ಮುದ್ದೇಬಿಹಾಳ : ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ನಿರ್ಮಾಣದ ಸಲುವಾಗಿ ಸರ್ವೆ ನಡೆಸಲು ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಯಾದಗಿರಿ ಸಂಸದ ಕುಮಾರ ನಾಯಕ ಭರವಸೆ ನೀಡಿದ್ದಾರೆ ಎಂದು ಆಲಮಟ್ಟಿ-ಮುದ್ದೇಬಿಹಾಳ-ಯಾದಗಿರಿ ಹೋರಾಟ ಸಮಿತಿಯ ಸದಸ್ಯ ಕಿರಣ ಪಾಟೀಲ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಮಂಗಳವಾರ ಸಂಸದರನ್ನು ಭೇಟಿಯಾಗಿ ಸನ್ಮಾನಿಸಿ ಅವರೊಂದಿಗೆ ರೈಲು ಮಾರ್ಗದ ಪ್ರಗತಿಯ ಮಾಹಿತಿ ಕುರಿತು ಸಮಾಲೋಚನೆ ನಡೆಸಿದಾಗ ಈ ವಿಷಯವನ್ನು ಸಂಸದರು ತಿಳಿಸಿದ್ದಾರೆ ಎಂದು ಹೇಳಿದರು.
ಕೇಂದ್ರದ ರೈಲ್ವೆ ಖಾತೆ ಸಚಿವ ಅಶ್ವಿನ ವೈಷ್ಠವ ಅವರೊಂದಿಗೆ ಖುದ್ದಾಗಿ ಮಾತನಾಡಿ ಈ ಮಾರ್ಗದ ಸರ್ವೆ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳಲು ವಿನಂತಿಸಿದ್ದೇವೆ ಎಂದು ಹೇಳಿದ್ದಾಗಿ ತಿಳಿಸಿದರು.
ಇದೇ ಸಮಯದಲ್ಲಿ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಸಮಿತಿ ಸದಸ್ಯರಾದ ಅರವಿಂದ ಲದ್ದಿಮಠ, ಶಿವನಗೌಡ ಪಾಟೀಲ, ಪುಂಡಲೀಕ ಹಡಲಗೇರಿ ಇದ್ದರು.