ಮುದ್ದೇಬಿಹಾಳ : ಸರ್ಕಾರಗಳು ಜಾರಿಗೊಳಿಸುವ ಜನಪರ ಯೋಜನೆಗಳ ಯಶಸ್ವಿಗೆ ಸಮಾಜದ ಸಹಕಾರ ಅತ್ಯಗತ್ಯ ಎಂದು ಹಡಲಗೇರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್. ಎಲ್. ಪಾಟೀಲ್ ಹೇಳಿದರು.
ತಾಲ್ಲೂಕು ಹಡಲಗೇರಿಯಲ್ಲಿ ಮಾದರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹಡಲಗೇರಿ ದತ್ತು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸೇವಾ ಗುಣ ಎನ್. ಎಸ್. ಎಸ್ ಬೆಳೆಸಲು ಸಹಕಾರಿಯಾಗಿದೆ ಎಂದರು. ಶಿಕ್ಷಕ ಎನ್. ಎಚ್. ನಾಯ್ಕೋಡಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಶಿಸ್ತು, ತಾಳ್ಮೆ, ಸಹಬಾಳ್ವೆ ಗುಣಗಳನ್ನು ಬೆಳೆಸುತ್ತದೆ ಎಂದರು.
ಪ್ರಮುಖರಾದ ಹನುಮಂತ ತಳವಾರ, ಮಂಜುಳಾ ಕಟಗೇರಿ, ರೇವಣಸಿದ್ದಪ್ಪ ಅಮ್ಮಣಿ, ಅನಿಲ್‌ಕುಮಾರ್ ಡಿಗ್ಗೆ, ಪ್ರೋ. ಲತಾಶ್ರೀ ಡಿಪಿ, ಪ್ರೋ. ರವಿ ಕಟ್ಟಿಮನಿ, ಚನ್ನಮ್ಮ ಚಿಲಮೂರ, ಶಿವಪ್ರಕಾಶ್ ಗೂಳಿ, ಸಿದ್ದು ಸತ್ಯಗೋಳ ಉಪಸ್ಥಿತರಿದ್ದರು.