ಮುದ್ದೇಬಿಹಾಳ : ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆ, ಬೀಸಿದ ಬಿರುಗಾಳಿಗೆ ಹಲವೆಡೆ ಬೆಳೆಗಳು ನೆಲಕ್ಕಚ್ಚಿದ್ದು (Rain update) ಮರವೊಂದು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡ ಘಟನೆ ವರದಿಯಾಗಿದೆ.
Join Our Telegram: https://t.me/dcgkannada
ತಾಲ್ಲೂಕಿನ ಇಂಗಳಗೇರಿ ಗ್ರಾಮದಲ್ಲಿ ಶಂಕರಗೌಡ ಪಾಟೀಲ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಭಾರೀ ಬಿರುಗಾಳಿಗೆ ನೆಲಕ್ಕಚ್ಚಿದ್ದು ಲಕ್ಷಾಂತರ ರೂಪಾಯಿ ಕಬ್ಬು ಬೆಳೆ ಹಾನಿಯಾಗಿದೆ. (Rain update)

ಗುಡ್ನಾಳದಿಂದ ಇಂಗಳಗೇರಿಗೆ ಹೋಗುವ ರಸ್ತೆ ಮಧ್ಯೆ ಆಲದ ಗಿಡವೊಂದು ಉರುಳಿ ಬಿದ್ದು ಎರಡು ಗ್ರಾಮಗಳ ಸಂಪರ್ಕ ಅರ್ಧ ದಿನ ಬಂದ್ ಆಗಿತ್ತು.ಬಳಿಕ ಅರಣ್ಯ ಇಲಾಖೆ,ಪಂಚಾಯಿತಿಯವರು ಹಾಗೂ ಸ್ಥಳೀಯ ರೈತರ ಸಹಾಯದಿಂದ ರಸ್ತೆ ಮಧ್ಯೆ ಬಿದ್ದಿದ್ದ ಗಿಡವನ್ನು ತೆರವುಗೊಳಿಸಲಾಯಿತು.

ಮಧ್ಯರಾತ್ರಿ ಸುರಿದ ಮಳೆಯಿಂದಾಗಿ ವಿದ್ಯುತ್ ಸ್ಥಗಿತಗೊಳಿಸಲಾಯಿತು. ಮಧ್ಯರಾತ್ರಿಯೂ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸರಬರಾಜು ಮಾಡಲು ನಿದ್ದೆಬಿಟ್ಟು ಕೆಲಸ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಬೆಳೆ ಜಲಾವೃತ :
ತಾಲ್ಲೂಕಿನ ನಾಗರಬೆಟ್ಟ ಗ್ರಾಮದ ಮಾಳಪ್ಪ ಮುರಾಳ ಅವರ ಸರ್ವೆ ನಂ.102/2ರಲ್ಲಿ ಬೆಳೆದಿದ್ದ ತೊಗರಿ ಬೆಳೆ ಜಲಾವೃತಗೊಂಡಿದೆ.
ಅರಸನಾಳದಿಂದ ನಾಗರಬೆಟ್ಟದವರೆಗೆ ಕಾಲುವೆ ಕಾಮಗಾರಿ ಕೈಗೊಳ್ಳದೇ ಇರುವುದರಿಂದ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾಳಾಗುತ್ತಿದೆ.ಇದಕ್ಕೆ ಸರ್ಕಾರ ಕೂಡಲೇ ಮಧ್ಯೆಪ್ರವೇಶಿಸಿ ಪರಿಹಾರ ನೀಡಬೇಕು ಎಂದು ರೈತ ಮಾಳಪ್ಪ ಮುರಾಳ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಾಜಿ ಸಿಎಂ BSYಗೆ ಬಿಗ್ ರಿಲೀಫ್!
ಇನ್ನುಳಿದಂತೆ ಮುದ್ದೇಬಿಹಾಳ ತಾಲ್ಲೂಕಿನ ಬಹುತೇಕ ಎಲ್ಲ ಕಡೆ ಮಳೆಯಾಗಿದ್ದು ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ.