ಚಿಕ್ಕಬಳ್ಳಾಪುರ : ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಪ್ರಕರಣ ಘಟನೆ ಹಸಿಹಸಿಯಾಗಿರುವಾಗಲೇ, ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರದಲ್ಲಿ 65 ವರ್ಷದ ವೃದ್ಧೆಯ ಮೇಲೆ ಮುಸ್ಲಿಂ ಯುವಕನೊಬ್ಬ ಅತ್ಯಾಚಾರ ಎಸಗಿರುವ ಕುರಿತು ವರದಿಯಾಗಿದೆ.
Join Our Telegram: https://t.me/dcgkannada
ಆರೋಪಿಯನ್ನು ಚಿಂತಾಮಣಿ ನಗರದ ಹೈದರಾಲಿ ನಗರದ ಇರ್ಪನ್ ಎಂದು ಗುರುತಿಸಲಾಗಿದೆ.
ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ 65 ವರ್ಷದ ವೃದ್ಧೆ ರೋಗಿಯ ಮೇಲೆ 24 ವರ್ಷದ ಇರ್ಫಾನ್ ಎನ್ನುವ ಯುವಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಚಿಕಿತ್ಸೆಗೆ ಬಂದು ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ ಬಳಿ ಇದ್ದ ವೃದ್ಧೆ ಮೇಲೆ ಚಿಕಿತ್ಸೆಗೆ ಬಂದಿದ್ದ 24 ವರ್ಷದ ಯುವಕನಿಂದ ಈ ಅಮಾನವೀಯ ಘಟನೆ ನಡೆದಿದೆ.
ಇನ್ನು, ಅಸ್ವಸ್ಥ ವೃದ್ದೆಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂತೋಷ ಕುಮಾರ್ ಅವರು ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: CM vs HDK: ಕುಮಾರಸ್ವಾಮಿ ಬಂಧನ ಮಾಡ್ತೇವೆ ಎಂದ ಸಿಎಂ.. ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇನೆ ಎಂದ ಕೇಂದ್ರ ಸಚಿವ!