
ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ದೇವಿ ಜಾತ್ರಾ ಮಹೋತ್ಸವ ಮಾ.21 ರಿಂದ 23 ರವರೆಗೆ ಹಮ್ಮಿಕೊಳ್ಳಲಾಗಿದ್ದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾ.21 ರಂದು ಬೆಳಗ್ಗೆ 6ಕ್ಕೆ ಮಂಗಲವಾದ್ಯ, ಘೋಷ, ಬೆಳಗ್ಗೆ 8 ರಿಂದ ಪ್ರಾರ್ಥನೆ, ಧ್ವಜಾರೋಹಣ, ತೋರಣ ಮಹೂರ್ತ, ಪುಣ್ಯವಾಚನ, ಶುದ್ಧಿ ಹವನ, ಕಂಕಣ ಬಂಧನ, ಪಾರ್ಶ್ವನಾಥ ತೀರ್ಥಂಕರರಿಗೆ ನವ ಕಳಸ ಅಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ ಪೂಜೆ ಹಾಗೂ ಆರತಿ ಸಂಜೆ 4ಕ್ಕೆ ನವಗ್ರಹ ವಿಧಾನ 108 ಪುಷ್ಪಾರ್ಚನೆ,108 ಕುಂಕುಮಾರ್ಚನೆ ರಾತ್ರಿ 8ಕ್ಕೆ ಮಂಗಳಾರತಿ ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಮಾ.22 ರಂದು ಧಾರ್ಮಿಕ ವಿಧಿವಿಧಾನಗಳು, ದೇವಸ್ಥಾನದ ರಥದ ಹಗ್ಗ, ಕಳಸ, ಪಲ್ಲಕ್ಕಿ ಮೆರವಣಿಗೆ, ಬಳಿಕ ರಥ ಶುದ್ಧಿ ಹವನ ಮದ್ಯಾಹ್ನ 12ಕ್ಕೆ ಚಡಾವು ಸವಾಲು ನಡೆಯಲಿದೆ. ಮದ್ಯಾಹ್ನ 2ಕ್ಕೆ ಧರ್ಮಸಭೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಪದ್ಮಾವತಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಅಭಿನಂದನ ಗೋಗಿ ವಹಿಸುವರು. ಶಾಸಕ ಸಿ. ಎಸ್. ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅನುದಾವ ಪ್ರಶಸ್ತಿ ಪುರಸ್ಕೃತರಾದ ಪದ್ಮರಾಜ ದಂಡಾವತಿ, ಹುಲಕೋಟಿ ಕೆ. ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಅಪ್ಪಣ್ಣ ಹಂಜಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಗೊಮ್ಮಟೇಶ್ವರ ಸಗರಿ, ಹಡಲಗೇರಿ ಗ್ರಾಪಂ ಅಧ್ಯಕ್ಷೆ ಲಕ್ಷಿಬಾಯಿ ಬಿರಾದಾರ ಆಗಮಿಸುವರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಗುತ್ತದೆ. ಮಾ. 13ರಂದು ಜಾತ್ರೆಯ ಸಮಾರೋಪ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.