಲಿ ಪ್ರತಿ ವರ್ಷ 40 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದೇವೆ.ನಮ್ಮಿಂದ ಸಾಧ್ಯವಾಷ್ಟು ಮಟ್ಟಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ತಾಲ್ಲೂಕು ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಚಿತ್ತರಗಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಕ್ಕಳು ಗೊಂದಲಕ್ಕೆ ಒಳಗಾಗದೇ ಪ್ರಶ್ನೆಪತ್ರಿಕೆ,ಓಎಂಆರ್ ಶೀಟ್‌ಗಳನ್ನು ಸ್ಪಷ್ಟವಾಗಿ,ಖಚಿತವಾಗಿ ತುಂಬುವ ಕಲೆಯನ್ನು ಅರಿತುಕೊಳ್ಳಬೇಕು.ಕೆಲವು ಸಣ್ಣ ಸಣ್ಣ ತಪ್ಪುಗಳು ದೊಡ್ಡ ಸಾಧನೆಗೆ ಅಡ್ಡಗಾಲು ಆಗುತ್ತವೆ.ಇಂತಹದರ ಬಗ್ಗೆ ಪಾಲಕರು,ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಕನ್ನೊಳ್ಳಿ ಜಿ.ಎಚ್.ಎಸ್ ಶಾಲೆಯ ಮುಖ್ಯಗುರು ಬಸಯ್ಯ ಪುರವಂತಮಠ,ಬಸರಕೋಡ ಸಿಆರ್‌ಪಿ ಅಮರೀಶ ಕಸಬೇಗೌಡರ,ವೀರೇಶ ನವಲಿ,ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ವಲ್ ಮಠ, ಪ್ರಾಚಾರ್ಯ ಇರ್ಫಾನ್ ಬಾಗವಾನ,ಮಾರ್ಗದರ್ಶಕ ಎಲ್.ಎಚ್.ನದಾಫ ಹಾಗೂ ಶಿಕ್ಷಕರು ಇದ್ದರು. ಪ್ರಾಸ್ತಾವಿಕವಾಗಿ ಶಿಕ್ಷಕ ರಾಜು ಮೋಟಗಿ ಮಾತನಾಡಿದರು.ಹೀರೂ ನಾಯಕ ಸ್ವಾಗತಿಸಿದರು.ಶಿವಯ್ಯ ಮಠ ಹಾಗೂ ಮಲ್ಲಿಕಾರ್ಜುನ ಕಂಬಳಿ ನಿರೂಪಿಸಿದರು.ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಗೆ ವಿವಿಧ ಭಾಗಗಳಿಂದ ಆಗಮಿಸಿದ್ದ 1100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್ ಫಲಿತಾಂಶ :
ಬ್ರಿಲಿಯಂಟ್ ಮೈಲೇಶ್ವರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಗಂಗಮ್ಮ ಎ.ಕೋಳೂರು ಪ್ರಥಮ,ವಿಜಯಪುರದ ಶಾಂತಿನಿಕೇತನ ಶಾಲೆಯ ಅದಿತಿ ರಾಜಮಾನ್ಯ ದ್ವಿತೀಯ,ಬಿದರಕುಂದಿ ಆರ್.ಎಂ.ಎಸ್.ಎ ಶಾಲೆಯ ಸುಪ್ರಿತ್ ಎಸ್. ಪಾಟೀಲ ತೃತೀಯ,ವಿಜಯಪುರ ಎಕ್ಸಲಂಟ್ ಶಾಲೆಯ ಅಪೂರ್ವ ಎಸ್.ಮೂಲಿಮನಿ ನಾಲ್ಕನೇ ಹಾಗೂ ಆಲಮಟ್ಟಿ ಪಿಎಮ್ ಶ್ರೀ ಜೆ.ಎನ್.ವಿ ಶಾಲೆಯ ಕಾರ್ತಿಕ ಜಲಪೂರ ಐದನೇ ಸ್ಥಾನ ಪಡೆದುಕೊಂಡರು.

Latest News

ಉಪನ್ಯಾಸಕಿ ಗುರುದೇವಿ ಹಳ್ಳೂರರಿಗೆ ಪಿ.ಎಚ್.ಡಿ ಪ್ರದಾನ

ಉಪನ್ಯಾಸಕಿ ಗುರುದೇವಿ ಹಳ್ಳೂರರಿಗೆ ಪಿ.ಎಚ್.ಡಿ ಪ್ರದಾನ

ಮುದ್ದೇಬಿಹಾಳ : ಮುದ್ದೇಬಿಹಾಳ ಮೂಲದ ಉಪನ್ಯಾಸಕಿ ಗುರುದೇವಿ ಹಳ್ಳೂರ ಅವರು ಶಿಕ್ಷಣಶಾಸ್ತçದಲ್ಲಿ ವಿಜಯಪುರದ ಕರ್ನಾಟಕ

ಯಲಗೂರ ಗೋಶಾಲೆಗೆ ಐದು ಟ್ರಾಕ್ಟರ್ ಮೇವು ಕೊಡುಗೆ

ಯಲಗೂರ ಗೋಶಾಲೆಗೆ ಐದು ಟ್ರಾಕ್ಟರ್ ಮೇವು ಕೊಡುಗೆ

ಮುದ್ದೇಬಿಹಾಳ : ಈಚೆಗೆ ಮುದ್ದೇಬಿಹಾಳದಲ್ಲಿ ಜರುಗಿದ್ದ ಹಿಂದೂ ಮಹಾಸಮ್ಮೇಳನದಲ್ಲಿ ಜಮಾಖರ್ಚು ಆಗಿ ಉಳಿತಾಯದ ಹಣದಲ್ಲಿ

60 ಲಕ್ಷ ರೂ.ಶಿಷ್ಯವೇತನ ಗೆಲ್ಲುವ ಅವಕಾಶ..!                         ಏ.3 ರಂದು ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್-2026 ಪರೀಕ್ಷೆ

60 ಲಕ್ಷ ರೂ.ಶಿಷ್ಯವೇತನ ಗೆಲ್ಲುವ ಅವಕಾಶ..! ಏ.3 ರಂದು ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್-2026 ಪರೀಕ್ಷೆ

ಮುದ್ದೇಬಿಹಾಳ : ಉನ್ನತ ಶಿಕ್ಷಣ ದುಬಾರಿ ಎನ್ನುವ ಕಾಲಘಟ್ಟದಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದ

ಸರಳತೆಯ ಸೇವೆಯಿಂದಲೇ ಜನಮನ್ನಣೆ-ಪ್ರಭುಗೌಡ ದೇಸಾಯಿ

ಸರಳತೆಯ ಸೇವೆಯಿಂದಲೇ ಜನಮನ್ನಣೆ-ಪ್ರಭುಗೌಡ ದೇಸಾಯಿ

ಮುದ್ದೇಬಿಹಾಳ : ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಸರಳತೆಯು ಅವರನ್ನು ಬಹುದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತದೆ.ಸೇವೆಯಲ್ಲಿ ಪ್ರಾಮಾಣಿಕತೆ,ದಕ್ಷತೆಯಿಂದ

ಢವಳಗಿಯಲ್ಲಿ ಮಾ. 29ರಂದು ವಿದ್ಯಾಸ್ಪೂರ್ತಿ ಟಾಲೆಂಟ್ ಅವಾರ್ಡ್ ಪರೀಕ್ಷೆ

ಢವಳಗಿಯಲ್ಲಿ ಮಾ. 29ರಂದು ವಿದ್ಯಾಸ್ಪೂರ್ತಿ ಟಾಲೆಂಟ್ ಅವಾರ್ಡ್ ಪರೀಕ್ಷೆ

ಮುದ್ದೇಬಿಹಾಳ : ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಹಾಗೂ ಅವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿದ್ಯಾಸ್ಪೂರ್ತಿ ಸಂಸ್ಥೆಯ ವತಿಯಿಂದ “ವಿದ್ಯಾಸ್ಪೂರ್ತಿ ಟಾಲೆಂಟ್ ಅವಾರ್ಡ್” ಪರೀಕ್ಷೆಯನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ. ಈ ಪರೀಕ್ಷೆ ಮಾರ್ಚ್ 29ರಂದು (ಭಾನುವಾರ) ಬೆಳಿಗ್ಗೆ 10:30 ಗಂಟೆಗೆ ನಡೆಯಲಿದ್ದು, 3ನೇ ಮತ್ತು 4ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ವ್ಯಕ್ತವಾಗಿದೆ. ಪರೀಕ್ಷೆಯು ವಿಜಯಪುರ ಜಿಲ್ಲೆಯ

ಉತ್ತಮ ಸೇವೆ ಒದಗಿಸುವುದೇ ನಮ್ಮ ಗುರಿ-ಡಾ.ರಂಗನಾಥ ವೈದ್ಯ

ಉತ್ತಮ ಸೇವೆ ಒದಗಿಸುವುದೇ ನಮ್ಮ ಗುರಿ-ಡಾ.ರಂಗನಾಥ ವೈದ್ಯ

ಮುದ್ದೇಬಿಹಾಳ : ಸಾರ್ವಜನಿಕರಿಗೆ ನಮ್ಮಿಂದ ಸಾಧ್ಯವಷ್ಟರ ಮಟ್ಟಿಗೆ ಉತ್ತಮ ಸೇವೆ ನೀಡಲು ಶ್ರಮಿಸುತ್ತೇವೆ.ಕೆಲವು ಸಂದರ್ಭಗಳಲ್ಲಿ ಜಿಲ್ಲಾ ಆಸ್ಪತ್ರೆಗೆ ಬರೆದುಕೊಡುವುದು ಅನಿವಾರ್ಯವಾಗುತ್ತದೆ.ಇಂತಹ ಸಮಯದಲ್ಲಿ ನಾಗರಿಕರು ಆರೋಗ್ಯ ಇಲಾಖೆ ವೈದ್ಯರು,ಸಿಬ್ಬಂದಿಯೊAದಿಗೆ ಸಂಯಮದಿAದ ನಡೆದುಕೊಳ್ಳಬೇಕು ಎಂದು ಪ್ರಸೂತಿ ತಜ್ಞ ಡಾ.ರಂಗನಾಥ ವೈದ್ಯ ಅಭಿಪ್ರಾಯಪಟ್ಟರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಆರೋಗ್ಯ ರಕ್ಷಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ಮೊದಲಿನಂತೆ ಈಗ ವೈದ್ಯಕೀಯ ಸೇವೆ ಅಷ್ಟೊಂದು